ನಾಪೋಕ್ಲು, ಏ. ೨೦: ನಾಪೋಕ್ಲು ವಿಭಾಗಕ್ಕೆ ಕಳೆದ ಒಂದು ತಿಂಗಳಿನಿAದ ನಿರಂತರ ವಿದ್ಯುತ್ ಅಡಚಣೆಯನ್ನು ಖಂಡಿಸಿ ನಾಪೋಕ್ಲು ವಿಭಾಗದ ನಾಗರಿಕರು ಚೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿದರು.
ಈ ಸಂದರ್ಭ ಮಾತನಾಡಿದ ಕೆಟೋಳಿರ ಹರೀಶ್ ಪೂವಯ್ಯ, ಕಳೆದ ತಿಂಗಳಿನಿAದ ವಿದ್ಯುತ್ ನಿರಂತರವಾಗಿ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಎಕ್ಸ್ಪ್ರೆಸ್ ವೇ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಇದರಿಂದ ಯಾರಿಗೆ ಪ್ರಯೋಜ ವಾಗಿದೆ ಎಂದು ಪ್ರಶ್ನಿಸಿದರು.
ಕೂಡಲೇ ಈ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಜೂನಿಯರ್ ಇಂಜಿನಿಯರ್ ದಿನೇಶ್ ಮೇಲಾಧಿಕಾರಿ ಧÀನಂಜಯ ಅವರಿಗೆ ಪ್ರತಿಭಟನೆಯ ವಿಷಯವನ್ನು ತಿಳಿಸಿದಾಗ ತಾ. ೨೧ ರಂದು ನಾಪೋಕ್ಲುವಿಗೆ ಬಂದು ಸಾರ್ವಜನಿಕರಿಗೆ ಸಮಸ್ಯೆ ಬಗ್ಗೆ ತಿಳಿಸುವುದಾಗಿ ಹೇಳಿದ ಮೇರೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಶಿವಚಾಳಿಯಂಡ ಜಗದೀಶ್, ದವಸ ಭಂಡಾರದ ಅಧ್ಯಕ್ಷ ಕಂಗಾAಡ ಜಾಲಿ ಪೂವಪ್ಪ, ಕೊಡವ ಸಮಾಜದ ನಿರ್ದೇಶಕ ಕುಂಡ್ಯೋಳAಡ ವಿಸೂ ಪೂವಯ್ಯ, ಶಿವಚಾಳಿಯಂಡ ಪ್ರಸಾದ್ ತಿಮ್ಮಯ್ಯ, ಬಿ.ಜಿ.ಪಿ. ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಕುಂಡ್ಯೋಳAಡ ಮುತ್ತಣ್ಣ, ಕೆಟೋಳಿರ ಅಪ್ಪಚ್ಚ, ರವಿ ಭಟ್, ಅಚ್ಚಾಂಡೀರ ಸಾಬು ದೇವಯ್ಯ, ಕುಂಡ್ಯೋಳAಡ ತಮ್ಮಣಿ, ಕುಲ್ಲೇಟಿರ ರಾಜೇಶ್, ಕರ್ತಮಾಡ ವಿಜೂ, ಮತ್ತಿತರರು ಇದ್ದರು.