*ಸಿದ್ದಾಪುರ ಏ. ೧೯ : ವಾಲ್ನೂರು- ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮಸ್ಥರು ಸ್ವಚ್ಛತಾ ಶ್ರಮದಾನ ನಡೆಸುತ್ತಿದ್ದ ಸಂದರ್ಭ ಶಾಲೆಯ ಸ್ಥಳದಾನಿಗಳ ಸೊಸೆಯಂದಿರು ಆಕ್ಷೇಪ ವ್ಯಕ್ತಪಡಿಸಿ ಗೇಟಿಗೆ ಬೀಗ ಜಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಉಭಯ ಕಡೆಗಳ ದೂರು ದಾಖಲಿಸಿಕೊಂಡಿರುವ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಗ್ರಾಮಸ್ಥರು ಸ್ಥಳದಲ್ಲಿ ಹಾಜರಿದ್ದು ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳದಾನಿ ಲಿಂಗಪ್ಪ ಅವರ ಸೊಸೆಯಂದಿರು ಬಂದಿರಲಿಲ್ಲ.