ಗೋಣಿಕೊಪ್ಪ ವರದಿ, ಏ. ೧೯: ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕೊಡವ ಕೌಟುಂಬಿಕ ಆಹ್ವಾನಿತ ತಂಡಗಳ ಕೊಟ್ಟಂಗಡ ಕ್ರಿಕೆಟ್ ಕಪ್ ಅನ್ನು ಮಂಡುವAಡ ಕುಟುಂಬ ಮುಡಿಗೇರಿಸಿಕೊಂಡಿದ್ದು, ಅಣ್ಣಳಮಾಡ (ಬಿರುನಾಣಿ) ತಂಡವು ರನ್ನರ್ ಅಪ್ ಸ್ಥಾನ ಅಲಂಕರಿಸಿತು. ಚೆಕ್ಕೇರ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಸೋಮವಾರ ನಡೆದ ಅಂತಿಮ ಹಣಾಹಣಿಯಲ್ಲಿ ಮಂಡುವAಡ ತಂಡವು ನಿಗದಿತ ೧೨ ಓವರ್‌ಗಳಿಗೆ ೫ ವಿಕೆಟ್ ನಷ್ಟಕ್ಕೆ ೧೦೫ ರನ್ ಕಲೆ ಹಾಕಿತು. ಅಣ್ಣಳಮಾಡ ೭ ವಿಕೆಟ್ ಕಳೆದುಕೊಂಡು ಕೇವಲ ೭೮ ರನ್ ಗಳನ್ನಷ್ಟೆ ದಾಖಲಿಸಿತು. ಇದರಿಂದಾಗಿ ಮಂಡುವAಡ ೨೭ ರನ್‌ಗಳ ಗೆಲುವು ಪಡೆಯಲು ಸಹಕಾರಿಯಾಯಿತು.ಅಣ್ಣಳಮಾಡ ತಂಡ ಕೊನೆಯ ೨ ಓವರ್‌ಗಳಲ್ಲಿ ಬಿಗಿ ಬೌಲಿಂಗ್ ದಾಳಿಯಿಂದ ಹಿಡಿತಕ್ಕೆ ತಂದರು. ಅಣ್ಣಳಮಾಡ ಅರುಣ್ ೨ ಮೇಡನ್ ಓವರ್ ಮೂಲಕ ಗಮನ ಸೆಳೆದರು.ಕೊಡವ ಕ್ರಿಕೆಟ್ ಇತಿಹಾಸದಲ್ಲಿ ೨ ಬಾರಿ ಫೈನಲ್‌ಗೆ ಪ್ರವೇಶಿಸಿದ್ದ ಮಂಡುವAಡ ತಂಡವು ಈ ಬಾರಿ ಗೆದ್ದು ಬೀಗುವ

(ಮೊದಲ ಪುಟದಿಂದ) ಮೂಲಕ ಚೊಚ್ಚಲ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ರನ್ನರ್ ಅಪ್ ಸ್ಥಾನ ಅಲಂಕರಿಸಿದ ಅಣ್ಣಳಮಾಡ ೪ ಬಾರಿ ಫೈನಲ್‌ಗೆ ಪ್ರವೇಶ ಪಡೆದಿದ್ದರೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮತ್ತೆ ಎಡವಿತು.

ಕೊಡವ ಕ್ರಿಕೆಟ್‌ನಲ್ಲಿ ೬ ಬಾರಿಯ ಚಾಂಪಿಯನ್ ಚೆಕ್ಕೇರ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು. ತಂಬುಕುತ್ತೀರ ವಿರುದ್ಧ ನಡೆದ ಪಂದ್ಯದಲ್ಲಿ ೮ ವಿಕೆಟ್‌ಗಳಿಂದ ಗೆಲುವು ಪಡೆದುಕೊಂಡಿತು.

ಟೂರ್ನಿಯಲ್ಲಿ ೧೭೩ ರನ್ ಗಳಿಸಿ, ೧೨ ವಿಕೆಟ್ ಪಡೆದ ಮಂಡುವAಡ ದರ್ಶನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಇದರೊಂದಿಗೆ ಪಂದ್ಯ ಶ್ರೇಷ್ಠ ಬಹುಮಾನ ಪಡೆದರು. ೨೦೮ ರನ್ ಸಂಪಾದಿಸಿದ ಚೆಕ್ಕೇರ ಆಕರ್ಶ್ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರು. ೧೧ ವಿಕೆಟ್ ಪಡೆದ ಅಣ್ಣಳಮಾಡ ಅರುಣ್ ಉತ್ತಮ ಬೌಲರ್, ಉತ್ತಮ ಫೀಲ್ಡರ್ ಬಹುಮಾನವನ್ನು ತಂಬುಕುತ್ತೀರ ಅರುಣ್, ಉತ್ತಮ ತಂಡ ಬಹುಮಾನವನ್ನು ಮೂಕೊಂಡ ತಂಡ ಪಡೆದುಕೊಂಡಿತು.

ಕೊರೊನಾಕ್ಕೆ ಬಲಿಯಾದ ಅಂತರಾಷ್ಟಿçÃಯ ಮಹಿಳಾ ತೀರ್ಪು ಗಾರ್ತಿ ಮುಂಡAಡ ಅನುಪಮ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ತಾಂತ್ರಿಕ ನಿರ್ದೇಶಕರಾಗಿ ಕೊಕ್ಕೇಂಗಡ ರಂಜನ್, ತೀರ್ಪುಗಾರರಾಗಿ ಆದೇಂಗಡ ಶಾಶ್ವತ್, ಅಳಮೇಂಗಡ ಮೋಹನ್ ಕಾರ್ಯನಿರ್ವಹಿಸಿದರು. ಕಾಂಡೇರ ದಾನಾ ಕುಶಾಲಪ್ಪ ವೀಕ್ಷಕ ವಿವರಣೆ ನೀಡಿದರು.

ತಾಂತ್ರಿಕ ವರ್ಗದ ಮಾಚಂಗಡ ದರ್ಶನ್, ಚೆಕ್ಕೇರ ನವೀನ್, ಆದೇಂಗಡ ಶಾಶ್ವತ್, ಅಳಮೇಂಗಡ ದಿಲಿಪ್, ಅಡ್ಡೇಂಗಡ ಆಕಾಶ್, ಅಳಮೇಂಗಡ ಸೋಮಯ್ಯ, ಕೊಟ್ಟಂಗಡ ಸೂರಜ್, ಅಳಮೇಂಗಡ ಮೋಹನ್, ಕೊಟ್ಟಂಗಡ ರಾಹುಲ್ ಅಭಿನಂದಿಸಲಾಯಿತು.

ಸಭಾ ಕಾರ್ಯಕ್ರಮ: ಬಹುಮಾನ ವಿತರಣೆ ಕಾರ್ಯಕ್ರಮವು ಕೊಟ್ಟಂಗಡ ಕುಟುಂಬ ಅಧ್ಯಕ್ಷ ಕೊಟ್ಟಂಗಡ ಮುದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಡವ ಕ್ರಿಕೆಟ್ ಪ್ರತಿಭೆ ಹೊರ ತರಲು ಗುಣಮಟ್ಟದ ಸ್ಟೇಡಿಯಂ ನಿರ್ಮಾಣ ಮಾಡಬೇಕಿದೆ ಎಂದು ಮುದ್ದಪ್ಪ ಈ ಸಂದರ್ಭ ಒತ್ತಾಯಿಸಿದರು.

ನಿವೃತ್ತ ಪ್ರಾಂಶುಪಾಲ ಇಟ್ಟೀರ ಕೆ. ಬಿದ್ದಪ್ಪ ಮತನಾಡಿ, ಕೊಡವ ಇತಿಹಾಸಕ್ಕೆ ೨ ಸಾವಿರಕ್ಕೂ ಅಧಿಕ ವರ್ಷದ ಇತಿಹಾಸವಿದೆ. ಜನಾಂಗಕ್ಕೆ ವಿಶೇಷವಾದ ಶಕ್ತಿ ಇದ್ದು, ಎಲ್ಲಾ ಕ್ಷೇತ್ರಗಳಲ್ಲೂ ಕೊಡವರು ಮುಂಚುಣಿಯಲ್ಲಿದ್ದಾರೆ. ಕ್ರೀಡೆ ದೇಶಪ್ರೇಮವನ್ನು ಹೆಚ್ಚಿಸುತ್ತದೆ. ಸ್ಥಳೀಯವಾಗಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆ ದೊರಕಿಸಿಕೊಡುವಂತೆ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದರು.

ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಮೊದಲ ಬಾರಿಗೆ ಕೊಡವ ಕ್ರಿಕೆಟ್ ಇತಿಹಾಸದಲ್ಲಿ ಚಾಂಪಿಯನ್ ತಂಡಗಳ ನಡುವೆ ಲೀಗ್ ಟೂರ್ನಿ ನಡೆದಿದೆ. ಯುವಕರ ಉತ್ಸಾಹ ಮೆಚ್ಚುವಂತದ್ದು ಎಂದರು.

ಈ ಸಂದರ್ಭ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪೆಮ್ಮಡ ಪೊನ್ನಪ್ಪ, ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಮೇಚಂಡ ಸಾಬು ಭಾಗವಹಿಸಿ ಬಹುಮಾನ ವಿತರಿಸಿದರು. ರೇವತಿ, ಪಾರ್ವತಿ, ರಮ್ಯ ಪ್ರಾರ್ಥಿಸಿದರು. ಕೊಟ್ಟಂಗಡ ಸುಬ್ಬಯ್ಯ ಸ್ವಾಗತಿಸಿದರು.