ಮಡಿಕೇರಿ, ಏ. ೧೫: ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ, ಕರ್ನಾಟಕ ಜಾನಪದ ಪರಿಷತ್ ಸೊಮವಾರಪೇಟೆ ತಾಲೂಕು ಘಟಕದ ಕಾರ್ಯದರ್ಶಿ, ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಮಹಿಳಾ ವಿಭಾಗದ ಅಧ್ಯಕ್ಷೆ, ನಮ್ಮ ಕೊಡಗು ತಂಡದ ಸದಸ್ಯೆ, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಪ್ರೋಗ್ರಾಮ್ ವೈಸ್ ಪ್ರೆಸಿಡೆಂಟ್, ಲೇಖಕರೂ ಆಗಿರುವ ಸೋಮವಾರಪೇಟೆಯ ರುಬೀನಾ ಎಂ.ಎ. ಇವರ ಸಾಮಾಜಿಕ ಸೇವಾ ಸಾಧನೆ ಪರಿಗಣಿಸಿ ಟಿವಿ ೪ ನ್ಯೂಸ್ ಚಾನಲ್ ಮತ್ತು ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಸಂಸ್ಥೆಯಿAದ ಕೊಡಮಾಡುವ ಕರ್ನಾಟಕದ ಅತ್ಯುತ್ತಮ ಮಹಿಳಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೇ ೨೪ ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ.