ನಾಪೋಕ್ಲು, ಏ. ೧೧: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಎಸ್‌ಇಎಸ್ ಬೇತ್ರಿ ಸಂಯುಕ್ತಾಶ್ರಯ ದಲ್ಲಿ ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ದಲ್ಲಿ ನಡೆದ ೧೭ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಬ್ಲಾಕ್ ಕೋಬ್ರಾ ವಿರಾಜಪೇಟೆ ತಂಡವು ಬ್ರರ‍್ಸ್ ನೆಲ್ಲಿಹುದಿಕೇರಿ ತಂಡವನ್ನು ಸೋಲಿಸಿ ಕೊಡಗು ಮುಸ್ಲಿಂ ಕಪ್ ಅನ್ನು ತನ್ನದಾಗಿಸಿಕೊಂಡಿತು.

ಬ್ರರ‍್ಸ್ ನೆಲ್ಲಿಹುದಿಕೇರಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಳೆದ ೮ ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ೯೨ ತಂಡಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದರು.

ಮುಸ್ಲಿA ಕಪ್ ಕ್ರಿಕೆಟ್‌ನ ಸ್ಥಾಪಕ ಅಬ್ದುಲ್ ರಶೀದ್ ಅವರು ಮುಸ್ಲಿಂ ಕಪ್ ಕ್ರಿಕೆಟ್‌ಗೆ ಸರಕಾರದಿಂದ ಅನುದಾನ ನೀಡಬೇಕು ಎಂದು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಇಲ್ಲಿಯವರೆಗೆ ನನಗೆ ಯಾವುದೇ ಮನವಿ ಬಂದಿಲ್ಲ. ಕ್ರೀಡಾಕೂಟದ ಎಲ್ಲಾ ಖರ್ಚು ವೆಚ್ಚಗಳು ಸೇರಿದಂತೆ ಸೂಕ್ತ ದಾಖಲಾತಿ ಗಳೊಂದಿಗೆ ಮನವಿ ಸಲ್ಲಿಸಿದಲ್ಲಿ ಕ್ರೀಡಾ ಕೂಟಕ್ಕೆ ಸರಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಎಸ್.ಐ ಯಾಗಿ ಆಯ್ಕೆಯಾಗಿರುವ ಇಂತಿಯಾಜ಼್ ಕೂವಲೆರ, ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ತಸ್ಲೀಮಾ, ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಅಬ್ದುಲ್ ರಶೀದ್, ಖಲೀಲ್, ಟಿ.ಎಸ್.ಕೆ ಕೊಂಡAಗೇರಿ ಅವರನ್ನು ಕ್ರೀಡಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಸ್ಲಿಂ ಸ್ಟೋರ್ಟ್ಸ್ ಅಸೋಸಿಯೇಶ್‌ನ ಅಧ್ಯಕ್ಷ ಅಬ್ದುಲ್ ಖಾದಿರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಜೆಡಿಎಸ್ ಮುಖಂಡ ಎಂ.ಎ.ಮನ್ಸೂರ್ ಅಲಿ, ನಾಪೋಕ್ಲು ಪಟ್ಟಣ ಜಮಾಅತ್ ಅಧ್ಯಕ್ಷ ಪಿ.ಎಂ.ಹ್ಯಾರೀಸ್, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್ ಪೊನ್ನಣ್ಣ ಮತ್ತಿತರರು ಇದ್ದರು.

-ಪಿ.ವಿ. ಪ್ರಭಾಕರ್