ಗೋಣಿಕೊಪ್ಪ ವರದಿ, ಏ. ೧೬ : ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕೊಟ್ಟಂಗಡ ಕುಟುಂಬ ಸಹಯೋಗದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಆಹ್ವಾನಿತ ತಂಡಗಳ ಕೊಟ್ಟಂಗಡ ಕ್ರಿಕೆಟ್ ಕಪ್‌ನಲ್ಲಿ ೪ ತಂಡಗಳು ಸೆಮಿಗೆ ಪ್ರವೇಶ ಪಡೆದಿವೆ.
ಫೈನಲ್‌ಗೇರಲು ಶನಿವಾರ ಚೆಕ್ಕೇರ, ಅಣ್ಣಳಮಾಡ, ಮಂಡುವAಡ, ತಂಬುಕುತ್ತೀರ ತಂಡಗಳು ಸೆಣೆಸಾಡಲಿವೆ.
ಕಾಣತಂಡ ವಿರುದ್ದದ ಪಂದ್ಯದಲ್ಲಿ ಚೆಕ್ಕೇರ ತಂಡವು ಬೌಲಿಂಗ್‌ನಲ್ಲಿ ಮಿಂಚು ಹರಿಸಿತು. ೧೦ ಒವರ್‌ಗಳ ಪಂದ್ಯದಲ್ಲಿ ಕಾಣತಂಡ ತನ್ನೆಲ್ಲಾ ವಿಕೆಟ್ ಪಡೆದುಕೊಂಡು ಕೇವಲ ೪೦ ರನ್ ದಾಖಲಿಸಿತು. ಚೆಕ್ಕೇರ ತಂಡವು ಕೇವಲ ೧ ವಿಕೆಟ್ ಕಳೆದುಕೊಂಡು ೩.೫ ಒವರ್‌ಗಳಿಗೆ ಗುರಿ ಮುಟ್ಟಿದರು. ಚೆಕ್ಕೇರ ಆಕರ್ಶ್ ಕೇವಲ ೮ ರನ್ ನೀಡಿ ೩ ವಿಕೆಟ್ ಪಡೆದು ಬಲಿಷ್ಠ ಕಾಣತಂಡ ಆಟಗಾರರನ್ನು ಕಟ್ಟಿ ಹಾಕಿದರು. ಕಾಣತಂಡ ಯಕ್ಷಿನ್ ೧೦ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. ಆಕರ್ಶ್ ೨೯ ರನ್ ಕಲೆ ಹಾಕಿ ಬ್ಯಾಟಿಂಗ್‌ನಲ್ಲಿಯೂ ಕಾಣಿಕೆ ನೀಡಿದರು.
ಅಣ್ಣಳಮಾಡ (ಬಿರುನಾಣಿ) ತಂಡವು ಕರಿನೆರವಂಡ ವಿರುದ್ದ ೫ ರನ್‌ಗಳಿಂದ ಜಯಿಸಿತು. ಅಣ್ಣಳಮಾಡ ಅರುಣ್ ಅವರ ೩೯ ರನ್‌ಗಳ ಕಾಣಿಕೆಯಿಂದ ಅಣ್ಣಳಮಾಡ ೮ ವಿಕೆಟ್ ನಷ್ಟಕ್ಕೆ ೮೦ ರನ್ ಕಲೆ ಹಾಕಿತು. ಕರಿನೆರವಂಡ ೩ ವಿಕೆಟ್ ಕಳೆದುಕೊಂಡರೂ ಕೂಡ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಕೊನೆಯಲ್ಲಿ ಬಿಗಿ ಬೌಲಿಂಗ್ ದಾಳಿ ಅಣ್ಣಳಮಾಡಕ್ಕೆ ಯಶಸ್ಸು ತಂದುಕೊಟ್ಟಿತು. ಕರಿನೆರವಂಡ ಡೆವಿನ್ ೩ ವಿಕೆಟ್, ಅಣ್ಣಳಮಾಡ ಭವನ್ ೧ ವಿಕೆಟ್ ಪಡೆದು ಮಿಂಚಿದರು. ಕರಿನೆರವಂಡ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದುಕೊಂಡಿತು.
ಮAಡುವAಡ ತಂಡಕ್ಕೆ ಕಳಕಂಡ ವಿರುದ್ದ ೭ ವಿಕೆಟ್‌ಗಳ ಜಯ ದೊರೆಯಿತು. ಕಳಕಂಡ ೬೨ ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮಂಡುವAಡ ೪ ಚೆಂಡು ಉಳಿದಿರುವಂತೆ ಗೆಲುವು ಪಡೆಯಿತು. ಮಂಡುವAಡ ದರ್ಶನ್ ೨೪ ರನ್ ನೀಡಿ ೪ ವಿಕೆಟ್ ಕಬಳಿಸಿ, ೨೯ ರನ್ ಕಾಣಿಕೆ ನೀಡಿದರು. ಕಳಕಂಡ ಬಬ್ಲಿ ೨೦ ರನ್, ೨ ವಿಕೆಟ್ ಪಡೆದರು.
ತಂಬುಕುತ್ತೀರ ತಂಡದ ಅಮೋಘ ಪ್ರದರ್ಶನ ಮೈದಾನದಲ್ಲಿ ಸಂಚಲನ ಮೂಡಿಸಿದಲ್ಲದೆ ೫೨ ರನ್‌ಗಳ ಗೆಲುವು ತಂದು ಕೊಟ್ಟಿತು. ಮೊದಲು ಬ್ಯಾಟ್ ಮಾಡಿ ೬ ವಿಕೆಟ್ ನಷ್ಟಕ್ಕೆ ೧೩೫ ರನ್ ಗುರಿ ನೀಡಿತು. ಪಂದ್ಯAಡ ನಿಗದಿತ ಒವರ್‌ಗೆ ೬ ವಿಕೆಟ್ ಕಳೆದುಕೊಂಡು ಕೇವಲ ೮೨ ರನ್ ಗಳಿಸಿತು. ತಂಬುಕುತ್ತೀರ ಸಾಗರ್ ೭೯ ರನ್ ಸಿಡಿಸಿ, ೩ ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಪಂದ್ಯAಡ ಬೋಪಣ್ಣ ೫೩ ರನ್, ಹರೀಶ್ ೨ ವಿಕೆಟ್ ಪಡೆದರು. ಪಂದ್ಯ ಶ್ರೇಷ್ಠ ಬಹುಮಾನವನ್ನು ಪಂದ್ಯAಡ ಬೋಪಣ್ಣ, ಕರಿನೆರವಂಡ ಡೆವಿನ್, ಕಳಕಂಡ ಬಬ್ಲಿ, ಕಾಣತಂಡ ಯಕ್ಷಿನ್ ಪಡೆದರು.