ಸಿದ್ದಾಪುರ, ಏ. ೧೧: ಮರದ ಹುಡಿಯನ್ನು ತುಂಬಿದ ಚೀಲಗಳನ್ನು ಮುಚ್ಚಿಕೊಂಡು ಅಕ್ರಮವಾಗಿ ಹಲಸಿನ ಮರದ ನಾಟಾಗಳನ್ನು ಸಾಗಿಸುತ್ತಿದ್ದು ದನ್ನು ಪತ್ತೆಹಚ್ಚಿದ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿಗಳು ವಾಹನ ಹಾಗೂ ಮರವನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳಾದ ಕಲ್ಲುಬಾಣೆಯ ನಿವಾಸಿ ಆರ್.ಕೆ. ನಾಸಿರ, ನಿರ್ಮಲಗಿರಿಯ ನಿವಾಸಿ ಕೆ.ಆರ್. ಜೋಸೆಫ್ ಮತ್ತು ವೇಲಮ್‌ನ ನಿವಾಸಿ ಇಸ್ಮಾಯಿಲ್ ಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಜೆ. ರೋಷಿಣಿ ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯದ ಉಪವಲಯ ಅರಣ್ಯಾಧಿಕಾರಿ ಕಳ್ಳಿರ ಎಂ. ದೇವಯ್ಯ, ಶೈಲ ಮತ್ತು ಅರಣ್ಯ ರಕ್ಷಕ ಚಂದ್ರಶೇಖರ, ವಾಹನ ಚಾಲಕ ಅಶೋಕ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.