ಕಡಂಗ, ಏ. ೧೫: ಕಳೆದ ೯ ದಿನಗಳಿಂದ ಸರ್ಕಾರಿ ಸಾರಿಗೆ ಸಿಬ್ಬಂದಿಗಳು ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸಲು ನಡೆಸುತ್ತಿರುವ ಸಾರಿಗೆ ಮುಷ್ಕರ ಹಿನ್ನೆಲೆ ಪ್ರಯಾಣಿಕರು ತಮ್ಮ ಊರುಗಳಿಗೆ ತಲುಪಲು ಬಸ್ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.
ಕೊಡಗಿನ ಪ್ರಮುಖ ವಾಣಿಜ್ಯ ನಗರಿ ಗೋಣಿಕೊಪ್ಪಲುವಿನಿಂದ ದಿನಕ್ಕೆ ಬೆಂಗಳೂರು ಮತ್ತು ಮೈಸೂರು ಕಡೆಗೆ ಸಾವಿರಾರು ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದು, ಸಾರಿಗೆ ಮುಷ್ಕರದಿಂದ ಪ್ರಯಾಣಿಕರು ಕಂಗಾಲಾಗಿದ್ದು ಇದನ್ನು ಗಮನಿಸಿದ ಕೆಲವು ಖಾಸಗಿ ಮಿನಿ ಬಸ್ ಮಾಲೀಕರು ಗೋಣಿಕೊಪ್ಪದಿಂದ ಮೈಸೂರು ಕಡಗೆ ತೆರಳುವ ಪ್ರಯಾಣಿಕರಿಗೆ ಮಿನಿ ಬಸ್ ಮೂಲಕ ಪ್ರಯಾಣ ಮಾಡಲು ಸೌಕರ್ಯಗಳನ್ನು ಒದಗಿಸಿಕೊಡುವ ಮುಖಾಂತರ ಪ್ರಯಾಣಿಕರಿಗೆ ಒಂದಿಷ್ಟು ಅನುಕೂಲವಾಗಿದೆ.
ಸಾರಿಗೆ ಮುಷ್ಕರ ಮುಗಿಯವರೆಗೂ ಖಾಸಗಿ ಬಸ್ಗಳ ಸೇವೆ ಮುಂದುವರೆಯುತ್ತೆ ಎಂದು ಖಾಸಗಿ ಬಸ್ ಮಾಲೀಕರುಗಳು ತಿಳಿಸಿದ್ದಾರೆ.
-ನೌಫಲ್ ಕಡಂಗ