ಶ್ರೀಮಂಗಲ, ಏ. ೨೦: ಮೈಸೂರು ಜೆ.ಎಸ್.ಎಸ್. ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂ.ಟೆಕ್ನಲ್ಲಿ ಪ್ರಥಮ ರ್ಯಾಂಕ್ನೊAದಿಗೆ ಚಿನ್ನದ ಪದಕ ಪಡೆದು ಕೀರ್ತನ್ ಮಾದಪ್ಪ ಸಾಧನೆ ಮಾಡಿದ್ದಾರೆ.
ಮೂಲತಃ ಹುದಿಕೇರಿ-ಕೋಣಗೇರಿ ಗ್ರಾಮದ ಪೊನ್ನಂಪೇಟೆಯಲ್ಲಿ ನೆಲೆಸಿರುವ ಪಾಲಿಬೆಟ್ಟ ನಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕುಪ್ಪಣಮಾಡ ನಂದಾ ಮಾದಪ್ಪ ಮತ್ತು ಗೋಣಿಕೊಪ್ಪ ಕಾವೇರಿ ಕಾಲೇಜು ಇಂಗ್ಲಿಷ್ ವಿಭಾಗದ ಹೆಚ್.ಓ.ಡಿ. ಅಸೋಸಿಯೇಟ್ಸ್ ಪ್ರೊಪೆಸರ್ ಭಾರತಿ (ತಾಮನೆ ಮೂಕಳೇರ) ದಂಪತಿಯ ಕಿರಿಯ ಪುತ್ರಿ. ಕೀರ್ತನ್ ಮಾದಪ್ಪ ಶ್ರೀಮಂಗಲ ಕುರ್ಚಿ ಗ್ರಾಮದ ಪೊನ್ನಂಪೇಟೆ ಸಿ.ಐ.ಟಿ. ಕಾಲೇಜಿನಲ್ಲಿ ಸಿಸ್ಟಮ್ ಅಡ್ಮಿನ್ ಆಗಿರುವ ಅಜ್ಜಮಾಡ ಅಭಿಷೇಕ್ ನಾಚಪ್ಪ ಅವರನ್ನು ವಿವಾಹವಾಗಿದ್ದಾರೆ. ಕೀರ್ತನ್ ಅವರು ಪೊನ್ನಂಪೇಟೆ ಸಿ.ಐ.ಟಿ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿ ಯರಿಂಗ್ ವಿಭಾಗದಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.