ಗೋಣಿಕೊಪ್ಪ ವರದಿ, ಏ. ೨೦: ಗಾಳಿ, ಮಳೆಗೆ ಮನೆ ಛಾವಣಿ ಹಾರಿ ಹೋಗಿ ನಷ್ಟ ಅನುಭವಿ ಸಿದ್ದ ಕೈಕೇರಿ ಗ್ರಾಮದ ಈರಣ್ಣ ಕಾಲೋನಿ ನಿವಾಸಿ ಚಂದ್ರನಾಯಕ್ ಅವರಿಗೆ ಕೈಕೇರಿ ಗ್ರಾಮ ಪಂಚಾ ಯಿತಿ ತಕ್ಷಣ ಸ್ಪಂದಿಸಿತು.

ಗುರುವಾರ ಬೀಸಿದ್ದ ಗಾಳಿಗೆ ನಷ್ಟ ಅನುಭವಿಸಿದ್ದ ಕಾರಣ ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಹಾರಿಹೋಗಿದ್ದ ಛಾವಣಿಗೆ ೧೪ ಶೀಟ್ ಹಾಕಿ ಕೊಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಜಮ್ಮಡ ಲವ ಭೀಮಯ್ಯ, ರೇಖಾ ಬಾಬು, ಮುತ್ತುರಾಜ್ ಇದ್ದರು