ಸೋಮವಾರಪೇಟೆ, ಏ. ೨೦: ತಾ. ೧೫ ರಂದು ಹಾನಗಲ್ಲು ಗ್ರಾಮದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಫೇಸ್‌ಬುಕ್ ಲೈವ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿ, ಬೆಂಕಿ ಹಚ್ಚುವುದಾಗಿ ಅವಾಜ್ ಹಾಕಿದ್ದ ಯುವಕನನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಂಜನೇಯ ದೇವಾಲಯ ಸಮೀಪದ ನಿವಾಸಿ ಸಂಪತ್ ಅವರ ಮೇಲೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಕಿರಣ್ ಸೇರಿದಂತೆ ಇತರರು ಹಲ್ಲೆ ನಡೆಸಿದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಈ ಮಧ್ಯೆ ಮೂಲತಃ ಅಭಿಮಠ ಬಾಚಳ್ಳಿ ನಿವಾಸಿ, ಪ್ರಸ್ತುತ ಲೋರ‍್ಸ್ ಕಾಲೋನಿ ಬಳಿಯಲ್ಲಿ ನೆಲೆಸಿರುವ ಸಚಿನ್ ದೇವರಾಜ್ (೨೫) ಎಂಬಾತ ತಾ. ೧೬ ರಂದು ಫೇಸ್‌ಬುಕ್ ಲೈವ್‌ನಲ್ಲಿ ೧೨.೪೯ ನಿಮಿಷಗಳ ಕಾಲ ಮಾತನಾಡುತ್ತಾ, ಸೋಮವಾರಪೇಟೆ ಹಾಗೂ ಕೊಡಗು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅವಹೇಳನಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೂ ಅಲ್ಲದೇ, ಗೌಡ, ಲಿಂಗಾಯತ, ಮಲೆಯಾಳಿ ಜಾತಿಗಳನ್ನು ಆಗಾಗ್ಗೆ ಉಲ್ಲೇಖಿಸಿದ್ದ.

ಇದರೊಂದಿಗೆ ಶಾಸಕ ಅಪ್ಪಚ್ಚುರಂಜನ್, ಗುತ್ತಿಗೆದಾರರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಹೆಸರನ್ನು ಉಲ್ಲೇಖಿಸಿ ತನ್ನದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ. ಮುಂದುವರೆದು ಪೊಲೀಸರು ಸರಿಯಿಲ್ಲ. ಹಣ ಪಡೆದು ಎಫ್‌ಐಆರ್ ಮಾಡಿದ್ದಾರೆ ಎಂದು ಆರೋಪಿಸಿದ್ದೂ ಅಲ್ಲದೇ, ಅವಾಚ್ಯ ಪದ ಬಳಸಿ ಪೊಲೀಸರನ್ನು ನಿಂದಿಸಿದ್ದ.

ಸೋಮವಾರಪೇಟೆ ಪೊಲೀಸರು ಸರಿಯಿಲ್ಲ. ಅವ್ರು ಏನೂ ಮಾಡೋಕೆ ಆಗೋದಿಲ್ಲ. ಬೆಂಕಿ ಹಚ್ತೀವಿ. ಯೂತ್ ಕಾಂಗ್ರೆಸ್‌ನಿAದ ಬೆಂಕಿ ಹಚ್ತೀವಿ ಎಂದೆಲ್ಲಾ ಆವಾಜ್ ಹಾಕಿದ್ದ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಭಾರೀ ಚರ್ಚೆ ನಡೆಯಿತು. ಈ ಬಗ್ಗೆ ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರಪೇಟೆ ಪೊಲೀಸರು, ಸಚಿನ್ ದೇವರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ.

ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ಪ್ರವೀಣ್, ಜಗದೀಶ್, ಶಿವರಾಜ್ ಅವರುಗಳು ಆರೋಪಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ, ಫೇಸ್‌ಬುಕ್ ಲೈವ್‌ನಲ್ಲಿದ್ದ ದಿಮಾಕು ಇಳಿದು ನನ್ನಿಂದ ತಪ್ಪಾಯಿತು. ವೀಡಿಯೋ ನೋಡಿ ನಮ್ಮವರೇ ಬೈದಿದ್ದಾರೆ. ಅದಕ್ಕೆ ಡಿಲೀಟ್ ಮಾಡಿದ್ದೀನಿ ಎಂದು ಅದೇ ಸೋಮವಾರಪೇಟೆ ಪೊಲೀಸರ ಎದುರು ಬೇಡಿಕೊಂಡಿದ್ದಾನೆ.

ಈತನ ಮಾತಿಗೆ ಸೊಪ್ಪು ಹಾಕದ ಪೊಲೀಸರು, ಸಚಿನ್‌ನನ್ನು ವಶಕ್ಕೆ ಪಡೆದು ಸೋಮವಾರಪೇಟೆ ಪೊಲೀಸ್ ಠಾಣೆಗೆ ಕರೆತಂದು ತನಿಖೆಗೊಳಪಡಿಸಿ, ಧರ್ಮ, ಜನಾಂಗ, ಹುಟ್ಟಿದ ಸ್ಥಳ, ಭಾಷೆ ಇತ್ಯಾದಿಗಳ ಮೇಲೆ ಗುಂಪುಗಳ ನಡುವೆ ದ್ವೇಷ ಉಂಟು ಮಾಡುವುದು, ಗಲಾಟೆಗೆ ಕಾರಣವಾಗುವ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ.