ಗೋಣಿಕೊಪ್ಪಲು, ಏ. ೨೦: ಕಂದಾಯ ಇಲಾಖೆ ವತಿಯಿಂದ ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ರೈತರ ಅದಾಲತ್, ತಾಲೂಕು ಮಟ್ಟದ ಕಚೇರಿಗಳಿಗೆ ತಿಂಗಳಿಗೆ ಎರಡು ಬಾರಿ ಜಿಲ್ಲಾ ಉಪ ವಿಭಾಗಾಧಿಕಾರಿ ಭೇಟಿ, ಸೇರಿದಂತೆ ಇನ್ನಿತರ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಸಂಘಟನೆ ಸಂಬAಧ ಪಟ್ಟವರ ಗಮನ ಸೆಳೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಹುದಿಕೇರಿಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ೭ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮನುಸೋಮಯ್ಯ, ಕಂದಾಯ ಇಲಾಖೆಯ ಸಮಸ್ಯೆಗಳು ಜಿಲ್ಲೆಯ ರೈತರನ್ನು ಕಂಗೆಡಿಸಿದೆ. ಇದರಿಂದ ತಿಂಗಳಿಗೆ ಒಂದರAತೆ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖಾಧಿಕಾರಿಗಳು ಸಭೆ ನಡೆಸಿ ಆ ಮೂಲಕ ಅಲ್ಲಿಯ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅದಾಲತ್ ಆಯೋಜಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ ಹೇರಲಾಗುವುದು. ತಾಲೂಕು ಮಟ್ಟದ ಕಚೇರಿಯಲ್ಲಿ ತಿಂಗಳಿಗೆ ಎರಡು ಬಾರಿ ಜಿಲ್ಲಾ ಕೇಂದ್ರದಿAದ ಉಪವಿಭಾಗಾ ಧಿಕಾರಿಗಳು ಆಗಮಿಸಿ ಕಡತಗಳಿಗೆ ಗೋಣಿಕೊಪ್ಪಲು, ಏ. ೨೦: ಕಂದಾಯ ಇಲಾಖೆ ವತಿಯಿಂದ ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ರೈತರ ಅದಾಲತ್, ತಾಲೂಕು ಮಟ್ಟದ ಕಚೇರಿಗಳಿಗೆ ತಿಂಗಳಿಗೆ ಎರಡು ಬಾರಿ ಜಿಲ್ಲಾ ಉಪ ವಿಭಾಗಾಧಿಕಾರಿ ಭೇಟಿ, ಸೇರಿದಂತೆ ಇನ್ನಿತರ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಸಂಘಟನೆ ಸಂಬAಧ ಪಟ್ಟವರ ಗಮನ ಸೆಳೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಹುದಿಕೇರಿಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ೭ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮನುಸೋಮಯ್ಯ, ಕಂದಾಯ ಇಲಾಖೆಯ ಸಮಸ್ಯೆಗಳು ಜಿಲ್ಲೆಯ ರೈತರನ್ನು ಕಂಗೆಡಿಸಿದೆ. ಇದರಿಂದ ತಿಂಗಳಿಗೆ ಒಂದರAತೆ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖಾಧಿಕಾರಿಗಳು ಸಭೆ ನಡೆಸಿ ಆ ಮೂಲಕ ಅಲ್ಲಿಯ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅದಾಲತ್ ಆಯೋಜಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ ಹೇರಲಾಗುವುದು. ತಾಲೂಕು ಮಟ್ಟದ ಕಚೇರಿಯಲ್ಲಿ ತಿಂಗಳಿಗೆ ಎರಡು ಬಾರಿ ಜಿಲ್ಲಾ ಕೇಂದ್ರದಿAದ ಉಪವಿಭಾಗಾ ಧಿಕಾರಿಗಳು ಆಗಮಿಸಿ ಕಡತಗಳಿಗೆ ವ್ಯಾಪ್ತಿಯ ರೈತ ಮುಖಂಡರಾದ ಚೆಪ್ಪುಡೀರ ಕಿರಣ್ ಸಭೆಯಲ್ಲಿ ಪ್ರಸ್ತಾಪಿಸಿದರು. ಪೌತಿ ಖಾತೆಗೆ ಸ್ವಾದೀನ ಅನುಭವ ಸಿಗಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ನ್ಯಾಯ ಸಿಗುವಂತಾಗಲು ಸಚಿವರನ್ನು ಭೇಟಿಯಾಗಲು ಸಲಹೆ ನೀಡಿದರು.

ಕಿರುಗೂರಿನ ರೈತ ಮುಖಂಡ ರಾದ ಕೊಂದೇAಗಡ ಸುರೇಶ್ ಚಂಗಪ್ಪ ಪ್ರಸ್ತಾಪಿಸಿ ೧೦ ಹೆಚ್.ಪಿ. ಉಚಿತ ವಿದ್ಯುತ್ ಬಗ್ಗೆ ಎಲ್ಲಿಯೂ ಕೂಡ ನಿಖರವಾಗಿ ಉತ್ತರ ಲಭ್ಯ ವಾಗುತ್ತಿಲ್ಲ. ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ಬಿಲ್ಲನ್ನು ಕಟ್ಟುವಂತೆ ತಿಳಿಸಿದ್ದಾರೆ. ಕೂಡಲೇ ಈ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟತೆ ಕೊಡಿಸು ವಂತೆ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಮನುಸೋಮಯ್ಯ ಸರ್ಕಾರದ ಮಟ್ಟದಲ್ಲಿ ಉಚಿತ ವಿದ್ಯುತ್ ನೀಡುವ ಬಗ್ಗೆ ಇನ್ನು ಅಧಿಕೃತ ಆದೇಶ ಚೆಸ್ಕಾಂ ಇಲಾಖೆಯ ಕೈಸೇರಿಲ್ಲ. ಸದ್ಯದಲ್ಲಿಯೇ ಈ ಬಗ್ಗೆ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾರ್ಷಿಕ ವರದಿಯನ್ನು ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ವಾರ್ಷಿಕ ಲೆಕ್ಕಪತ್ರವನ್ನು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಮಂಡಿಸಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಚೆಟ್ಟುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಅಶೋಕ್, ಸೋಮೆಯಂಗಡ ಗಣೇಶ್ ತಿಮ್ಮಯ್ಯ, ಚಂಗುಲAಡ ಸೂರಜ್, ಚಟ್ಟಂಗಡ ಕಂಬ ಕಾರ್ಯಪ್ಪ, ಅಪ್ಪಚಂಗಡ ಮೋಟಯ್ಯ, ಕರ್ತಮಾಡ ಸುಜು ಕರುಂಬಯ್ಯ, ಸೇರಿದಂತೆ ಇನ್ನಿತರರು ಸಂಘದ ಬೆಳವಣಿಗೆಯ ಬಗ್ಗೆ ಸಲಹೆ ನೀಡಿದರು. ಹುದಿಕೇರಿ ಗ್ರಾಮದ ಹಿರಿಯ ರೈತ ಮುಖಂಡರಾದ ಚೆಕ್ಕೇರ ಕಾಳಯ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಇಟ್ಟೀರ ಸಭಿತ ಭೀಮಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶಮಾಚಯ್ಯ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಡ್ಯಮಾಡ ಮನು ಸೋಮಯ್ಯನವರನ್ನು ರೈತ ಸಂಘದ ಸದಸ್ಯರು ಸಭೆಯಲ್ಲಿ ಸನ್ಮಾನಿಸಿ ಗೌರವಿಸಿದರು. ರೈತ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ, ಕಾವ್ಯ ಚೋಂದಮ್ಮ ಪ್ರಾರ್ಥಿಸಿದರು. ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್ ನಿರೂಪಿಸಿ, ಚಟ್ಟಂಗಡ ಕಂಬ ಕಾರ್ಯಪ್ಪ ವಂದಿಸಿದರು.

- ಹೆಚ್.ಕೆ. ಜಗದೀಶ್