ಗೋಣಿಕೊಪ್ಪ ವರದಿ, ಏ. ೧೬: ಮೆಕಾನಿಕಲ್ ಇಂಜಿನಿಯರಿAಗ್‌ನಲ್ಲಿ ‘ಏವಿಯೋನಿಕ್ಸ್ ಅಪ್ಲಿಕೇಶನ್‌ಗಳಿಗಾಗಿ ಶಾಖಾ ಸಿಂಕ್ ಅಭಿವೃದ್ಧಿ’ ವಿಷಯದಲ್ಲಿ ಪ್ರಬಂಧ ಮಂಡನೆಗೆ ಕಿರುಂದAಡ ಡಿ. ಬೋಪಣ್ಣ ಅವರಿಗೆ ಪಿಹೆಚ್‌ಡಿ (ಡಾಕ್ಟರೇಟ್) ಪದವಿಯನ್ನು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನೀಡಿದೆ. ಇತ್ತೀಚೆಗೆ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸಿದರು.

ಬೆಂಗಳೂರು ಹರೈಸನ್ ಇಂಜಿನಿಯರಿAಗ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ. ಇವರಿಗೆ ಬೆಂಗಳೂರು ಹರೈಸನ್ ಇಂಜಿನಿಯರಿAಗ್ ಕಾಲೇಜು ಹೆಚ್‌ಒಡಿ ಡಾ. ಗಣೇಶ್ ಪ್ರಸಾದ್ ಮಾರ್ಗದರ್ಶನ ನೀಡಿದ್ದರು. ಇವರು ಬಾಳೆಲೆ ಗ್ರಾಮದ ಕಿರುಂದAಡ ದೇವಯ್ಯ, ಲೀಲಾವತಿ ದಂಪತಿ ಪುತ್ರ.