ಸುಂಟಿಕೊಪ್ಪ,ಏ.೧೫: ಐಗೂರು ಗ್ರಾಮದಲ್ಲಿ ರಾತ್ರಿವೇಳೆ ಒಂಟಿ ಸಲಗ ಕಾಡಿನಿಂದ ಆಹಾರ ಅರಸಿ ತೋಟಕ್ಕೆ ಲಗ್ಗೆಯಿಟ್ಟು ಬಾಳೆಗಿಡ, ತೆಂಗಿನ ಸಸಿ, ಮರಗೆಣಸನ್ನು ತಿಂದು ನಾಶಪಡಿಸಿದೆ.
ತಾ.೧೪ ರಂದು ರಾತ್ರಿ ವೇಳೆ ಕಾಡಾನೆ ಆಹಾರ ಅರಸಿಕೊಂಡು ಐಗೂರು ಗ್ರಾಮದ ಪಿ.ಕೆ.ಸೋಮಯ್ಯ, ಎಂ.ಸಿ.ಸAಜಯ್, ಅಪ್ಪಣಿ,ಹರಪಳ್ಳಿತೋಟ, ಜಿ.ಕೆ.ಬಾಲಕೃಷ್ಣ ಇವರ ಜಾಗಕ್ಕೆ ನುಗ್ಗಿ ಸಿಕ್ಕ ಬಾಳೆಗಿಡ, ತೆಂಗಿನ ಸಸಿ, ಮರಗೆಣಸುಗಳನ್ನು ಬೇಕಾಬಿಟ್ಟಿ ತಿಂದು ಕಾಫಿ ಗಿಡಗಳನ್ನು ಕಿತ್ತು ನಾಶಪಡಿಸಿ ಹಿಂತೆರಳಿದೆ.
ಐಗೂರು ಯಡವಾರೆ, ಕಾಜೂರು, ಯಡವನಾಡು ವಲಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ತೋಟಕ್ಕೆ ಹಿಂಡಾಗಿ ಲಗ್ಗೆಯಿಡುತ್ತಿದ್ದು ಗ್ರಾಮಸ್ಥರು ವಾಹನ ಚಾಲಕರು ಈ ವಿಭಾಗದಲ್ಲಿ ತಿರುಗಾಡಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆಯವರು ಕಾಡಾನೆಯನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.