ಸೋಮವಾರಪೇಟೆ, ಏ. ೧೯: ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆ ಹಾಗೂ ಜನೌಷಧಿ ಕೇಂದ್ರದ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕ ರಿಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷೆ ಮಾಯಾಗಿರೀಶ್, ಮಾಜಿ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಪದಾಧಿಕಾರಿಗಳಾದ ಪವಿತ್ರ ಲಕ್ಷಿö್ಮÃಕುಮಾರ್, ಮಂಜುಳಾ ಸುಬ್ರಮಣಿ, ಎಂ.ಎ.ರುಬೀನಾ, ಜನೌಷಧಿ ಕೇಂದ್ರದ ಮಂಜುನಾಥ್ ಉಪಸ್ಥಿತರಿದ್ದರು. ಇದೇ ಸಂದರ್ಭ ಕೋವಿಡ್-೧೯ ಸೋಂಕು ನಿಯಂತ್ರಣದಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿ ಇಂದೂಧರ್ ಅವರನ್ನು ಸನ್ಮಾನಿಸಲಾಯಿತು