ಗೋಣಿಕೊಪ್ಪ ವರದಿ, ಏ. ೧೮ ; ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಟ್ಟಂಗಡ ಕುಟುಂಬದ ವತಿಯಿಂದ ನಡೆಯುತ್ತಿರುವ ಕೊಡವ ಕೌಟುಂಬಿಕ ಆಹ್ವಾನಿತ ತಂಡಗಳ ಕೊಟ್ಟಂಗಡ ಕ್ರಿಕೆಟ್ ಕಪ್ ಅಂತಿಮ ಪಂದ್ಯ ತಾ. ೧೯ರಂದು (ಇಂದು)À ನಡೆಯಲಿದೆ.
ಅಣ್ಣಳಮಾಡ (ಬಿರುನಾಣಿ) ಮತ್ತು ಮಂಡುವAಡ ತಂಡಗಳು ಬೆಳಿಗ್ಗೆ ೧೧ ಗಂಟೆಗೆ ಮುಖಾಮುಖಿ ಯಾಗಲಿವೆ. ಆ ಮೂಲಕ ೧೧ ದಿನಗಳ ಕಾಲ ನಡೆದ ಟೂರ್ನಿ ಸಮಾರೋಪಗೊಳ್ಳಲಿದೆ.