ಚೆಂಬು, ಏ. ೧೫: ಶ್ರೀ ಭಗವಾನ್ ಸಂಘ ಊರುಬೈಲು, ಇದರ ೨೦೨೧-೨೨ ಸಾಲಿನ ನೂತನ ಅಧ್ಯಕ್ಷರಾಗಿ ದಿನೇಶ್ ಸಣ್ಣಮನೆ, ಕಾರ್ಯದರ್ಶಿಯಾಗಿ ಯತೀಶ್ ಹನಿಯಡ್ಕ ಆಯ್ಕೆಯಾದರು. ಸಂಘದ ಕಚೇರಿ ಭಗವಾನ್ ಫಾರ್ಮ್ಸ್ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದೆ ಮಂಡಿಸಿ, ಅನುಮೋದನೆ ಪಡೆಯಲಾಯಿತು. ಮುಂದಿನ ಅವಧಿಯ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಯಿತು. ನಿಕಟಪೂರ್ವ ಅಧ್ಯಕ್ಷ ರವಿರಾಜ್ ಹೊಸೂರು ಮತ್ತು ಕಾರ್ಯದರ್ಶಿ ಶಶಿಧರ್ ಎಕ್ಕಡ್ಕ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಪಯಸ್ವಿನಿ ಸೊಸೈಟಿ ಅಧ್ಯಕ್ಷ ಅನಂತ್ ಊರುಬೈಲ್, ಮಾಜಿ ಅಧ್ಯಕ್ಷ ಪ್ರಶಾಂತ್ ಊರುಬೈಲು, ಯಶವಂತ ನಾರಾಲು ಇದ್ದರು.