ಶನಿವಾರಸಂತೆ, ಏ. ೧೧: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ಶನಿವಾರಸಂತೆ ಕಡೆಯಿಂದ ಬರುತ್ತಿದ್ದ ಓಮ್ನಿ ವ್ಯಾನು (ಕೆಎ-೦೩ ಎಂಡಿ-೩೭೩೫) ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕ ಮಂಜುನಾಥ, ಪತ್ನಿ ಜಯಾ ಅವರ ತಲೆ, ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಸಳೂರು ಹೋಬಳಿಯ ಕರಗೂರು ಕೂಡಿಗೆ ಗ್ರಾಮದ ನಿವಾಸಿ ಮಂಜುನಾಥ ಹಾಗೂ ಪತ್ನಿ ಜಯ, ಇನ್ನೋರ್ವ ಸಂತೋಷ್ ತಮ್ಮ ಓಮ್ನಿ ವ್ಯಾನಿನಲ್ಲಿ ಶನಿವಾರಸಂತೆಗೆ ಬರುತ್ತಿರುವಾಗ ಕಾಜೂರು ಗ್ರಾಮದ ಇಟ್ಟಿಗೆ ಫ್ಯಾಕ್ಟರಿ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಚಾಲಕ ವ್ಯಾನನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.