ಕೊಡ್ಲಿಪೇಟೆ, ಏ. ೧೬: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕ್ಯಾತೆ ಗ್ರಾಮದಲ್ಲಿರುವ ಸುಗ್ಗಿ ಕಟ್ಟೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಗ್ರಾ.ಪಂ. ಅಧ್ಯಕ್ಷ ವಿನೋದ ಆನಂದ್, ಉಪಾಧ್ಯಕ್ಷ ಪಾವನ ಗಗನ್ ಅವರುಗಳು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾ.ಪಂ. ಸದಸ್ಯರುಗಳಾದ ಎಂ.ಎA. ಹನೀಫ್, ಲೀನಾ ಪರಮೇಶ್, ರೇಣುಕಾ ಮೇದಪ್ಪ, ದಾಕ್ಷಾಯಿಣಿ ಕಾಂತರಾಜ್, ದಿನೇಶ್, ಮೋಕ್ಷಿತ್‌ರಾಜ್, ಕ್ಯಾತೆ ಗ್ರಾಮ ಸಮಿತಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.