ವೀರಾಜಪೇಟೆ, ಏ. ೧೧: ಜಲ್ಲಿಕಲ್ಲು ಸಾಗಾಟಕ್ಕೆ ಪರವಾನಿಗೆ ಇದ್ದರೂ ವಾಹನಗಳನ್ನು ತಡೆದು ಪೊಲೀಸ್ ಇಲಾಖೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವೀರಾಜಪೇಟೆ ಕಟ್ಟಡ ಸಾಮಗ್ರಿಗಳ ಸಾಗಾಟ ವಾಹನ, ಮಿನಿ ಟಿಪ್ಪರ್ ಲಾರಿ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಕ್ವಾರೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಪೇರಟ್ಟ ಸ್ಥಳದಿಂದ ಸರಕಾರದಿಂದ ಅಧಿಕೃತವಾಗಿ ಪರವಾನಿಗೆ ಪಡೆದು ಜಿಲ್ಲೆಯ ವಿವಿಧ ಸ್ಥಳಕ್ಕೆ ಜಲ್ಲಿಕಲ್ಲು ಸಾಗಾಟ ಮಾಡಲಾಗುತ್ತಿದೆ. ತಾ ೧೦ ರಂದು ಮಧ್ಯಾಹ್ನ ವೀರಾಜಪೇಟೆ ಬೇತ್ರಿ ನಾಲ್ಕೇರಿ ಗ್ರಾಮದ ಪಿ.ಆರ್. ಚೇತನ್ ಎಂಬವರಿಗೆ ಸೇರಿದ ಟಿಪ್ಪರ್ ಲಾರಿಯಲ್ಲಿ (ಕೆಎ-೧೨ಬಿ-೬೨೯೨) ಜಲ್ಲಿಕಲ್ಲು ತುಂಬಿಕೊAಡು ಬೇತ್ರಿ ಗ್ರಾಮಕ್ಕೆ ಸಾಗಾಟ ಮಾಡುವ ಸಂದÀರ್ಭದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ವಾಹನವನ್ನು ಚಿಕ್ಕಪೇಟೆ ಜಂಕ್ಷನ್‌ನಲ್ಲಿ ತಡೆದು ಟಿಪ್ಪರ್‌ನಲ್ಲಿರುವ ಜಲ್ಲಿಕಲ್ಲು ತೂಕವು ಅಧಿಕೃತ ತೂಕಕ್ಕಿಂತ ಹೆಚ್ಚಿದೆ ಎಂದು ಹೇಳಿ ಯಾವುದೇ ಮಾಹಿತಿ ನೀಡದೆ ಪೊಲೀಸ್ ಠಾಣೆಗೆ ವಾಹನವನ್ನು ಮುಟ್ಟುಗೋಲು ಹಾಕಿ ಪರವಾನಿಗೆ ಪತ್ರವನ್ನು ವಶಕ್ಕೆ ಪಡೆದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವಾಹನ ಮಾಲೀಕ ಆರೋಪಿಸಿದರು. ಈ ಸಂಬAಧ ಸಂಘದ ಬೆಂಬಲ ದೊಂದಿಗೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ದಿನನಿತ್ಯ ಕೇರಳ ರಾಜ್ಯದ ಗಡಿಭಾಗದಿಂದ ಕೊಡಗು ಜಿಲ್ಲೆಗೆ ೫೦ ಕ್ಕೂ ಅಧಿಕ ಜಲ್ಲಿಕಲ್ಲು ತುಂಬಿದ ೧೦ ಚಕ್ರ ವಾಹನ ಮತ್ತು ಕೆಂಪುಕಲ್ಲು ತುಂಬಿದ ಕೇರಳ ರಾಜ್ಯ ನೋಂದಾಣಿಗೊAಡ ಮಿನಿ ಲಾರಿಗಳು ಯಾವುದೇ ಅಡೆತಡೆಗಳಿಲ್ಲದೆ ಸಂಚರಿಸುತ್ತಿವೆ. ಆದರೆ ಇಲಾಖೆಯ ಅಧಿಕಾರಿಗಳು ಕೇರಳ ರಾಜ್ಯದ ವಾಹನಗಳನ್ನು ತಪಾಸಣೆ ಮಾಡದೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿರು ವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿಯ ವಾಹನಗಳಿಗೆ ಒಂದು ರೀತಿಯ ಕಾನೂನು; ಕೇರಳ ರಾಜ್ಯದ ವಾಹನಗಳಿಗೆ ಒಂದು ರೀತಿಯ ಕಾನೂನು ಮಾಡುತ್ತಿರುವುದು ಸರಿಯಲ್ಲ ಎಂದು ಮಿನಿ ಟಿಪ್ಪರ್ ಲಾರಿ ಮಾಲೀಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಸುಮನ್ ಖಂಡಿಸಿದ್ದಾರೆ.
ಪೊಲೀಸರ ಹೇಳಿಕೆ: ಟಿಪ್ಪರ್ ಲಾರಿಗಳಲ್ಲಿ ಸರಕು ಸಾಗಿಸಲು ಇಂತಿಷ್ಟು ಭಾರ ಸಾಗಾಟ ಮಾಡಬಹುದು ಎಂದು ಸರ್ಕಾರದ ಮತ್ತು ಕಾನೂನು ನಿಯಮಗಳಿವೆ. ಕಾನೂನು ಉಲ್ಲಂಘಿಸಿ ಟಿಪ್ಪರ್ ಲಾರಿ ಸಂಚರಿಸುತ್ತಿವೆ. ಆದರೆ ಇಲಾಖೆಯ ಅಧಿಕಾರಿಗಳು ಕೇರಳ ರಾಜ್ಯದ ವಾಹನಗಳನ್ನು ತಪಾಸಣೆ ಮಾಡದೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿರು ವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿಯ ವಾಹನಗಳಿಗೆ ಒಂದು ರೀತಿಯ ಕಾನೂನು; ಕೇರಳ ರಾಜ್ಯದ ವಾಹನಗಳಿಗೆ ಒಂದು ರೀತಿಯ ಕಾನೂನು ಮಾಡುತ್ತಿರುವುದು ಸರಿಯಲ್ಲ ಎಂದು ಮಿನಿ ಟಿಪ್ಪರ್ ಲಾರಿ ಮಾಲೀಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಸುಮನ್ ಖಂಡಿಸಿದ್ದಾರೆ.
ಪೊಲೀಸರ ಹೇಳಿಕೆ: ಟಿಪ್ಪರ್ ಲಾರಿಗಳಲ್ಲಿ ಸರಕು ಸಾಗಿಸಲು ಇಂತಿಷ್ಟು ಭಾರ ಸಾಗಾಟ ಮಾಡಬಹುದು ಎಂದು ಸರ್ಕಾರದ ಮತ್ತು ಕಾನೂನು ನಿಯಮಗಳಿವೆ. ಕಾನೂನು ಉಲ್ಲಂಘಿಸಿ ಟಿಪ್ಪರ್ ಲಾರಿ ನಿಗದಿತ ತೂಕಕ್ಕಿಂತ ಅಧಿಕ ಭಾರವನ್ನು ಹೊತ್ತು ಸಾಗುತ್ತವೆ. ಅಂತಹ ವಾಹನಗಳ ಮೇಲೆ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಮತ್ತು ವಾಹನವನ್ನು ರಾಜ್ಯ ರಸ್ತೆ ಸಂಚಾರ ನಿಯಂತ್ರಣಾಧಿಕಾರಿಗಳ ಕಛೇರಿಗೆ ಒಪ್ಪಿಸಲಾಗುತ್ತದೆ ಎಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗ ಭಿ ಭಾನಸೆ ತಿಳಿಸಿದ್ದಾರೆ.
ದೂರು ನೀಡಿದ ಸಂದರ್ಭ ಮಂಡೇಟಿರ ಅನಿಲ್ ಅಯ್ಯಪ್ಪ, ರಿಜ್ವಾನ್, ಫರೋಖ್, ಮೊಹಮ್ಮದ್, ಮೊಹಮ್ಮದ್ ರಾಫಿ ಹೆಚ್.ಎಸ್. ಮತೀನ್, ಗಿರೀಶ್, ಶರತ್ ಶಬ್ನಾಜ್ ಮತ್ತು ಇನ್ನಿತರರು ಹಾಜರಿದ್ದರು.
-ಕೆ.ಕೆ.ಎಸ್., ವೀರಾಜಪೇಟೆ