ಸೋಮವಾರಪೇಟೆ, ಏ. ೧೬: ಪಟ್ಟಣದ ಬಸವೇಶ್ವರ ರಸ್ತೆಯ ನಿವಾಸಿ, ಕಾಲಿನ ಶಸ್ತç ಚಿಕಿತ್ಸೆಗೆ ಎದುರು ನೋಡುತ್ತಿರುವ ಅಶೋಕ್‌ಕುಮಾರ್ ಅವರಿಗೆ ಇಲ್ಲಿನ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ರೂ. ೧೦ ಸಾವಿರ ನೆರವು ಒದಗಿಸಲಾಯಿತು.

ಅಶೋಕ್‌ಕುಮಾರ್ ಅವರ ಸಂಕಷ್ಟದ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಯನ್ನು ಗಮನಿಸಿದ ಕ್ಲಬ್‌ನ ಸದಸ್ಯೆ ಮೋಹಿನಿ ಶಿವಶಂಕರ್ ಅವರು, ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಮೂಲಕ ಧನ ಸಹಾಯ ಒದಗಿಸಿದರು. ಈ ಸಂದರ್ಭ ಕ್ಲಬ್‌ನ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಕಾರ್ಯದರ್ಶಿ ಸರಿತಾ ರಾಜೀವ್ ಅವರುಗಳು ಉಪಸ್ಥಿತರಿದ್ದರು.