ಶನಿವಾರಸಂತೆ, ಏ. ೧೧: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಸಾರ್ವಜನಿಕ ಜನಸಂಪರ್ಕ ಸಭೆ ನಡೆಯಿತು.
ಜಿಲ್ಲಾ ಎಸಿಬಿ ಇನ್ಸ್ಪೆಕ್ಟರ್ ಹರೀಶ್ ಮಾತನಾಡಿ, ಸರಕಾರಿ ನೌಕರರು ನಿತ್ಯದ ಕೆಲಸಗಳನ್ನು ನಿರ್ವಹಿಸಲು ವಿಳಂಬ ಮಾಡಿ ನಿರ್ಲಕ್ಷö್ಯ ತೋರಿದಲ್ಲಿ ಅಥವಾ ಲಂಚ ಕೇಳಿದರೆ ಹಾಗೂ ಅಕ್ರಮ ಆಸ್ತಿಗಳಿಕೆ ಮಾಡಿದಲ್ಲಿ ಎಸಿಬಿ ಕಚೇರಿಗೆ ಇಲ್ಲವೇ ಮೈಸೂರಿನ ಎಸಿಬಿ ಅಧೀಕ್ಷಕರಿಗೆ ಲಿಖಿತ ಅಥವಾ ಮೌಖಿಕ ದೂರು ನೀಡಬೇಕು. ಜನ ದೂರು ನೀಡಲು ಹಿಂಜರಿಯುವುದರಿAದ ಜಾಗೃತಿ ಮೂಡಿಸಲು ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳಪೆ ಗುಣಮಟ್ಟದ ಸರಕಾರಿ ಸಾರ್ವಜನಿಕ ಕಾಮಗಾರಿಗಳ ಬಗ್ಗೆಯೂ ಸಾಕ್ಷಿ ಸಮೇತ ದೂರು ನೀಡಿದರೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಪAಚಾಯಿತಿ ಉಪಾಧ್ಯಕ್ಷೆ ಪಾವನ, ಸದಸ್ಯರಾದ ಎಂ.ಎA. ಹನೀಫ್, ಮೋಕ್ಷಿತ್ ರಾಜ್, ಲೀನಾ, ದಾಕ್ಷಾಯಿಣಿ, ಪಿಡಿಓ ಹರೀಶ್, ಸಿಬ್ಬಂದಿ, ಎಸಿಬಿ ಹೆಡ್‌ಕಾನ್ಸ್ಟೇಬಲ್‌ಗಳಾದ ದಿನೇಶ್, ಲೋಹಿತ್, ಪ್ರಮುಖರಾದ ಎಸ್.ಎಲ್. ಮೇದಪ್ಪ, ಹೆಚ್.ಕೆ. ವಸಂತ್, ಕಾಂತರಾಜ್, ಮೊಯ್ದು, ಜೀವನ್ ಉಪಸ್ಥಿತರಿದ್ದರು.