ಮಡಿಕೇರಿ, ಏ. ೧೫: ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌAಡ್ ಬಳಿ ಇರುವ ಶ್ರೀ ಕಾವೇರಿ ಭಕ್ತ ಮಂಡಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದ ರೂ. ೫ ಲಕ್ಷದ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ನಗರಸಭಾ ಮಾಜಿ ಸದಸ್ಯ ಕೆ.ಎಸ್. ರಮೇಶ್, ಬಿಜೆಪಿ ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಖಜಾಂಚಿ ಎಸ್. ಮುರುಘನ್, ಭಜರಂಗದಳದ ಚೇತನ್, ಅರುಣ್ ಕೂರ್ಗ್ ಇನ್ನಿತರರಿದ್ದರು.