ಮಡಿಕೇರಿ, ಏ. ೧೯: ಮಡಿಕೇರಿ ಕದನ ಎಂದೇ ಬಿಂಬಿತವಾಗಿರುವ ಮಡಿಕೇರಿ ನಗರಸಭೆಯ ೨೩ ವಾರ್ಡ್ಗಳಿಗೆ ತಾ. ೨೭ ರಂದು ನಡೆಯಲಿರುವ ಚುನಾವಣೆಗೆ ಸಂಬAಧಿಸಿದAತೆ ೪ ಮಂದಿ ಅಭ್ಯರ್ಥಿಗಳು ತಾವು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂಪಡೆದಿದ್ದು, ಅಂತಿಮವಾಗಿ ಚುನಾವಣಾ ಕಣದಲ್ಲಿ ೧೦೯ ಮಂದಿ ಅಭ್ಯರ್ಥಿಗಳಿದ್ದಾರೆ.ನಗರಸಭಾ ಚುನಾವಣೆ ಸಂಬAಧ ಒಟ್ಟು ೧೧೪ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ನಾಮಪತ್ರ ಪರಿಶೀಲನೆ ವೇಳೆ ಸೂಕ್ತ ದಾಖಲಾತಿ ನೀಡದ ಕಾರಣ ೧೬ನೇ ವಾರ್ಡ್ನ ಪಕ್ಷೇತರ ಅಭ್ಯರ್ಥಿ ನಚಿಕೇತ್ ಎಂಬವರ ನಾಮಪತ್ರ ತಿರಸ್ಕರಿಸಲ್ಪಟ್ಟು ೧೧೩ ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕರಿಸಲ್ಪಟ್ಟಿದ್ದವು. ನಾಮಪತ್ರ ಹಿಂತೆಗೆದುಕೊಳ್ಳಲು ಇಂದು ಅಂತಿಮ ದಿನವಾಗಿದ್ದು, ೪ ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊAಡಿದ್ದು, ಅಂತಿಮವಾಗಿ ಬಿಜೆಪಿಯಿಂದ ೨೩ ಮಂದಿ, ಕಾಂಗ್ರೆಸ್‌ನಿAದ ೨೩ ಮಂದಿ, ಜೆಡಿಎಸ್‌ನಿಂದ ೨೨ ಮಂದಿ, ಎಸ್‌ಡಿಪಿಐನಿಂದ ೯ ಮಂದಿ, ಆಮ್‌ಆದ್ಮಿಯಿಂದ ೪ ಮಂದಿ, ಕರ್ನಾಟಕ ರಾಷ್ಟç ಸಮಿತಿಯಿಂದ ೧ ಅಭ್ಯರ್ಥಿ ಹಾಗೂ ಪಕ್ಷೇತರರಾಗಿ ೨೭ ಮಂದಿ ಕಣದಲ್ಲಿದ್ದಾರೆ.ಬಿಜೆಪಿಗೆ ಬಂಡಾಯವಾಗಿ ವಾರ್ಡ್ ನಂ ೧೩ರಲ್ಲಿ ಸ್ಪರ್ಧಿಸಿದ್ದ ಅಜ್ಜೆಟ್ಟಿರ ದಿವ್ಯಾ ಲೋಕೇಶ್, ವಾರ್ಡ್ ೯ ರಲ್ಲಿ ಸ್ಪರ್ಧಿಸಿದ್ದ ಚಂದ್ರಿಕಾ ಸುಬ್ರಮಣಿ ನಾಮಪತ್ರ ಹಿಂಪಡೆದಿದ್ದಾರೆ. ಉಳಿದಂತೆ ವಾರ್ಡ್ ನಂ. ೧೦ ರಿಂದ ಪಿ.ಜಿ. ಸುಕುಮಾರ್, ವಾರ್ಡ್ ೨೨ ರಿಂದ ಕೆ.ಡಿ. ಆಶಲತಾ, ೬ನೇ ವಾರ್ಡ್ನಿಂದ ಆರ್. ಮಹೇಶ್ ಇವರುಗಳು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ೨ನೇ ವಾರ್ಡ್ನಿಂದ ವಿ.ಜಿ. ಮೋಹನ್, ೧೯ನೇ ವಾರ್ಡ್ನಿಂದ ಸುನಿಲ್ ನಂಜಪ್ಪ, ೨೨ನೇ ವಾರ್ಡ್ನಿಂದ ಬೆನಿಡಿಕ್ಟಾ ಲೋಬೋ,
(ಮೊದಲ ಪುಟದಿಂದ) ೧೧ನೇ ವಾರ್ಡ್ನಿಂದ ತಜಸುಂ ಕಣದಲ್ಲಿ ಉಳಿದಿದ್ದಾರೆ. ವಾರ್ಡ್ ನಂ. ೨೧ ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳಮುಖಿ ದೀಕ್ಷಾ ಅವರು ನಾಮಪತ್ರ ಹಿಂಪಡೆಯದೆ ಕಣದಲ್ಲಿ ಮುಂದುವರಿದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ವಾರ್ಡ್ ನಂ. ೭ ರಲ್ಲಿ ಬಿ.ಎಂ. ಹರೀಶ್, ವಾರ್ಡ್ ನಂ. ೨ರಲ್ಲಿ ಎ.ಕೆ. ಪಾಲಾಕ್ಷ ಇವರುಗಳು ಕೂಡ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.