ಶನಿವಾರಸಂತೆ. ಏ. ೧೯: ಶನಿವಾರಸಂತೆ ಸಮೀಪದ ತೋಯಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ದೇವಿರಮ್ಮ ತಾಯಿಯ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ವಿನೋದ್, ಸದಸ್ಯರಾದ ಕೃಷ್ಣ, ಕಾಂತಾ, ಚಂದನ್, ಅಶೋಕ್, ರಾಜು, ವಿನಯ್, ಅರ್ಚಕರಾದ ಶಿವಪ್ಪ, ಜಯಂತ್, ಪುಟ್ಟರಾಜ್ ಪೂಜಾ ಕೈಂಕರ್ಯ ನೆರವೇರಿಸಿದರು.