ಕಾವೇರಿ ಪುರಾಣವನ್ನು ಈ ರೀತಿ ಹಾಡುವರು

ಬಾಳೊ, ಬಾಳೊ ನಂಗಡ - ಬಾಳು ಬಾಳು ನಮ್ಮಯ

ದೇವ ಬಾಳೊ ಮಾದೇವ - ದೇವನೆ ಬಾಳು ಮಹಾದೇವ

ಪಟ್ಟ ಬಾಳೊ ಸೂರಿಯ - ಪಟ್ಟದಲ್ಲಿರುವ ಸೂರ್ಯನೇ ಬಾಳು

ಕೂಡ ಬಾಳೊ ಚಣ್ಣೂರ - ಜೊತೆಗೆ ಚಂದ್ರನೇ ಬಾಳು

ಭೂಮಿ ಬಾಳೊ ಜಬ್ಬೂಮಿ - ಭೂಮಿ ಬಾಳಲಿ ಜನ್ಮ ಭೂಮಿ

ಕನ್ನಿ ಬಾಳೊ ಕಾವೇರಿ - ಕನ್ಯೆ ಬಾಳು ಕಾವೇರಿ

ಗಂಗೆ ಬಾಳೊ ತೀರ್‌ತ - ಗಂಗೆಯೇ ಬಾಳು ತೀರ್ಥದೇವಿ

ತೀರ್‌ತ ಕುಳಿಚಕ್ಕ - ತೀರ್ಥಸ್ನಾನ ಮಾಡಿದಾಗ

ಈ ಚೆರ್ ಮನ್‌ಸಂಡ - ಈ ನರ ಮನುಷ್ಯನ

ಕೆಜ್ಜ ಪಾಪ ಪೋಕುಲ - ಮಾಡಿದ ಪಾಪ ಹೋದೀತು

ಮೇಲೆ ಪಾಪ ಪೊದ್ದಲ - ಮತ್ತೆ ಪಾಪ ಅಂಟದು

ಪೊದ್ದ್ನ ಶನಿಯೆಲ್ಲ - ಹಿಡಿದ ಶನಿ ಗ್ರಹಚಾರವೆಲ್ಲ

ದೂರ ನೀಂಗಿ ನಿಕ್ಕುಲ - ದೂರ ನೀಗಿ ನಿಂತೀತು

ಕಾವರ‍್ಯಮ್ಮೆ ದೇವಿರ - ಕಾವೇರಿ ಮಾತೆ ದೇವಿಯ

ಸತ್ತಿಯ ಸ್ಥಳತ್‌ಲ್ - ಸತ್ಯದ ಸ್ಥಳದಲ್ಲಿ

ಸತ್ತಿಯ ನಡಪಕ್ಕ - ಸತ್ಯವೇ ಆಳುತ್ತಿರುವಾಗ

ಅನ್ನತ ನೆಲೆಯಾಪ - ಸತ್ಯವೇ ಇಲ್ಲಿ ನೆಲೆಗೊಂಡಿದೆ

ಕೇಳೊ ಕೇಳೋ ಸಂಙÁದಿ - ಕೇಳೋ ಕೇಳು ಗೆಳೆಯನೇ

ಸಂಙÁದಿ ಮನವೇಂಗಿ - ಸAಗಾತಿಯ ಮನವರಿತು

ಕೊಟ್ಟೊಂದ್ ಮರಿಕನ - ವಾದ್ಯವನ್ನು ನುಡಿಸೋಣ

ಪಾಟೊಂದ್ ತಿರ್‌ಕನ - ಹಾಡೊಂದನ್ನು ಹಾಡೋಣ

ಕೊಟ್ಟೊಂದ್ ಮರಿಪಕ್ಕ್ - ವಾದ್ಯವನ್ನು ನುಡಿಸಲು

ಬಟ್ಟಿ ಕೂಟೆ ಬೋಂಡಲ - ಬಟ್ಟೆ ಬುಟ್ಟಿ ತಾನೇಕೆ?

ಕತ್ತಿ ಮತ್ತ್ ತಾಂಬೋAಡ - ಕತ್ತಿ, ಕೊಡಲಿ ತಾನೇಕೆ ?

ಮುಲ್ಲೆ ಪೊವೆಳೆ ಪೊಂಗ - ಮಲ್ಲಿಗೆಯAಥ ಎಳೆ ಹೆಂಗಳೆಯರು

ಕೂಬಾಕಿ ಮರಿಚೋಲೆ - ಅನ್ನವನ್ನು ಬಸಿದಂತೆ

ಎಲ್‌Aಬಿಲ್ಲತ ನಾವ್‌ನ - ಎಲುಬಿಲ್ಲದ ನಾಲಿಗೆಯ

ನ್Ãಟಿತು ಮಡಕಿತು - ಚಾಚುತ್ತಾ ಮಡÀಚುತ್ತ

ಪಾಟೊಂದ್ ಮರಿಕನ - ಹಾಡಿನ ಗತಿಯನ್ನು ಬದಲಿಸುತ್ತಾ

ಕೊಟೊಂದ್ ಮರಿಕಣೆ - ವಾದ್ಯದ ಲಯವನ್ನು ಬದಲಿಸುತ್ತಾ

ಪಾಡುವ ತರ ಬೋರೆ - ಹಾಡುವಂಥ ವಿಧ ಬೇರೆ

ಎನ್ನ ಮೊಳಿ ಪಾಡನ ? - ಯಾವುದರ ಕುರಿತು ಹಾಡೋಣ ?

ಏದ್ ದಿಕ್ಕ್ ಪೋಕನ ? - ಯಾವ ದಿಕ್ಕಿನಲ್ಲಿ ಸಾಗೋಣ ? ಆರ್‌ನ ತುದಿಕನ ? - ಯಾರನ್ನು ಸ್ತುತಿಸೋಣ ?

ಅಲ್ಲತಾರೊ ಅಲ್ಲಲ - ಬೇರೆ ಯಾರೂ ತಾವೇಕೆ

ಕಾವರ‍್ಯಮ್ಮೆ ಮಾತಾಯಿ - ಕಾವೇರಿಯಮ್ಮ ಮಹಾತಾಯಿ

ಪುಟ್ಟ್ನ ಕಥೆ ಕೇಳ್ - ಹುಟ್ಟಿದ ಈ ಕಥೆ ಕೇಳು

ಅಕ್ಕು ಕೇಳ್ ಸಂಙÁದಿ - ಹೌದು ಕೇಳೋ ಗೆಳೆಯನೇ ತೇಂದುಳಿ ತೊರಮಾಂಗೆ - ಜೇನಿನAತ ಕಾಡು ಮಾವು ತಿಂದಿನೊ ಕೊದಿ ಪೋಗ - ತಿಂದರಾಸೆ ತೀರದು

ದೇವ ತಂದ ಪೂಮಾಲೆ - ದೇವರು ಕೊಟ್ಟ ಹೂ ಮಾಲೆ

ಚೂಡಿನೊ ಕೊದಿ ಪೋಗ - ಮುಡಿದರಾಸೆ ತೀರದು

ಪೊಂಗ ತುದೆಲೆ ಭೋಗ - ಪತ್ನಿ ಕೊಟ್ಟ ವೀಳ್ಯವ

ತಿಂದಿನೊ ಕೊದಿ ಪೋಗ - ಜಗಿದರಾಸೆ ತೀರದು

ಅವ್ವ ತಂದ ತಂಗೂಳ್ - ಅವ್ವ ಕೊಟ್ಟ ತಂಗೂಳು

ಉAಡಿನೊ ಕೊದಿ ಪೋಗ - ಉಂಡರಾಸೆ ತೀರದು

ಅಪ್ಪ ತಂದ ಕುಪ್ಪಿಯ - ಅಪ್ಪ ಕೊಟ್ಟ “ಕುಪ್ಪಿಯ”(ಕುಪ್ಪಸ)

ಇಟ್ಟಿನೊ ಕೊದಿ ಪೋಗ - ತೊಟ್ಟರಾಸೆ ತೀರದು

ಕಾವರ‍್ಯಮ್ಮೆ ದೇವಿನ - ಕಾವೇರಿಯಮ್ಮ ದೇವಿಯನು

ಪಾಡಿನೊ ಕೊದಿ ಪೋಗ - ಹಾಡಿದಷ್ಟೂ ಆಸೆ ತೀರದು

ಕೇಳೊ ಕೇಳೊ ಸಂಙÁದಿ - ಕೇಳೋ ಕೇಳು ಗೆಳೆಯನೇ

ಪಂಡ್-ಪAಡ್ ಕಾಲತ್ - ಅಂದು ಪೂರ್ವ ಕಾಲದಿ

ಕೃತಯುಗ ನಲ್ಲಾಲ್ - ಆ ದಿವ್ಯ ಕೃತಾಯುಗದಿ

ಕಶ್ಯಪ ಮಾಮುನಿಕ್ - ಮಹಾಮುನಿ ಕಶ್ಯಪಗೆ

ದಂಡಾಳಿAಜ ದೇವಿಯ - ಇಬ್ಬರಿದ್ದರು ಪತ್ನಿಯರು

ನೀಲ ಕೊಡಿ ದಿತಿಯು - ಗುಣವಂತೆಯು ದಿತಿಯು

ದೇವಕನ್ನಿ ಅದಿತಿ - ದೇವಕನ್ಯೆ ಅದಿತಿಯು

ಅಕ್ಕ ತಂಗೆ ದಂಡಾಳು - ಅಕ್ಕ ತಂಗಿಯರಿಬ್ಬರೂ

ತಣ್ಣನೆ ಪೊಲವಕ್ಕ - ಆನಂದದಿ ಬಾಳುತ್ತಿರುವಾಗ

ಕಾಲ ಮೂವಾಂಡಾಪಕ್ಕ - ಮೂರು ವರ್ಷ ಕಳೆವಾಗ

ಕನ್ನಿ ಪೊಲೆ ಕಂಡತ್ - ಋತು ಮತಿಯರಾದರು

ಆ ಪೊಲೆ ಕುಳಿಚಿತ್ - ಋತು ಸ್ನಾನ ಮುಗಿಸಿರಲು

ಮಕ್ಕ ಪೊಲೆ ಕಂಡತ್ - ಮತ್ತೆ ಮುಟ್ಟು ನಿಂತಿತು

ಆ ಪೊಲೆಯೊ ನಿಂದಿತ್ - ಮುಟ್ಟು ನಿಂತಿತಾಮೇಲೆ

ಅಕ್ಕ ತಂಗೆ ದಂಡಾಕು - ಅಕ್ಕ ತಂಗಿಯರಿಬ್ಬರು

ತಾAಗ್‌ನ ಕುಳಿಯಮೆ - ಗರ್ಭವತಿಯರಾದರು

ಆರೂ ನಾಲೂ ಕೂಡಣೆ - ಆರು ನಾಲ್ಕು ಸೇರಲು

ತಿಂಗ ಪತ್ತ್ ತ್Ãಂದತ್ - ಹತ್ತು ತಿಂಗಳಾಯಿತು

ಅನ್ನನಿಪ್ಪ ಕಾಲತ್ - ಕಾಲ ಹೀಗೆ ಕಳೆದಿರಲು

ನಲ್ಲೋರಾಚೆ ನಾಳಾಯಿ - ಶುಭ ದಿನವೊಂದರಲ್ಲೂ

ದೇವ ಕನ್ನಿ ಅದಿತಿ - ದೇವಕನ್ಯೆ ಅದಿತಿಯು

ದೇಬುವಳ ಪೆತ್ತತ್ - ದೇವತೆಯರಿಗೆ ಜನ್ಮವಿತ್ತಳು

ಅಕ್ಕಂಗೊತ್ತ ತಂಗಮ್ಮ - ಅಕ್ಕನAತೆ ತಂಗಿಯೂ

ನೀಲ ಕೊಡಿ ದಿತಿಯೊ - ಗುಣವಂತೆ ಆ ದಿತಿಯೂ

ರಾಕ್ರಾಸ್ಯಳ ಪೆತ್ತತ್ - ರಾಕ್ಷಸರಿಗೆ ಜನ್ಮ ವಿತ್ತಳು

ರಾಕ್ರಾಸ್ಯಳು ದೇಬುವ - ರಾಕ್ಷಸರು ದೇವತೆಯರು

ಆಳ್ ಕಾಳೆ ತೇಂದಿತ್ - ಬೆಳೆದು ದೊಡ್ಡವರಾಗುತ್ತಾ

ತಣ್ಣನೆ ಪೊಲವಕ್ಕ - ಸುಖದಿ ಬಾಳುತ್ತಿರಲಾಗ...

“ಚಾವದೂ ಪರಪದೂ - “ಹುಟ್ಟು ಸಾವು’’ ಎಂಬುದು

ಎAಗಕ್ ತರವಲ್ಲ - ನಮಗಿದು ತರವಲ್ಲ

ಈಂಗೆನ್ನ ಕೊಯಲೆನ್ನ ? - ಇದಕೇನು ಉಪಾಯವಿದೆ ?”

ಎಂದೆಣ್ಣಿ ಪರಂದಿತ್ - ಎAದು ಮಾತನಾಡುತ್ತಾ

ಬೇರಂಗೊAಡಳತತ್ - ಚಿAತೆಗೊAಡು ಕೂತರು

ಬೇರಂಗೊAಡಳತದ್ - ಚಿAತೆಗೊAಡು ಕೂತು

ನಾರಾಯಣ ದೇವೈಯ್ಯ - ಇದನ್ನರಿತ ನಾರಾಯಣ ದೇವ

ತಾನರಿಂಜಿಕೊAಡಿತ್ - ವಿಷಯವರಿತುಕೊAಡನು

ದೇಬುವಳ ಕಾಕಿತ್ - ದೇವತೆಯರನ್ನು ಕರೆಸಿಕೊಂಡು

ರಾಕ್ರಾಸ್ಯಳ ಕೂಟಿತ್ - ರಾಕ್ಷಸರನ್ನೂ ಸೇರಿಸಿ

ಈ ಬಾಕ್ ಪರಂದತ್ - ಈ ಮಾತನ್ನು ಹೇಳಿದನು

“ಜಬ್ಬೂಮಿರ ಮೀದಲ್’’ - ಈ ಭೂಮಿಯ ಮೇಲೆ

ಭೂಮಿಕೆಲ್ಲೊಯಂದದ್ - ಎಲ್ಲಕ್ಕಿAತಲೂ ಎತ್ತರದಲ್ಲಿ

ಮಹಮೇರು ಪರುವತ - ಮಹಾಮೇರು ಪರ್ವತವಿದೆ

ಆ ಕುಂದ್ ಪೊರಿಚಿತ್ - ಆ ಪರ್ವತವನ್ನು ಕಿತ್ತು ತಂದು

ಏಳ್ ಕಡಕಾಬರ - ಏಳು ಕಡಲಿನಾಚೆಗೆ

ಏಳ್ ಕಡಕೀಬರ - ಏಳು ಕಡಲಿನೀಚೆಗೆ

ನೆತ್ತಾಕಡ ಪಾಕಡ - ನೆತ್ತಿಗಡಲು ಹಾಲ್ಗಡಲು

ಪಾಕಡತ್ ತಾತಿತ್ - ಹಾಲ್ಗಡಲಲ್ಲಿ ನಿಲ್ಲಿಸಿರಿ

ಪಾಕಡ ಕಡಂದಿನೊ - ಹಾಲ್ಗಡಲನ್ನು ಮಥಿಸಿದರೆ

ಅಮೃತ ಪೊರಡುವ - ಅಮೃತ ಹೊರಗೆ ಬಂದೀತು

ಅಮೃತ ಕುಡಿಚಕ್ಕ - ಅಮೃತವನ್ನು ಕುಡಿದವರು

ಚಾವಂಡ ಪರಕಂಡ - ಹುಟ್ಟು ಸಾವಿನ ಚಕ್ರದಲ್ಲಿ ಸಿಲುಕದೆ

ತಣ್ಣನೆ ಪೊಲುವಲು” - ಸುಖದಿಂದ ಇರಬಹುದು”

ಎಂದೆಣ್ಣಿ ಪರಂದಿತ್ - ಎAದು ತಾನು ಹೇಳುತ್ತಾ

ಮುತ್ತಪ್ಪಣೆ ಮಾಡಣೆ - ಅಪ್ಪಣೆಯನ್ನು ಕೊಡಿಸಲು

ರಾಕ್ರಾಸಿಯ ದೇಬುವ - ರಾಕ್ಷಸರು ದೇವತೆಗಳು

ಚಂದೋಳ ಪೆರ್‌ಚಾಯಿ - ಆನಂದದಿAದ ಒಂದಾಗಿ

ಪಾಕಡ ಕಡಂದತ್ - ಹಾಲ್ಗಡಲನ್ನು ಮಥಿಸಿದರು

ಅಕ್ಕಣೆಕ್ ಮಮ್ಮಾಯ! - ಆಗ ಅದೇನು ಮಾಯೆ!

ಧನ್ವಂತರಿ ಪುಟ್ಟಿತ್ - ಧನ್ವಂತರಿಯು ಹುಟ್ಟುತ್ತಾ

ಪಾಕಡತಿಂಜೆದ್ದಿತ್ - ಹಾಲ್ಗಡಲಿನಿAದ ಎದ್ದು

ಅಮೃತೋಡೆ ಬಂದಿತ್ - ಅಮೃತದೊAದಿಗೆ ಹೊರಬಂದು

ಪೊAಗಲಶ ಪಾತ್ರನ - ಹೊಂಗಲಶ ಪಾತ್ರೆಯನ್ನು

ಅಲ್ಲಿ ಕೋಂದ್ ಬೆಕ್ಕಣೆ - ಅಲ್ಲಿಗೆ ತಂದು ಇಡಲಾಗ

ರಾಕ್ರಾಸಿಯ-ದೇಬುವ - ರಾಕ್ಷಸರು-ದೇವತೆಯರು

“ನಾಕ್ ನಾಕ್”ಂದೆಣ್ಣಿತ್ - ನನಗೆ ನನಗೆಂದೆನ್ನುತ್ತ

ಕೂರ್ ಪಡೆ ಪೊತ್ತಿತ್ - ಎಳೆದಾಡುತ್ತಾ ಹೊಡೆದಾಡಿ

ರಾಕ್ರಾಸಿಯ ಗೆದ್ದಿತ್ - ರಾಕ್ಷಸರೇ ಗೆದ್ದರು

ಪೊಂಗಲಶ ಕೊಂಡಿತ್ - ಹೊAಗಲಶ ಪಾತ್ರೆಯೊಂದಿಗೆ

ಅಲ್ಲಿAಜ ಪೊರಡಣೆ - ಅಲ್ಲಿಂದ ಹೊರಡಲು

ನಾರಾಯಣ ದೇವೈಯ್ಯ - ನಾರಾಯಣ ದೇವನು

ತಾನೆನ್ನ ಪಣಿ ಕೆಜ್ಜ - ತಾನೇನು ಮಾಡಿದನು

ಅಲ್ಲತೊಂದು ಅಲ್ಲಲ - ಅಲ್ಲದೇನೂ ತಾನಲ್ಲ

ಆಣ್ ರೂಪ ಬುಟ್ಟಿತ್ - ಗಂಡು ರೂಪವನ್ನು ತೊರೆದು

ಮೋಹಿನಿರ ರೂಪಾಯಿ - ಮೋಹಿನಿಯ ರೂಪದಿ

ಪೊಣ್ಣಾಯಿತ್ ನಿಂದತ್ - ಹೆಣ್ಣಾಗಿ ನಿಂತನು

ಅಕ್ಕಣೆಕ್ ಸಂಙÁದಿ - ಆಗ ತಾನು ಸಂಗಾತಿ

ಲಕ್ಷಿö್ಮದೇವಿ ಮಾತಾಯಿ - ಲಕ್ಷಿö್ಮÃ ದೇವಿ ಮಹಾತಾಯಿ

ಪಾರ್ವತ್ಯಮ್ಮೆ ದೇವಿರ - ಪಾರ್ವತಿ ದೇವಿಯಂಶದ

ಮಮ್ಮಾಯವತಾರ - ಮಾಯದೊAದು ಅವತಾರ

ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನು

ಕೂಟ್‌ಕ್ ತೊಣೆಯಾಯಿ - ಒಟ್ಟಿಗೆ ಜೊತೆ ಮಾಡಿ

ಅಲ್ಲಿಕೆ ಅಯಚತ್ - ಅಲ್ಲಿಗೆ ಕಳುಹಿಸಿದನು

ದೇವಿಯಳು ದಂಡಾಳು - ದೇವಿಯರಿಬ್ಬರೂ

ಜೋಡೊತ್ತಿತ್ ಪೋಕಣೆ - ಜೊತೆಯಾಗಿ ಹೋಗುತ್ತಿರಲು

ರಾಕ್ರಾಸಿಯ ಕಂಡಿತ್ - ರಾಕ್ಷಸರು ಇವರನ್ನು ನೋಡಿ

ಚಾಯಿಕ್ ಮರ್‌ಳಾಯಿ - ಚಂದಕ್ಕೆ ಮರುಳಾಗಿ

“ನಾಕ್ ನಾಕ್”ಂದೆಣ್ಣಿತ್ - “ನನಗೆ ನನಗೆ” ಎನ್ನುತ್ತಾ

ಅಮೃತೋಡೆ ಪಾತ್ರನ - ಅಮೃತದ ಪಾತ್ರೆಯನ್ನು

ಮೋಹಿನಿಕ್ಕೊಡ್‌ತತ್. - ಮೋಹಿನಿಗೆ ಕೊಟ್ಟರು

ಅದ್ ಕಂಡ ಮೋಹಿನಿ - ಅದನ್ನು ಕಂಡ ಮೋಹಿನಿ

ಪೊಂಗಲಶ ಪಾತ್ರನ - ಹೊಂಗಲಶ ಪಾತ್ರೆಯನ್ನು

ದೇಬುವಕ್ಕೊಡ್‌ತತ್. - ದೇವತೆಯರಿಗೆ ಕೊಟ್ಟಳು

ದೇಬುವಕ್ಕೊಡ್‌ತಿತ್ - ದೇವತೆಯರಿಗೆ ಕೊಟ್ಟು

ಅಲ್ಲಿಂಜಿ ಪೊರಟಿತ್ - ಅಲ್ಲಿಂದ ಹೊರಡುತ್ತಾ

ಸಹ್ಯಮಲಕ ಊರ್‌ಲ್ - ಸಹ್ಯಮಲಕ ಊರಲ್ಲಿ

ಕಲ್ಲಾಯಿ ಮರಿಂಜತ್. - ಕಲ್ಲಾಗಿ ನೆಲೆ ನಿಂತಳು

ಕೇಳೊ ಕೇಳೊ ಬೆಂದುವೆ - ಕೇಳೋ ಕೇಳು ನೆಂಟನೇ

ಆ ಕಲ್ಲ್ ನಡುಕಾಲೆ - ಆ ಕಲ್ಲಿನ ನಡುವಿನಿಂದ

ನುಗ್ಗಲು ಪೊರಡಲು; - ನುಗ್ಗಿ ಹೊರ ಬರಬಹುದು

ನುಗ್ಗಿತ್ ಪೊರಟನೊ - ಹೀಗೆ ನುಗ್ಗಿ ಹೊರಟರೆ

ಕೆಜ್ಜ ಪಾಪ ಪೋಪಲ; - ಮಾಡಿದ ಪಾಪ ಕಳೆದೀತು

ಮೇಲೆ ಪಾಪ ಪೊದ್ದುಲೆ; - ಮಾಡಿದ ಪಾಪ ಬರಲಾರದು

ಅನ್ನತ ನೆಲೆಯಾಪ - ಅಂಥ ಕ್ಷೇತ್ರ ತಾನದು

ಇಞÆ್ಞ ಕೇಳೊ ಸಂಙÁದಿ - ಇನ್ನೂ ಕೇಳು ಸಂಗಾತಿ

ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನ್ನು

ಲಕ್ಷಿö್ಮದೇವಿ ಕೊಂಡಿತ್ - ಲಕ್ಷಿö್ಮÃ ದೇವಿಯು ಪಡೆಯುತ್ತಾ

ನಾಲ್ ಮಂಡೆ ಬ್ರಹ್ಮಂಗ್ - ನಾಲ್ಕು ಶಿರದ ಬ್ರಹ್ಮನಿಗೆ

ದತ್ತ್ ಮೋವಂದೆಣ್ಣಿತ್ - ದತ್ತು ಮಗಳೆಂದೆನ್ನುತ್ತಾ

ಕೈನ್Ãಟಿ ಕೊಡ್‌ತತ್. - ಕೈ ನೀಡುತ್ತಾ ಕೊಟ್ಟಳು

ಅದ್ ಕಂಡ ಬ್ರಹ್ಮನ್ - ಇದನ್ನರಿತ ಬ್ರಹ್ಮ ದೇವನು

ಚಂದೋಳ ಪೆರ್‌ಜಾಯಿ-ಸಂತೋಷಗೊಳ್ಳುತ್ತಾ

ಲೋಪಾಮುದ್ರೆ ದೇವಿನ-ಲೋಪಾಮುದ್ರೆ ದೇವಿಯನ್ನು

ಕೊಂಡಾಟತ್ ಚಾಕ್‌ಚಿ-ಪ್ರೀತಿಯಿಂದ ಸಾಕಿದನು.

(ಮುಂದುವರಿಯುವುದು)

ಕನ್ನಡಾನುವಾದ : - ನಾಗೇಶ್ ಕಾಲೂರು.