ಮಡಿಕೇರಿ, ಏ. ೧೫: ಮೂರ್ನಾಡು ಹೋಬಳಿ ಘಟಕ ಬಂಟರ ಸಂಘದ ಮಾಸಿಕ ಸಭೆಯಲ್ಲಿ ಹೋಬಳಿ ಘಟಕದ ಮಹಿಳಾ ಅಧ್ಯಕ್ಷೆ ಬಿ.ಬಿ. ಜಯಂತಿ ಲವಕುಮಾರ್ ರೈ ಅವರನ್ನು ಸನ್ಮಾನಿಸಲಾಯಿತು.
ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಜ್ಞಾನಚಿಗುರು ಕವಚ ಪ್ರಶಸ್ತಿ ಪಡೆದ ಹಿನ್ನೆಲೆ ಗೌರವಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ಚಂದ್ರಶೇಖರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಜಯರಾಮ್ ರೈ, ಕಾರ್ಯದರ್ಶಿ ಅಶ್ವಥ್ ರೈ, ಮಹಿಳಾ ಕಾರ್ಯದರ್ಶಿ ಹೇಮಾ ರೈ, ಉಪಕಾರ್ಯದರ್ಶಿ ಸತೀಶ್ ರೈ, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.