ಮಡಿಕೇರಿ, ಏ. ೧೬: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಡಿಕೇರಿ ನಗರದ ಪ್ರಮುಖ ಸ್ಥಳಗಳಲ್ಲಿ ಕಾಲ್ನಿಡಿಗೆ ಮೂಲಕ ಸಂಚರಿಸಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ. ತಾ. ೧೨ರಂದು ಮಡಿಕೇರಿ ನಗರದ ಅಂಚೆ ಕಚೇರಿ ಬಳಿಯಿಂದ ನಗರ ಪ್ರದಕ್ಷಿಣೆ ಹಾಕಿ ಜಿಲ್ಲಾಧಿಕಾರಿಗಳು ಕಾಲೇಜು ರಸ್ತೆ, ಮಾರ್ಕೆಟ್ ಸುತ್ತಮುತ್ತ ಕಾಲ್ನಡಿಗೆ ಮೂಲಕ ಒಡಾಡಿ ಸುಮಾರು ಒಂದು ಗಂಟೆಯಲ್ಲಿ ಎಪ್ಪತ್ತು ಜನರಿಗೆ ಒಟ್ಟು ರೂ. ೭ ಸಾವಿರ ದಂಡ ಹಾಕಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ