ನಗು ನಗುತ್ತಾ ಮನೆ ತುಂಬಾ ನಲಿದಾಡುತ್ತಿದ್ದ ಬಾಲೆ ಮುದ್ದಿನ ಮಗಳ ಸಂತೋಷಕ್ಕಾಗಿ ಬದುಕುತ್ತಿರುವ ತಂದೆ-ತಾಯಿ ಕುಟುಂಬ ಇದೀಗ ದುಃಖದ ಸಂಕಷ್ಟದಲ್ಲಿದೆ. ಇದು ನೆಲ್ಲಿಹುದಿಕೇರಿಯಲ್ಲಿ ಕಂಡು ಬಂದ ವಿದ್ಯಮಾನ. ಆಕೆಗಿನ್ನೂ ೧೨ ವಯಸ್ಸು, ಹೆಸರು ಪ್ರತೀಕ್ಷ. ಮನೆ ತುಂಬ ನಲಿದಾಡಿ, ಕುಣಿದಾಡುತ್ತಾ ಸಂತೋಷದಿAದ ತಂದೆ-ತಾಯಿಯ ಮುದ್ದಿನ ಮಗಳಾಗಿದ್ದಳು. ಈಕೆ ಓದಿನಲ್ಲಿ ಚೂಟಿ, ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದ ಬಾಲೆಯು ತಾನು ವಿದ್ಯೆ ಕಲಿತು ಮನೆಯ ಕಷ್ಟವನ್ನು ನೀಗಿಸುವುದಾಗಿ ಪದೇ ಪದೇ ಪೋಷಕರೊಂದಿಗೆ ಹೇಳುತ್ತಿದ್ದ ಪುಟ್ಟ ಬಾಲೆ, ಇದೀಗ ರೋಗದಿಂದ ಬಳಲುತ್ತಿರುವ ದೃಶ್ಯ ಕಂಡು ಬಂದಿದೆ. ನೆಲ್ಲಿಹುದಿಕೇರಿಯ ನಿವಾಸಿ ಪ್ರಮೋದ್ ಹಾಗೂ ಉಷಾ ದಂಪತಿಯ ಏಕೈಕ ಪುತ್ರಿ ಪ್ರತೀಕ್ಷ ಬಡ ಕುಟುಂಬವಾದರೂ ಟೈಲರ್ ವೃತ್ತಿಯಲ್ಲೇ ಸಂತೃಪ್ತರಾದ ತಂದೆ, ತಾಯಿ ಗೃಹಿಣಿಯಾಗಿದ್ದು, ತನ್ನ ಗಂಡನ ವೃತ್ತಿಗೆ ನೆರವಾಗುತ್ತಿದ್ದಳು. ಟೈಲರಿಂಗ್‌ನಲ್ಲಿ ಸಿಗುವ ಅಲ್ಪ ಹಣದಲ್ಲಿ ಕಷ್ಟಗಳನ್ನು ಮರೆತು ಮಗುವಿನೊಂದಿಗೆ ಸಂಸಾರ ಸಾಗಿಸುತ್ತಿದ್ದ ಪುಟ್ಟ ಕುಟುಂಬಕ್ಕೆ ಇದೀಗ ದುಃಖ ಉಮ್ಮಳಿಸಿದೆ.

ಇತ್ತೀಚೆಗೆ ಪ್ರತೀಕ್ಷಾಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪೋಷಕರು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಮಗುವಿನ ಕಾಲಿನ ಮೂಳೆಗೆ ಕ್ಯಾನ್ಸರ್ ರೋಗ ತಗುಲಿರುವುದು ಕಂಡು ಬಂದಿದೆ. ತಮ್ಮ ಮಗಳಿಗೆ ಮಾರಕ ಕಾಯಿಲೆ ತಗುಲಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಪ್ರಮೋದ್ ದಂಪತಿಗಳು ವಿಧಿಯ ನೆನೆದು ಕಣ್ಣೀರಿಡುತ್ತಿದ್ದಾರೆ. ವೈದ್ಯರ ಸಲಹೆಯಂತೆ ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಶಸ್ತç ಚಿಕಿತ್ಸೆ ಹಾಗೂ ಸೂಕ್ತ ಚಿಕಿತ್ಸೆಯಿಂದ ಮಗುವಿನ ರೋಗ ವಾಸಿ ಮಾಡಬಹುದೆನ್ನುವ ಭರವಸೆ ದೊರಕಿದೆ. ಚಿಕಿತ್ಸೆಗೆ ೨೧ ಲಕ್ಷಕ್ಕೂ ಅಧಿಕ ಹಣ ಖರ್ಚಾಗುವುದಾಗಿ ಹೇಳಿದ್ದಾರೆ. ಇದೀಗ ಪೋಷಕರಿಬ್ಬರು ಪ್ರತೀಕ್ಷಾಳಿಗಾಗಿ ಸಂಘ ಸಂಸ್ಥೆ, ಸ್ನೇಹಿತರ, ಸಂಬAಧಿಕರ ಸಹಕಾರ ಕೋರಿ ಮಗಳಿಗಾಗಿ ಜೀವ ಭಿಕ್ಷೆ ಬೇಡುತ್ತಿದ್ದಾರೆ. ಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಿ.

ಪ್ರತೀಕ್ಷ ವಿ.ಪಿ, ಯೂನಿಯನ್ ಬ್ಯಾಕ್ ಆಫ್ ಇಂಡಿಯಾ, ನೆಲ್ಲಿಹುದಿಕೇರಿ ಶಾಖೆ, ಖಾತೆ ಸಂಖ್ಯೆ ೫೨೦೧೦೧೨೫೮೧೯೨೨೦೦, ಐ.ಎಫ್.ಎಸ್.ಸಿ. ಕೋಡ್ ಯು.ಬಿ.ಐ.ಎನ್ ೦೯೦೩೬೦೪, ಮೊ. ೯೪೪೮೩೦೨೫೬೬.