ಕುಶಾಲನಗರ, ಏ. ೨೦: ಜಿಲ್ಲಾಧಿಕಾರಿ ಚಾರುಲತ ಸೋಮಲ್, ಪೊಲೀಸ್ ವರಿಷ್ಠಾಧಿ ಕಾರಿ ಕ್ಷಮಾ ಮಿಶ್ರ ಕುಶಾಲನಗರ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿ ಕೋವಿಡ್ -೧೯ ನಿಯಮ ಉಲ್ಲಂಘನೆ ಮಾಡಿದ ೧೧ ಅಂಗಡಿಗಳಿಗೆ ಬೀಗ ಜಡಿಯಲು ಆದೇಶ ಮಾಡಿದ ಘಟನೆ ನಡೆದಿದೆ.

ರಥಬೀದಿಗೆ ತೆರಳಿದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ತಂಡ ಮಾಸ್ಕ್ ಧರಿಸದೆ ಅಂತರ ಕಾಪಾಡದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಸ್ಥಳದಲ್ಲಿದ್ದ ಪಂಚಾಯತಿ ಅಧಿಕಾರಿಗಳಿಗೆ ಅಂಗಡಿಗೆ ಬೀಗ ಜಡಿಯುವಂತೆ ಆದೇಶ ನೀಡಿದ್ದಾರೆ.

ಕಾರ್ಯಾಚರಣೆ ಸಂದರ್ಭದಲ್ಲಿ ತಹಶೀಲ್ದಾರ್ ಗೋವಿಂದರಾಜ್, ಪ್ರಕಾಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಮತ್ತಿತರರು ಇದ್ದರು. ನಿಯಮಾನುಸಾರ ದಂಡ ಕಟ್ಟಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಹಶೀಲ್ದಾರ್ ಗೋವಿಂದರಾಜ್ ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.