*ಸಿದ್ದಾಪುರ, ಏ.೧೬ : ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮಸ್ಥರು ಸ್ವಚ್ಛತಾ ಶ್ರಮದಾನ ನಡೆಸುತ್ತಿದ್ದ ಸಂದರ್ಭ ಶಾಲೆಯ ಸ್ಥಳದಾನಿಗಳ ಸೊಸೆಯಂದಿರು ಆಕ್ಷೇಪ ವ್ಯಕ್ತಪಡಿಸಿ ಗೇಟಿಗೆ ಬೀಗ ಜಡಿದ ಪ್ರಕರಣ ವಾಲ್ನೂರು- ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬAಧಿಸಿದAತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಉಭಯ ಕಡೆಯಿಂದ ದೂರು ದಾಖಲಾಗಿದೆ.
ವಾಲ್ನೂರು- ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಶುಚಿತ್ವದ ವಾತಾವರಣವಿದ್ದ ಕಾರಣ ಗ್ರಾಮಸ್ಥರು ಸ್ವಚ್ಛತಾ ಶ್ರಮದಾನದಲ್ಲಿ ತೊಡಗಿದ್ದರು. ಈ ಸಂದರ್ಭ ದಿಢೀರ್ ಆಗಿ ಶಾಲಾ ಆವರಣಕ್ಕೆ ಪ್ರವೇಶಿಸಿದ ಶಾಲೆಗೆ ಸ್ಥಳದಾನ ಮಾಡಿದ ಲಿಂಗಪ್ಪ ಎಂಬವರ ಸೊಸೆಯಂದಿರಾದ ಗ್ರಾ.ಪಂ ಮಾಜಿ ಅಧ್ಯಕ್ಷೆ ನಾಗರತ್ನ, ಕಮಲಮ್ಮ, ದಮಯಂತಿ ಹಾಗೂ ಬೇಬಿ ಅವರುಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದು ನಮಗೆ ಸೇರಿದ ಭೂಮಿಯಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ, ಆದ್ದರಿಂದ ಯಾರೂ ಯಾವುದೇ ಕಾಮಗಾರಿ ಅಥವಾ ಶ್ರಮದಾನ ನಡೆಸಬಾರದೆಂದು ಆಕ್ಷೇಪ ವ್ಯಕ್ತಪಡಿಸಿದರು.
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಲಿಂಗಪ್ಪ ಅವರು ಶಾಲೆ ನಿರ್ಮಾಣಕ್ಕೆ ಸ್ಥಳದಾನ ಮಾಡಿ ೭೦ ವರ್ಷಗಳಾಗಿದೆ. ಈ ಜಾಗವನ್ನು ನೀಡಿದ್ದಕ್ಕೆ ಬದಲಾಗಿ ಬೇರೊಂದು ಪ್ರದೇಶದಲ್ಲಿ ಭೂಮಿ ನೀಡಲಾಗಿದೆ. ೭೦ ವರ್ಷಗಳ ಕಾಲ ಸುಮ್ಮನಿದ್ದವರು ಈಗ ಬಂದು ಜಗಳ ಮಾಡುವುದು ಸರಿಯಲ್ಲವೆಂದರು.
ಈ ಸಂದರ್ಭ ನಾಲ್ವರು ಸೊಸೆಯರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಅತಿರೇಕಕ್ಕೆ ತಲುಪಿತಲ್ಲದೆ ಅವಾಚ್ಯ ಶಬ್ಧಗಳ ಬಳಕೆಯೂ ಆಯಿತು. ಶಾಲಾ ಗೇಟಿಗೆ ಬೀಗ ಜಡಿದ ಸೊಸೆಯರು ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಗ್ರಾಮಸ್ಥರ ವಿರುದ್ಧ ದೂರು ನೀಡಿದರು. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಕೂಡ ಪ್ರತಿದೂರು ದಾಖಲಿಸಿದರು.
ನಾಲ್ವರು ಸೊಸೆಯರು ಮಾತ್ರ ಇದು ಮಾವ ಲಿಂಗಪ್ಪ ಅವರಿಗೆ ಸೇರಿದ ಆಸ್ತಿಯಾಗಿದ್ದು, £
ಸೇರಬೇಕೆಂದು ಪಟ್ಟು ಹಿಡಿದಿದ್ದಾರೆ.