* ವೀರಾಜಪೇಟೆ, ಏ. ೧೫: ವೀರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ನೂತನ ಕಚೇರಿ ಹಾಗೂ ದೇವರ ಕೋಲ ಕಟ್ಟುವ ಕೊಠಡಿ ಇಂದು ಉದ್ಘಾಟನೆಗೊಂಡಿತು.

ಅAದಾಜು ರೂ. ೧೭ ಲಕ್ಷ ವೆಚ್ಚದಲ್ಲಿ ಮುತ್ತಪ್ಪ ದೇವಾಲಯದ ನೂತನ ಕಚೇರಿ ಹಾಗೂ ದೇವರ ಕೋಲ ಕಟ್ಟುವ ಕೊಠಡಿಯನ್ನು ನಿರ್ಮಾಣ ಮಾಡಲಾಗಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕಟ್ಟಡವನ್ನು ಉದ್ಘಾಟನೆ ಮಾಡಬೇಕಾಗಿತ್ತು. ಶಾಸಕರು ತುರ್ತು ಕಾರ್ಯನಿಮಿತ್ತ ಬೇರೆಡೆ ತೆರಳಿದ ಕಾರಣ ಚೈತನ್ಯಮಠಪುರ ಮುತ್ತಪ್ಪ ದೇವಾಲಯದ ಅಧ್ಯಕ್ಷರು ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಆದ ಇ.ಸಿ. ಜೀವನ್ ಅವರು ನೂತನ ಕಟ್ಟಡವನ್ನು ಟೇಪು ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು.

ಕಟ್ಟಡ ನಿರ್ಮಾಣಕ್ಕಾಗಿ ಎಂ.ಎಲ್.ಸಿ ನಿಧಿಯಿಂದ ಮೂರು ಲಕ್ಷ ಹಣ ನೀಡಲಾಗಿದ್ದು, ಶಾಸಕ ಕೆ.ಜಿ. ಬೋಪಯ್ಯ ಶಾಸಕರ ನಿಧಿಯಿಂದ ಹತ್ತು ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುತ್ತಪ್ಪ ದೇವಾಲಯದ ಅಧ್ಯಕ್ಷ ಇ.ಸಿ. ಜೀವನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಜರಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸಜೇಶ್ ಭರತನ್, ಭಕ್ತಾದಿಗಳು ಹಾಜರಿದ್ದರು.