ಪೊನ್ನAಪೇಟೆ, ಏ.೧೮: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಿಗ್ಗಟ್ ನಾಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ವೇಣುಗೋಪಾಲ್ ಮಾಲೀಕತ್ವದ ಕಣ್ಣನ್ ಟೈಯರ್ಸ್ ತಂಡದ ವಿರುದ್ಧ ಸತೀಶ್ ಪಾಪು ಮಾಲೀಕತ್ವದ ಹುದಿಕೇರಿ ವಾರಿಯರ್ಸ್ ತಂಡ ೧೦ ವಿಕೆಟ್ ಗಳ ಭರ್ಜರಿ ಜಯಗಳಿಸುವ ಮೂಲಕ ಕಿಗ್ಗಟ್ ನಾಡ್ ಪ್ರೀಮಿಯರ್ ಲೀಗ್ನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ನಿಗದಿತ ೬ ಓವರ್ಗಳ ಪಂದ್ಯ ದಲ್ಲಿ ಮೊದಲು ಬ್ಯಾಟ್ ಮಾಡಿದ ಕಣ್ಣನ್ ಟೈಯರ್ಸ್ ೪೩ ರನ್ಗಳಿಗೆ ತನ್ನ ಆಟ ಮುಗಿಸಿತು. ಗೆಲ್ಲಲು ೪೪ ರನ್ ಗುರಿ ಬೆನ್ನಟ್ಟಿದ ಹುದಿಕೇರಿ ವಾರಿಯರ್ಸ್ ೪.೫ ಓವರ್ ಗಳಲ್ಲಿ ವಿಕೆಟ್ ನಷ್ಟ ವಿಲ್ಲದೆ ೪೬ ರನ್ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಕಣ್ಣನ್ ಟೈಯರ್ಸ್ ರನ್ನರ್ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ ತಂಡಕ್ಕೆ ೩೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಪಂದ್ಯ ಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಹುದಿಕೇರಿ ದಲ್ಲಿ ಮೊದಲು ಬ್ಯಾಟ್ ಮಾಡಿದ ಕಣ್ಣನ್ ಟೈಯರ್ಸ್ ೪೩ ರನ್ಗಳಿಗೆ ತನ್ನ ಆಟ ಮುಗಿಸಿತು. ಗೆಲ್ಲಲು ೪೪ ರನ್ ಗುರಿ ಬೆನ್ನಟ್ಟಿದ ಹುದಿಕೇರಿ ವಾರಿಯರ್ಸ್ ೪.೫ ಓವರ್ ಗಳಲ್ಲಿ ವಿಕೆಟ್ ನಷ್ಟ ವಿಲ್ಲದೆ ೪೬ ರನ್ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಕಣ್ಣನ್ ಟೈಯರ್ಸ್ ರನ್ನರ್ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ ತಂಡಕ್ಕೆ ೩೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಪಂದ್ಯ ಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಹುದಿಕೇರಿ ಅಣ್ಣಯ್ಯ, ಗ್ರಾ. ಪಂ. ಸದಸ್ಯರಾದ ಬೊಟ್ಟಂಗಡ ದಶಮಿ, ಕೆ. ವಿ. ರಾಮಕೃಷ್ಣ, ಮಾಜಿ. ತಾ. ಪಂ. ಸದಸ್ಯ. ಶಾಜಿ ಅಚ್ಚುತನ್, ಸೈಕೋಪಾತ್ ಚಿತ್ರದ ನಟ ಕರ್ತಮಾಡ ರತನ್ ಚಂಗಪ್ಪ, ದೈಹಿಕ ಶಿಕ್ಷಕ ಚೇಂದಿರ ಡ್ಯಾನಿ, ದಾನಿಗಳಾದ ಸಣ್ಣುವಂಡ ರಮೇಶ್, ಅಲ್ಲುಮಾಡ ಅಭಿಷೇಕ್, ಮಂಜು ಜಯಮ್ಮ, ಉದ್ಯಮಿಗಳಾದ ಪ್ರದೀಪ್, ಶರತ್, ಚಿಮ್ಮಿ ರೈ, ಎಂ. ಕೆ. ವಿಜು, ಪ್ರಣಯ್ ಹಾಗೂ ಇನ್ನಿತರರು ಹಾಜರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.
ತೀರ್ಪುಗಾರರಾಗಿ ಹರೀಶ್, ಶಾನ್, ಮಹೇಶ್ ಹಾಗೂ ನಿಖಿಲ್ ಕಾರ್ಯ ನಿರ್ವಹಿಸಿದರು. ಸ್ಕೋರರ್ ಆಗಿ ಸಾದ್ ಹಾಗೂ ಸಬಾಜ್ ಕಾರ್ಯನಿರ್ವಹಿಸಿದರು. ಪೊನ್ನಂಪೇಟೆಯ ಉತ್ಸಾಹಿ ಕ್ರೀಡಾ ಪ್ರೇಮಿಗಳಾದ ಸೈಕ್ಲೋನ್ ರಮೇಶ್, ಕಾಕಮಾಡ ಅಜೀತ್,ಸಾಜಿ ಅಚ್ಚುತನ್, ರಾಮಕೃಷ್ಣ, ವಿಜು,ಹ್ಯಾರಿ, ರವಿ, ಮನು, ಕುಮಾರ್ ಪಾರು ಹಾಗೂ ಸ್ನೇಹಿತರು ಪಂದ್ಯಾವಳಿಯನ್ನು ಆಯೋಜಿಸಿದ್ದರು. ಅಕ್ಷತ್, ಮಂಜು, ರಾಜೇಶ್, ಬಿಪಿನ್, ಸುನಿಲ್, ರೈನಾ, ಜಗದೀಶ್, ಮಹೇಂದ್ರ, ಅಪ್ಪು ಮುಂತಾದವರು ಪಂದ್ಯಾವಳಿಯ ಯಶಸ್ವಿಗೆ ಸಹಕಾರ ನೀಡಿದರು. ಮೂರು ದಿನಗಳ ಕಾಲ ನಡೆದ ಪಂದ್ಯದಲ್ಲಿ ೧೦ ತಂಡಗಳು ಭಾಗವಹಿಸಿದ್ದವು. ಪಳನಿ ವೀಕ್ಷಕ ವಿವರಣೆ ನೀಡಿದರು -ಚನ್ನನಾಯಕ