ಮಡಿಕೇರಿ, ಏ. ೧೫ : ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪ್ರಥಮ ವರ್ಷದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದು, ಈಗಾಗಲೇ ಅತಿಥೇಯ ವೈಲ್ಡ್ ಮಾಸ್ಟರ‍್ಸ್ ತಂಡ ಫೈನಲ್ ಪ್ರವೇಶ ಮಾಡಿದ್ದು, ತಾ. ೧೬ರಂದು ಬೆಳಿಗ್ಗೆ ೯ ಗಂಟೆಗೆ ೨ನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಎರಡು ಬಲಿಷ್ಠ ತಂಡಗಳಾದ ಆಳ್ವಾಸ್ ಮತ್ತು ಮೂನ್ ಸ್ಟರ‍್ಸ್ ನಡುವೆ ನಡೆಯಲಿದೆ. ಇಂದು ಮಧ್ಯಾಹ್ನ ೧೨ ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದ್ದು, ಬಳಿಕ ಬಹುಮಾನ ವಿತರಣೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.