ಶನಿವಾರಸAತೆ, ಏ. ೧೧: ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಶನಿವಾರಸಂತೆ ಪೊಲೀಸರು ಗುರುವಾರ, ಶುಕ್ರವಾರ, ಶನಿವಾರ ಮೂರು ದಿನ ಶನಿವಾರಸಂತೆ ಪಟ್ಟಣ, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಹಾಗೂ ಸಂತೆ ಮಾರುಕಟ್ಟೆಯ ಅಂಗಡಿ ಮುಂಗಟ್ಟುಗಳಿಗೆ ಗ್ರಾಹಕರು ಮತ್ತು ವರ್ತಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿ ಮಾಸ್ಕ್ ಧರಿಸದವರಿಗೆ ತಲಾ ರೂ. ೧೦೦ರಂತೆ ಒಟ್ಟು ರೂ. ೧೦ ಸಾವಿರ ದಂಡ ವಸೂಲು ಮಾಡಿರುವುದಾಗಿ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ದೇವರಾಜ್, ಸಹಾಯಕ ಠಾಣಾಧಿಕಾರಿಗಳಾದ ಗೋವಿಂದ್, ಶಿವಲಿಂಗ, ಚೆನ್ನಯ್ಯ, ಸಿಬ್ಬಂದಿಗಳಾದ ಚೆನ್ನಕೇಶವ, ಲೋಕೇಶ್, ರವಿಚಂದ್ರ, ಸೋಮಶೇಖರ್, ಮುರುಳಿ, ಸಂತೋಷ್, ಶಶಿ, ಸವಿತಾ, ರಾಧ ಹಾಗೂ ಪೂರ್ಣಿ ಅವರುಗಳು ಭಾಗವಹಿಸಿದ್ದರು.