ಕೂಡಿಗೆ, ಏ. ೧೮: ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ ಶ್ರೀ ಮುತ್ತತ್‌ರಾಯ ದೇವಸ್ಥಾನ ಮತ್ತು ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ಮತ್ತು ಪೂಜಾ ಕಾರ್ಯಕ್ರಮ ತಾ. ೩೦ ರಂದು ನಡೆಯಲಿದೆ. ಇದರ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ ನವಗ್ರಹ ಶಾಂತಿ ಪೂಜೆ, ದುರ್ಗಿ ಶಾಂತಿ ಹೋಮ ಬಲಿಹರಣ ಪೂರ್ಣಾಹುತಿ ಶ್ರೀ ದೇವಿಗೆ ಪಂಚಾಮೃತ ಅಭಿಷೇಕ ಮತ್ತು ಅರ್ಚನೆ, ಮಧ್ಯಾಹ್ನ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ.

ರಾತ್ರಿ ೮ ಗಂಟೆಗೆ ಕಾವೇರಿ ನದಿಯಲ್ಲಿ ಕಲಶ ಪೂಜೆ ಹಣ್ಣಾಡಗೆ ಉತ್ಸವ ಮತ್ತು ಕೊಂಡೋತ್ಸವ ಮಧ್ಯರಾತ್ರಿ ಉಯ್ಯಾಲೆ ಮಹೋತ್ಸವ ನಡೆÀಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ತಿಳಿಸಿದ್ದಾರೆ.

ಮರುದಿನ ದಂಡಿನಮ್ಮ ದೇವಿಗೆ ಪೂಜೆ, ಮಹಾಮಂಗಳಾರತಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮುತ್ತತ್‌ರಾಯ ದೇವರ ಹರಿಸೇವೆ ಮಹೋತ್ಸವ ನಡೆಯಲಿದೆ.