ಪೊನ್ನಂಪೇಟೆ, ಏ. ೧೧: ಆರಂಭದಲ್ಲಿ ಜನರನ್ನು ವೇದಿಕೆ ಯೇರಲು ಹೆದರಿಸುವ ಸಭಾಕಂಪನ ಮನುಷ್ಯನ ದೊಡ್ಡ ಶತ್ರುವಾಗಿದೆ. ಇದನ್ನು ಆತ್ಮವಿಶ್ವಾಸದಿಂದ ಮಾತ್ರ ಸೋಲಿಸಲು ಸಾಧ್ಯ ಎಂದು ‘ಜೆ.ಸಿ.ಐ. ಡಿಸೈನರ್' ಖ್ಯಾತಿಯ ರಾಷ್ಟಿçÃಯ ತರಬೇತಿದಾರ ತುಮಕೂರಿನ ಡಿ.ವಿ. ಶ್ರೀಕಾಂತ್ ಅವರು ಹೇಳಿದ್ದಾರೆ.
ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ಪೊನ್ನಂಪೇಟೆ ನಿಸರ್ಗ ಜೇಸಿಸ್) ಘಟಕದ ವತಿಯಿಂದ ಗೋಣಿ ಕೊಪ್ಪಲಿನ ಸಿಲ್ವರ್ ಸ್ಕೆöÊ ಹೊಟೇಲ್ ಸಭಾಂಗಣದಲ್ಲಿ ಜೇಸಿ ಸದಸ್ಯರಿಗಾಗಿ ಮತ್ತು ಆಸಕ್ತ ಸಾರ್ವಜನಿಕರಿಗಾಗಿ ‘ಪರಿಣಾಮಕಾರಿ ಭಾಷಣ ಕಲೆ' ಮತ್ತು ‘ಅಧ್ಯಕ್ಷತೆ ಹಾಗೂ ಸಂಸದೀಯ ನಡಾವಳಿ' ಎಂಬ ವಿಷಯದ ಕುರಿತು ನಡೆದ ವಿಶೇಷ ತರಬೇತಿ ಕಾರ್ಯಾ ಗಾರದಲ್ಲಿ ಪ್ರಧಾನ ತರಬೇತುದಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಭಾಕಂಪನದ ಕುರಿತು ಜಾಗತಿಕವಾಗಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ನಿರಂತರವಾಗಿ ಕಾಡುವ ಸಭಾಕಂಪನನ್ನು ಇಂದು ಜನತೆ ಸಾವಿಗಿಂತ ಹೆಚ್ಚು ಭಯಪಡುತ್ತಾರೆ ಎಂಬುದು ಸಂಶೋಧನೆಗಳಿAದ ದೃಢಪಟ್ಟಿರುವ ಅಂರ್ರಾಷ್ಟಿçÃಯ ಸತ್ಯವಾಗಿದೆ. ವ್ಯಕ್ತಿಗಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸಭಾಕಂಪನ ಅಡ್ಡ ಬರುತ್ತದೆ ಎಂಬುದರಲ್ಲಿ ಯಾವ ತರ್ಕವೂ ಉಳಿದಿಲ್ಲ ಎಂದು ಅವರು ಹೇಳಿದರು. ನಿರಂತರ ಅಧ್ಯಯನ ಮನುಷ್ಯನ ಜ್ಞಾನ ಸಂಪತ್ತನ್ನು ಹೆಚ್ಚಿಸುತ್ತದೆ. ಇಂದಿನ ಬದಲಾದ ಕಾಲದಲ್ಲಿ ಜ್ಞಾನದ ಕೊರತೆಯಿಂದ ಸುಳ್ಳು ಮಾಹಿತಿಗಳಿಂದ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
‘ಅಧ್ಯಕ್ಷತೆ ಮತ್ತು ಸಂಸದೀಯ ನಡಾವಳಿ' ಕುರಿತು ತರಬೇತಿ ನೀಡಿದ ಡಿ.ವಿ. ಶ್ರೀಕಾಂತ್, ಜಾಗತಿಕವಾಗಿ ಅಳವಡಿಕೆಯಾಗಿರುವ ಸಂಸದೀಯ ನಡಾವಳಿ ಹೆಚ್ಚು ಆಸಕ್ತಿದಾಯಕ ವಿಷಯವಾಗಿದೆ. ಈ ವಿಷಯದ ಕುರಿತ ಪಾಂಡಿತ್ಯ ವ್ಯಕ್ತಿಯ ನಾಯಕತ್ವ ಗುಣವನ್ನು ಹೆಚ್ಚಿಸುವುದರಲ್ಲಿ ನಿಜಕ್ಕೂ ಸಹಕಾರಿಯಾಗುತ್ತದೆ. ಭಾರತ ಸೇರಿದಂತೆ ಜಗತ್ತಿನ ಯಶಸ್ವಿ ನಾಯಕರೆಲ್ಲರೂ ಅತ್ಯುತ್ತಮ ಸಂಸದೀಯ ಪಟುಗಳು ಎಂಬುದನ್ನು ಯಾರೂ ಮರೆಯಬಾರದು. ಸಂಸದೀಯ ನಡಾವಳಿ ಕುರಿತ ಜ್ಞಾನ ಕೇವಲ ಜನಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗಬೇಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಪ್ರತಿಯೊಬ್ಬರಿಗೂ ಇದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದರು.
ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎಂ.ಎನ್. ವನಿತ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾರತೀಯ ಜೇಸಿಸ್ನ ವಲಯ-೧೪ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ರಫೀಕ್ ತೂಚಮಕೇರಿ, ಪೂರ್ವ ವಲಯಾಧಿಕಾರಿ ಮತ್ತು ಪೊನ್ನಂಪೇಟೆ ನಿಸರ್ಗ ಜೇಸಿಸ್ ಮಾಜಿ ಅಧ್ಯಕ್ಷ, ಗೋಣಿಕೊಪ್ಪಲು ಎಂ.ಸಿ.ಸಿ. ಬ್ಯಾಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಈ. ಕಿರಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಘಟಕದ ನಿಕಟಪೂರ್ವ ಅಧ್ಯಕ್ಷ ಟಾಟು ಮೊಣ್ಣಪ್ಪ ಮತ್ತು ಕಾರ್ಯಾಗಾರದ ಯೋಜನಾ ನಿರ್ದೇಶಕ ಕ್ಯಾ. ಬಿ.ಎಂ. ಗಣೇಶ್ ಉಪಸ್ಥಿತರಿದ್ದರು. ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದ ಗೋಣಿ ಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ನ ಎನ್.ಸಿ.ಸಿ. ಅಧಿಕಾರಿ ಕ್ಯಾ. ಬಿ.ಎಂ. ಗಣೇಶ್, ಶಿಕ್ಷಕರಾದ ಟೀನಾ ಮಾಚಯ್ಯ, ಸೌಮ್ಯ, ಬೆಳ್ಳಿಯಪ್ಪ, ಮಾಯಮುಡಿ ಗ್ರಾ.ಪಂ. ಸದಸ್ಯೆ ಸುಮಿತ್ರ ಕಾರ್ಯಾಗಾರದಲ್ಲಿ ಅತ್ಯುತ್ತ ಮವಾಗಿ ಭಾಗವಹಿಸಿದ ಕಾರಣಕ್ಕಾಗಿ ವಿಶೇಷ ಮನ್ನಣೆಯನ್ನು ಪಡೆದು ಕೊಂಡರು. ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತ ಟಿ.ಎಲ್. ಶ್ರೀನಿವಾಸ್, ಬಿಳಗುಂದ ಗ್ರಾ.ಪಂ. ಸದಸ್ಯ ಪಿ.ಎಂ. ಹನೀಫ್ ಅವರನ್ನು ‘ಉತ್ತಮ ಸಂಸದೀಯ ಪಟು'ಗಳೆಂದು ಗುರುತಿಸಿ ಗೌರವಿಸ ಲಾಯಿತು. ಅಲ್ಲದೆ ಎ.ಎಸ್. ಟಾಟು ಮೊಣ್ಣಪ್ಪ, ದಿಲ್ಲನ್ ಚಂಗಪ್ಪ, ವನಿತ್ ಕುಮಾರ್, ಕಿಶೋರ್ ಕುಮಾರ್, ಅನಿಲ ದೇವಯ್ಯ ಮತ್ತು ನೌಫಲುದ್ದೀನ್ ಅವರನ್ನು ‘ಭವಿಷ್ಯದ ನಾಯಕ'ರು ಎಂದು ಪರಿಗಣಿಸಿ ಸ್ಮರಣಿಕೆ ನೀಡಿ ಆದರಿ ಸಲಾಯಿತು. ಕಾರ್ಯಾ ಗಾರದಲ್ಲಿ ಜೇಸಿ ಸದಸ್ಯರು ಸೇರಿದಂತೆ ಆಯ್ದ ಪ್ರಮುಖರು ಭಾಗವಹಿಸಿದ್ದರು.