ತನ್ನದೇ ವಿಶೇಷ, ವೈಶಿಷ್ಟö್ಯತೆ, ಹೆಗ್ಗಳಿಕೆ ಹೊಂದಿರುವ ಕೊಡವ ಸಂಸ್ಕೃತಿಯ ಬಹುಮುಖ್ಯ ಭಾಗಗಳಲ್ಲೊಂದು - ಕೊಡವ ವಿವಾಹ ಪದ್ಧತಿ. ಅನಾದಿ ಕಾಲದಿಂದ ಸುಮಾರು ೧೯೫೦ ರವರೆಗೆ ಈ ವಿವಾಹಗಳು ಬಹುತೇಕ ಕೊಡವರ ಐನ್‌ಮನೆಗಳಲ್ಲಿ ಮೂಲಪದ್ಧತಿಗೆ ಅನುಗುಣವಾಗಿ ನಡೆಯುತಿತ್ತು.

ಅಲ್ಲಿಂದೀಚೆಗೆ ನಾಗರಿಕತೆಯ ಪ್ರಭಾವ ಹೆಚ್ಚಿದಂತೆ, ವಿವಾಹಗಳಿಗೆ ಹೆಚ್ಚು ಹೆಚ್ಚು ಅತಿಥಿ ಅಭ್ಯಾಗತರನ್ನು ಸೇರಿಸುವ ಹುಮ್ಮನಸಿನಲ್ಲಿ... ಊರಿನ ಶಾಲಾ ಕಟ್ಟಡ, ಮಹಿಳಾ ಸಮಾಜ ಕಟ್ಟಡ, ಸಹಕಾರ ಸಂಘಗಳ ಕಟ್ಟಡ... ಇಂತಹ ಸಾರ್ವಜನಿಕ ಕೇಂದ್ರಗಳಲ್ಲಿಯೂ ಕೆಲವರು ಮದುವೆ ಸಮಾರಂಭ ನಡೆಸಲಾರಂಭಿಸಿದರು.

೧೯೬೦ರ ಸಂದರ್ಭದಲ್ಲಿ: ಅಂದಾಜು ೧೯೬೦ ರ ಸಮಯದಲ್ಲಿ ಪೇಟೆ - ಪಟ್ಟಣಗಳಲ್ಲಿಯೂ ಕೊಡವರು ನೆಲೆಸ ತೊಡಗಿ ಅಲ್ಲಲ್ಲಿ ‘‘ಕೊಡವ ಸಮಾಜ’’ಗಳು ತಲೆ ಎತ್ತಲಾರಂಭಿಸಿದವು. ಈ ಸಮಾಜಗಳಲ್ಲಿ ಕ್ರಮೇಣ ಕಲ್ಯಾಣ ಮಂಟಪ ಕಟ್ಟಡಗಳೂ ಸೇರಿದಂತೆ ವಿವಾಹದಂತಹ ವಿಶೇಷ ಸಮಾರಂಭಗಳಿಗೆ ಅಗತ್ಯವಾದ ಎಲ್ಲಾ ಪರಿಕರಗಳು ಲಭ್ಯವಾಗತೊಡಗಿತು. ಅನುಕೂಲಸೂತ್ರ ಬಯಸಿದ ಕೊಡವರು ಐನ್‌ಮನೆ - ಶಾಲಾ ಕಟ್ಟಡಗಳಂತಹ ಸೀಮಿತ ಸೌಕರ್ಯವಾದ ಕೇಂದ್ರಗಳಿಗಿAತ ಪಟ್ಟಣದ ಸುಸಜ್ಜಿತ ಕಲ್ಯಾಣ ಮಂಟಪಗಳನ್ನು ಆದ್ಯತೆಯಲ್ಲಿ ಅವಲಂಬಿಸ ತೊಡಗಿದರು.

ಕಠಿಣ ಶಿಸ್ತು ಕ್ರಮ: ಸ್ವಂತಮನೆ, ಐನ್‌ಮನೆ, ಸ್ವಂತ ಊರಿನಲ್ಲಿ ವಿವಾಹ ಸಮಾರಂಭ ಏರ್ಪಟ್ಟಲ್ಲಿ ಮೂಲ ಪದ್ದತಿ - ಪರಂಪರೆ, ಶಾಸ್ತç - ಸಂಪ್ರದಾಯ ... ಇಂತಹ ಯಾವುದೇ ಕಟ್ಟುಪಾಡುಗಳಿಗೆ ಲವಲೇಶವೂ ಚ್ಯುತಿ ಬರದಂತೆ ನಿಗಾ ವಹಿಸಲು ಅಂದು ಕುಟುಂಬದ ಪಟ್ಟೆದಾರ, ಕೊರೋಕಾರ, ಅರುವ ಒಳಗೊಂಡ ಹಿರಿಯರ ಉಸ್ತುವಾರಿ ಇತ್ತು. ಒಪ್ಪಿತವಾದ ಯಾವುದೇ ವಿಶಿಷ್ಟ ಶಾಸ್ತಾçದಿಗಳನ್ನು ಉದ್ದೇಶಪೂರ್ವಕವಾಗಿ ಯಾವುದೇ ವ್ಯಕ್ತಿ, ಯಾವುದೇ ಸಂಸಾರ ಕಡೆಗಣಿಸಿದಲ್ಲಿ... ಅಂತಹವರಿಗೆ ‘‘ತಪ್ಪುಪಣ’’ ವಾಗ್ದಂಡನೆ, ಪೊರಂಬಡಿಯAತಹ ಕಠಿಣ ಶಿಸ್ತು ಕ್ರಮ ಕಾಯ್ದಿರುತಿತ್ತು. ಹೀಗಾಗಿ ಎಲ್ಲರೂ ಸ್ವಾಭಿಮಾನದಿಂದಲೇ ಪದ್ಧತಿ ಪರಂಪರೆಯ ಕಟ್ಟುಪಾಡಿಗೆ ಬದ್ದರಾಗಿ ನಡೆದುಕೊಳ್ಳುತ್ತಿದ್ದರು.

೧೯೭೦ರ ಸಂದರ್ಭದಲ್ಲಿ : ೧೯೭೦ ರ ಬಳಿಕ ಮುಖ್ಯಪಟ್ಟಣ ಕೇಂದ್ರಗಳಲ್ಲಿ ಖಾಸಗಿ ಒಡೆತನದ ಸುಸಜ್ಜಿತ ಕಲ್ಯಾಣಮಂಟಪಗಳು ತಲೆ ಎತ್ತಲಾರಂಭಿಸಿತು. ಕಾಲಚಕ್ರ ಉರುಳಿದಲ್ಲಿ... ಆರ್ಥಿಕವಾಗಿ ತುಸು ಚೇತರಿಸಿಕೊಂಡ ಕೊಡವ ಜನಾಂಗ ಮನೆಮದುವೆ, ಐನ್‌ಮನೆ ಮದುವೆ, ಊರಮದುವೆಯನ್ನು ಪೂರ್ತಿ ಬಿಟ್ಟು, ಪಟ್ಟಣಗಳ ಬಾಡಿಗೆ ಕಟ್ಟಡಗಳತ್ತ ಒಲವು ತೋರಿಸಲಾರಂಭಿಸಿದರು.

ಸಡಿಲಗೊAಡ ಪದ್ಧತಿಯ ಹಿಡಿತ: ಈ ಕಾಲಘಟ್ಟದಲ್ಲಿ ಪೇಟೆ - ಕೋಟೆಯಲ್ಲಿ ಜರುಗುತ್ತಿದ್ದ ಮದುವೆಯಲ್ಲಿ ಪಟ್ಟೆದಾರ - ಕೊರೋಕಾರ - ಅರುವ ಸೇರಿದ ಹಿರಿಯರ ಮಾರ್ಗದರ್ಶನ ಮತ್ತು ಉಸ್ತುವಾರಿ ಕೊರತೆ ಉಂಟಾಗಿ, ಪದ್ಧತಿಯ ಹಿಡಿತ ಸಡಿಲಗೊಳ್ಳಲುತೊಡಗಿತು. ಇದರ ಫಲವಾಗಿ ಕೊಡವ ವಿವಾಹ ಪದ್ಧತಿಯ ಮೂಲ ಶಾಸ್ತಾçದಿ ಕ್ರಿಯೆಗಳು ತನ್ನ ಮೂಲತನದ ಸೊಗಡನ್ನು ಕಳೆದುಕೊಂಡು, ಆಧುನಿಕತೆಯ ಭರಾಟೆಯಲ್ಲಿ ಹೆಜ್ಜೆ ಇಡತೊಡಗಿತು. ಈ ಬಗೆಯ ನಾಗರಿಕತೆ - ನಗರೀಕರಣದಿಂದ ಕೆಲವು ಮೂಲಶಾಸ್ತç ಕೈಬಿಟ್ಟು ಹೋಗಿ, ಅನುಕೂಲಸೂತ್ರದ ಇನ್ನಿತರ ಕೆಲವು ನೂತನ ಅಂಶಗಳು ಪದ್ಧತಿಯ ತೆಕ್ಕೆಗೆ ಸೇರ್ಪಡೆಗೊಂಡಿತು.

ಅAದಿನ ಆಚರಣೆ: ಇದಕ್ಕೆ ಉದಾಹರಣೆ ಹೀಗಿದೆ: ಹಿಂದೆ, ‘‘ಊರ್ ಕೂಡ್‌ವೊ’’ ಎಂಬ ಮೊದಲ ದಿನದ ಆಚರಣೆಯು ಸ್ವಂತದವರಿಗೂ, ಊರಿನವರಿಗೂ, ಮಾತ್ರ ಸೀಮಿತ ಆಗಿತ್ತು. ಇದನ್ನು ‘‘ಕರಿಕ್ ಮುರಿಪೊ’’... ಚಪ್ಪರ ಎಂದೂ ಕರೆಯುತ್ತಿದ್ದರು. ಅಂದು ಊರಿನವರು ಒಂದಾಗಿ ಸೇರಿ, ಚಪ್ಪರ ಹಾಕುವುದರಿಂದ ಪ್ರಾರಂಭಿಸಿ, ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸ್ವಇಚ್ಛೆಯಿಂದ ನೆರವೇರಿಸಿ, ರಾತ್ರಿ ಸಾಮೂಹಿಕ ಭೋಜನದ ನಂತರ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಅಂದಿನ ಆ ಸರಳತೆಯ ಆಚರಣೆ ಇಂದು ಬಹುತೇಕ ಆಡಂಬರದ ಪ್ರದರ್ಶನದಂತಾಗಿದೆ.

ಅAದಿನ ಶಾಸ್ತç - ಸಂಪ್ರದಾಯ: ಮಾರನೇ ದಿನ, ಮುಹೂರ್ತ ಕಳೆದು, ಊಟೋಪಚಾರ ಮುಗಿದ ನಂತರ, ಹಿಂದಿನ ಸಂಪ್ರದಾಯದAತೆ ವಧುವಿನ ಮನೆಗೆ ತೆರಳಿ - ಅಲ್ಲಿ ದಂಪತಿ ಮುಹೂರ್ತ ನಡೆಸಿ, ಆಕೆಯನ್ನು ಶಾಸ್ತೊçÃಕ್ತವಾಗಿ ವರನ ಮನೆಗೆ ಕರೆ ತಂದು, ಸಂಜೆ ಹೊತ್ತಿನಲ್ಲಿ ವರನ ಮನೆಯಲ್ಲಿ ‘‘ಚಾಣನೀರ್ ಕೈಪೊ’’ ಎನ್ನುವ ಶಾಸ್ತç ! ತವರು ಮನೆಯಿಂದ ನೂತನವಾಗಿ ವರನ ಮನೆಗೆ ಆಗಮಿಸಿದ ವಧುವಿಗೆ ವರನ ಗದ್ದೆ - ಹಿತ್ತಿಲು - ಹಟ್ಟಿ , ಕೊಟ್ಟಿಗೆಯ ಪರಿಚಯದೊಂದಿಗೆ ದನದ ಕೊಟ್ಟಿಗೆಯಿಂದ ಸಗಣಿಯನ್ನು ಸಾಂಕೇತಿಕವಾಗಿ ಹೊತ್ತು ಗದ್ದೆಗೆ ಸಾಗಿಸಿ, ಅಲ್ಲಿ ಅದನ್ನು ಭೂಮಿಗೆ ಒಪ್ಪಿಸಿ, ಭೂಮಿತಾಯಿಗೆ ನಮಿಸಬೇಕು. ಭಯ ಭಕ್ತಿಯಿಂದ ನಮಿಸಿ, ಭೂಮಿಯ ಹಕ್ಕನ್ನು ಮಾನಸಿಕವಾಗಿ ಪಡೆದು, ಬಳಿಕ ಮನೆಯ ಬಾವಿ - ಸೇದುವ ಬಾವಿಯ ಬಳಿಗೆ ತೆರಳಿ, ಶುದ್ಧಮುದ್ರಿಕೆಯಲ್ಲಿ ಬಾವಿಯಿಂದ ಶುದ್ಧ ನೀರು ತೆಗೆದು, ಜಲದೇವಿ ಕಾವೇರಮ್ಮೆಯನ್ನು ಭಕ್ತಿಯಲ್ಲಿ ನೆನೆದು, ಸ್ತುತಿಸಿ, ಶುದ್ಧ ನೀರನ್ನು ಬಿಂದಿಗೆಯಲ್ಲಿ ವರನ ಮನೆಗೆ ಹೊತ್ತೊಯ್ಯಬೇಕು. ಕುಲದೇವಿ ಕಾವೇರಮ್ಮೆಯನ್ನು ಭಕ್ತಿಯಿಂದ ನೆನೆದು, ಭಾಗ್ಯಲಕ್ಷಿö್ಮà ರೂಪದಲ್ಲಿ ಶಾಸ್ತೊçÃಕ್ತವಾಗಿ ವರನಮನೆ ಪ್ರವೇಶಿಸುವುದು... ಮನೆಯ ಹಕ್ಕನ್ನು ಪಡೆದಂತೆ.

ಕುಟುAಬ ಹಕ್ಕನ್ನು ಪಡೆಯುವಿಕೆ: ಮದುವಣಗಿತ್ತಿ ಶಾಸ್ತೊçÃಕ್ತವಾಗಿ ಗಂಗಾದೇವಿಯನ್ನು ತಲೆಯಲ್ಲಿ ಹೊತ್ತು, ಬಾಕೆಮನೆಯತ್ತ ದುಡಿಕೊಟ್ಟ್ಪಾಟ್ ವಾದ್ಯದೊಂದಿಗೆ ಸಾಗುವಾಗ ‘‘ಕುಂಞೆಮೊಟ್ಟ್ ಮಂಗಲಮೊಟ್ಟ್’’ ಎಂದು ಬಹು ನಿಧಾನವಾಗಿ ಮುಂದೆ ಮುಂದಕ್ಕೆ ಕಿರುಹೆಜ್ಜೆಗಳನ್ನು ಇಡಬೇಕು. ಆಗ ಎಲ್ಲಿಯೂ ಕಾಲು ಜೋಡಿಸಿ ನಿಲ್ಲಬಾರದು. ಆ ಸಂದರ್ಭದಲ್ಲಿ ವರನ ಕಿರಿಯ ಸಹೋದರರು ತಮಾಸಿ, ಕುತೂಹಲ, ಮನರಂಜನೆಗಾಗಿ ಮದುವಣಗಿತ್ತಿಯ ಮುಂದೆ ಕೊಡವಾಟ್‌ನ ನೃತ್ಯ ಮಾಡುತ್ತಾ ಮೆಲ್ಲೇ ಸಾಗಿ, ಭಾಗ್ಯಲಕ್ಷಿö್ಮ ರೂಪದ ಆಕೆಯನ್ನು ಮನೆ ತುಂಬಿಸಬೇಕು. ನೆಲ್ಲಕ್ಕಿ ನಡುಬಾಣೆಯಲ್ಲಿ ನೀರು ಇಳಿಸಿದ ಬಳಿಕ ನೂತನ ವಧುವಿಗೆ ಶಾಸ್ತೊçÃಕ್ತವಾಗಿ ಬೊಳ್ಳವ್ವ, ನೀಲವ್ವ, ಕಾಳವ್ವ ಎಂಬAತಹ ಹೊಸ ಕೊಡವ ಹೆಸರನ್ನು ಹಾಕಲಾಗುತ್ತದೆ.

ಆಧುನಿಕತೆಯ ಭರಾಟೆ: ಇದು ಹಿಂದಿನ ಸಂಪ್ರದಾಯಬದ್ಧ ನಡಾವಳಿಕೆ. ಕೆಲವು ವರ್ಷಗಳಿಂದೀಚೆಗೆ, ಕೆಲವರು ಆಧುನಿಕತೆಯ ಭರಾಟೆಯಲ್ಲಿ ಹಳೆಯ ಮೂಲ ಪದ್ಧತಿ ಪರಂಪರೆಯ ಮಹತ್ವವನ್ನು ತಿಳಿಯದೆ, ಅಥವಾ ತಪ್ಪಾಗಿ ಅರ್ಥೈಸಿಕೊಂಡು, ತಮ್ಮದೇ ಆದ ಧಾಟಿಯಲ್ಲಿ ಶಾಸ್ತಾçದಿಗಳನ್ನು ನಡೆಸುತ್ತಿರುವುದು... ಆತಂಕಕಾರಿ ಬೆಳವಣಿಗೆ ಆಗಿದೆ. ಹಿಂದಿನAತೆ, ತಕ್ಕಮುಖ್ಯಸ್ಥರ, ಪಟ್ಟೆದಾರ - ಕೊರೋಕಾರರ ತೀಕ್ಷ÷್ಣ ಹಿಡಿತ ಇಲ್ಲದಾಗಿದೆ. ಕಟ್ಟುಪಾಡುಗಳು ಹೆಚ್ಚು ಸಡಿಲವಾದುದರ ಫಲವಾಗಿ ಪದ್ಧತಿಯ ಮಹತ್ವ ದಿನೇ ದಿನೇ ಮೂಲೆಗುಂಪಾಗುತ್ತಿದೆ. ಇದನ್ನು ಹೀಗೆಯೇ ಬಿಟ್ಟರೆ, ಕೊಡವ ಸಂಸ್ಕೃತಿಯ ಮೂಲಕ್ಕೇ ಪೆಟ್ಟು ಬೀಳುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ, ಕ್ಷೀಣತೆಯ ಪರಿಣಾಮದಿಂದ ಮೂಲಾರ್ಥ ಕಳೆದುಕೊಳ್ಳುತ್ತಿರುವ ಕೊಡವ ಮಂಗಲ ಪದ್ಧತಿಯ ಒಂದೊAದೇ ಅಂಶಗಳನ್ನು ಸವಾಲಾಗಿ ಕೈಗೆತ್ತಿಕೊಂಡು, ವ್ಯಾಪಕ ಜನಜಾಗೃತಿಯ ಮೂಲಕ, ಪ್ರಚಾರಾಂದೋಲನ ರೂಪದಲ್ಲಿ ಪರಿಹಾರ ಕಂಡು ಕೊಳ್ಳುವ ಪ್ರಯತ್ನಕ್ಕೆ ಕ್ರಿಯಾಯೋಜನೆ ರೂಪಿಸಿದ ಸಂಘಟನೆಯೆ ‘‘ತಿರಿಬೊಳ್‌ಚ ಕೊಡವ ಸಂಘ’’ ಎಂಬುದು.

ಊರಿನವರಿಗೂ, ಮಾತ್ರ ಸೀಮಿತ ಆಗಿತ್ತು. ಇದನ್ನು ‘‘ಕರಿಕ್ ಮುರಿಪೊ’’... ಚಪ್ಪರ ಎಂದೂ ಕರೆಯುತ್ತಿದ್ದರು. ಅಂದು ಊರಿನವರು ಒಂದಾಗಿ ಸೇರಿ, ಚಪ್ಪರ ಹಾಕುವುದರಿಂದ ಪ್ರಾರಂಭಿಸಿ, ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸ್ವಇಚ್ಛೆಯಿಂದ ನೆರವೇರಿಸಿ, ರಾತ್ರಿ ಸಾಮೂಹಿಕ ಭೋಜನದ ನಂತರ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಅಂದಿನ ಆ ಸರಳತೆಯ ಆಚರಣೆ ಇಂದು ಬಹುತೇಕ ಆಡಂಬರದ ಪ್ರದರ್ಶನದಂತಾಗಿದೆ.

ಅAದಿನ ಶಾಸ್ತç - ಸಂಪ್ರದಾಯ: ಮಾರನೇ ದಿನ, ಮುಹೂರ್ತ ಕಳೆದು, ಊಟೋಪಚಾರ ಮುಗಿದ ನಂತರ, ಹಿಂದಿನ ಸಂಪ್ರದಾಯದAತೆ ವಧುವಿನ ಮನೆಗೆ ತೆರಳಿ - ಅಲ್ಲಿ ದಂಪತಿ ಮುಹೂರ್ತ ನಡೆಸಿ, ಆಕೆಯನ್ನು ಶಾಸ್ತೊçÃಕ್ತವಾಗಿ ವರನ ಮನೆಗೆ ಕರೆ ತಂದು, ಸಂಜೆ ಹೊತ್ತಿನಲ್ಲಿ ವರನ ಮನೆಯಲ್ಲಿ ‘‘ಚಾಣನೀರ್ ಕೈಪೊ’’ ಎನ್ನುವ ಶಾಸ್ತç ! ತವರು ಮನೆಯಿಂದ ನೂತನವಾಗಿ ವರನ ಮನೆಗೆ ಆಗಮಿಸಿದ ವಧುವಿಗೆ ವರನ ಗದ್ದೆ - ಹಿತ್ತಿಲು - ಹಟ್ಟಿ , ಕೊಟ್ಟಿಗೆಯ ಪರಿಚಯದೊಂದಿಗೆ ದನದ ಕೊಟ್ಟಿಗೆಯಿಂದ ಸಗಣಿಯನ್ನು ಸಾಂಕೇತಿಕವಾಗಿ ಹೊತ್ತು ಗದ್ದೆಗೆ ಸಾಗಿಸಿ, ಅಲ್ಲಿ ಅದನ್ನು ಭೂಮಿಗೆ ಒಪ್ಪಿಸಿ, ಭೂಮಿತಾಯಿಗೆ ನಮಿಸಬೇಕು. ಭಯ ಭಕ್ತಿಯಿಂದ ನಮಿಸಿ, ಭೂಮಿಯ ಹಕ್ಕನ್ನು ಮಾನಸಿಕವಾಗಿ ಪಡೆದು, ಬಳಿಕ ಮನೆಯ ಬಾವಿ - ಸೇದುವ ಬಾವಿಯ ಬಳಿಗೆ ತೆರಳಿ, ಶುದ್ಧಮುದ್ರಿಕೆಯಲ್ಲಿ ಬಾವಿಯಿಂದ ಶುದ್ಧ ನೀರು ತೆಗೆದು, ಜಲದೇವಿ ಕಾವೇರಮ್ಮೆಯನ್ನು ಭಕ್ತಿಯಲ್ಲಿ ನೆನೆದು, ಸ್ತುತಿಸಿ, ಶುದ್ಧ ನೀರನ್ನು ಬಿಂದಿಗೆಯಲ್ಲಿ ವರನ ಮನೆಗೆ ಹೊತ್ತೊಯ್ಯಬೇಕು. ಕುಲದೇವಿ ಕಾವೇರಮ್ಮೆಯನ್ನು ಭಕ್ತಿಯಿಂದ ನೆನೆದು, ಭಾಗ್ಯಲಕ್ಷಿö್ಮà ರೂಪದಲ್ಲಿ ಶಾಸ್ತೊçÃಕ್ತವಾಗಿ ವರನಮನೆ ಪ್ರವೇಶಿಸುವುದು... ಮನೆಯ ಹಕ್ಕನ್ನು ಪಡೆದಂತೆ.

ಕುಟುAಬ ಹಕ್ಕನ್ನು ಪಡೆಯುವಿಕೆ: ಮದುವಣಗಿತ್ತಿ ಶಾಸ್ತೊçÃಕ್ತವಾಗಿ ಗಂಗಾದೇವಿಯನ್ನು ತಲೆಯಲ್ಲಿ ಹೊತ್ತು, ಬಾಕೆಮನೆಯತ್ತ ದುಡಿಕೊಟ್ಟ್ಪಾಟ್ ವಾದ್ಯದೊಂದಿಗೆ ಸಾಗುವಾಗ ‘‘ಕುಂಞÉಮೊಟ್ಟ್ ಮಂಗಲಮೊಟ್ಟ್’’ ಎಂದು ಬಹು ನಿಧಾನವಾಗಿ ಮುಂದೆ ಮುಂದಕ್ಕೆ ಕಿರುಹೆಜ್ಜೆಗಳನ್ನು ಇಡಬೇಕು. ಆಗ ಎಲ್ಲಿಯೂ ಕಾಲು ಜೋಡಿಸಿ ನಿಲ್ಲಬಾರದು. ಆ ಸಂದರ್ಭದಲ್ಲಿ ವರನ ಕಿರಿಯ ಸಹೋದರರು ತಮಾಸಿ, ಕುತೂಹಲ, ಮನರಂಜನೆಗಾಗಿ ಮದುವಣಗಿತ್ತಿಯ ಮುಂದೆ ಕೊಡವಾಟ್‌ನ ನೃತ್ಯ ಮಾಡುತ್ತಾ ಮೆಲ್ಲೇ ಸಾಗಿ, ಭಾಗ್ಯಲಕ್ಷಿö್ಮ ರೂಪದ ಆಕೆಯನ್ನು ಮನೆ ತುಂಬಿಸಬೇಕು. ನೆಲ್ಲಕ್ಕಿ ನಡುಬಾಣೆಯಲ್ಲಿ ನೀರು ಇಳಿಸಿದ ಬಳಿಕ ನೂತನ ವಧುವಿಗೆ ಶಾಸ್ತೊçÃಕ್ತವಾಗಿ ಬೊಳ್ಳವ್ವ, ನೀಲವ್ವ, ಕಾಳವ್ವ ಎಂಬAತಹ ಹೊಸ ಕೊಡವ ಹೆಸರನ್ನು ಹಾಕಲಾಗುತ್ತದೆ.

ಆಧುನಿಕತೆಯ ಭರಾಟೆ: ಇದು ಹಿಂದಿನ ಸಂಪ್ರದಾಯಬದ್ಧ ನಡಾವಳಿಕೆ. ಕೆಲವು ವರ್ಷಗಳಿಂದೀಚೆಗೆ, ಕೆಲವರು ಆಧುನಿಕತೆಯ ಭರಾಟೆಯಲ್ಲಿ ಹಳೆಯ ಮೂಲ ಪದ್ಧತಿ ಪರಂಪರೆಯ ಮಹತ್ವವನ್ನು ತಿಳಿಯದೆ, ಅಥವಾ ತಪ್ಪಾಗಿ ಅರ್ಥೈಸಿಕೊಂಡು, ತಮ್ಮದೇ ಆದ ಧಾಟಿಯಲ್ಲಿ ಶಾಸ್ತಾçದಿಗಳನ್ನು ನಡೆಸುತ್ತಿರುವುದು... ಆತಂಕಕಾರಿ ಬೆಳವಣಿಗೆ ಆಗಿದೆ. ಹಿಂದಿನAತೆ, ತಕ್ಕಮುಖ್ಯಸ್ಥರ, ಪಟ್ಟೆದಾರ - ಕೊರೋಕಾರರ ತೀಕ್ಷ÷್ಣ ಹಿಡಿತ ಇಲ್ಲದಾಗಿದೆ. ಕಟ್ಟುಪಾಡುಗಳು ಹೆಚ್ಚು ಸಡಿಲವಾದುದರ ಫಲವಾಗಿ ಪದ್ಧತಿಯ ಮಹತ್ವ ದಿನೇ ದಿನೇ ಮೂಲೆಗುಂಪಾಗುತ್ತಿದೆ. ಇದನ್ನು ಹೀಗೆಯೇ ಬಿಟ್ಟರೆ, ಕೊಡವ ಸಂಸ್ಕೃತಿಯ ಮೂಲಕ್ಕೇ ಪೆಟ್ಟು ಬೀಳುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ, ಕ್ಷೀಣತೆಯ ಪರಿಣಾಮದಿಂದ ಮೂಲಾರ್ಥ ಕಳೆದುಕೊಳ್ಳುತ್ತಿರುವ ಕೊಡವ ಮಂಗಲ ಪದ್ಧತಿಯ ಒಂದೊAದೇ ಅಂಶಗಳನ್ನು ಸವಾಲಾಗಿ ಕೈಗೆತ್ತಿಕೊಂಡು, ವ್ಯಾಪಕ ಜನಜಾಗೃತಿಯ ಮೂಲಕ, ಪ್ರಚಾರಾಂದೋಲನ ರೂಪದಲ್ಲಿ ಪರಿಹಾರ ಕಂಡು ಕೊಳ್ಳುವ ಪ್ರಯತ್ನಕ್ಕೆ ಕ್ರಿಯಾಯೋಜನೆ ರೂಪಿಸಿದ ಸಂಘಟನೆಯೆ ‘‘ತಿರಿಬೊಳ್‌ಚ ಕೊಡವ ಸಂಘ’’ ಎಂಬುದು.

ವಧುವಿಗೆ ಶಾಸ್ತೊçÃಕ್ತವಾಗಿ ಚೋಂದವ್ವ, ಬೊಳ್ಳವ್ವ, ಗಂಗವ್ವ... ಎನ್ನುವಂತಹ ಕೊಡವ ಹೆಸರು ಹಾಕಬೇಕು. (೧೦) ಈ ಬಗೆಯ ಯಾವುದೇ ಸಂದರ್ಭದಲ್ಲಿ ವರನು ವಧುವಿಗೆ ಕೆಂಪು ಗುಲಾಬಿ ಹೂವನ್ನು ನೀಡುವುದು, ಕೇಕು ಕತ್ತರಿಸುವುದು, ಶಾಂಪೇನು ಚಿಮ್ಮಿಸುವುದು ಕೂಡದು. (೧೧) ಕುಟುಂಬ ಮಹಾಸಭೆ, ಕಾರೋಣಂಗ್ ಕೊಡ್‌ಪೊ, ಪತ್ತಾಲೋದಿ, ಹಬ್ಬಹರಿದಿನಗಳಂತಹ ಸಂದರ್ಭದಲ್ಲಿ ಈ ಕಟ್ಟುಪಾಡುಗಳನ್ನು ಪ್ರತೀ ಕುಟುಂಬದ ಹಿರಿಯರು ಕಿರಿಯರಿಗೆ ಮನದಟ್ಟು ಮಾಡಿ ಕೊಡಬೇಕು. (೧೨) ಕುಟುಂಬ ಪಟ್ಟೆದಾರ, ಕೊರೋಕಾರ, ಹಿರಿಯರು ಈ ಬಗೆಯ ನೂತನ ನೀತಿ - ನಿಯಮಾವಳಿಗಳನ್ನು ಕಡ್ಡಾಯ ಮಾಡಿ, ಎಲ್ಲರೂ ಇದನ್ನು ಚಾಚೂ ತಪ್ಪದೆ ಪಾಲಿಸುವಂತೆ ತಾಕೀತು ಮಾಡಬೇಕು. (೧೩) ಮಕ್ಕಳ ವಿವಾಹ ನಿರ್ವಹಿಸುವ ಪೋಷಕರು ತಮ್ಮ ಮಕ್ಕಳ ಬಾಳು ಭವಿಷ್ಯದ ಉಳಿವಿಗಾಗಿ ಈ ಸರಳ ಸೂತ್ರವನ್ನು ಹಿಂದಿನ ಪದ್ದತಿಗೊಪ್ಪುವಂತೆ ನಡೆಸಲು ವಿಶೇಷ ಆಸಕ್ತಿ ವಹಿಸಿ, ಜವಾಬ್ದಾರಿ ಹೊರಬೇಕು. (೧೪) ಈ ನೂತನ ರೀತಿ ನೀತಿ ಶೂನ್ಯಮಾಸ ಕಳೆದು ಇದೇ ದಿನಾಂಕÀ ೧೫.೦೪.೨೦೨೧ ರ ನೂತನ ಎಡ್‌ಮ್ಯಾರ್‌ನಿಂದ ಕಾರ್ಯರೂಪಕ್ಕೆ ಬರುವಂತೆ ಸರ್ವರ ಸಹಕಾರ ಬಯಸಲಾಗಿದೆ.

(೧೫) ಈ ನೂತನ ರೀತಿ ರಿವಾಜುಗಳ ವಿವರಗಳನ್ನು ದೇಶಮಟ್ಟದ ಎಲ್ಲಾ ಕೊಡವ ಸಮಾಜ, ಕೊಡವ ಸಂಘ-ಸAಸ್ಥೆ, ಕಲ್ಯಾಣ ಮಂಟಪಗಳಿಗೆ ಲಿಖಿತ ರೂಪದಲ್ಲಿ ತಲಪಿಸುವ ಜವಾಬ್ದಾರಿಯು ‘‘ತಿರಿಬೊಳ್‌ಚ ಕೊಡವ ಸಂಘ’’ಕ್ಕೆ ಇದೆ. (೧೬) ಇದರ ವಿವರವನ್ನು ಎಲ್ಲಾ ಕೊಡವ ಸಮಾಜ, ಕೊಡವ ಸಂಘ ಸಂಸ್ಥೆ, ಕಲ್ಯಾಣಮಂಟಪಗಳು ತಮ್ಮ ತಮ್ಮ ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಿ ಸಹಕರಿಸುವಂತೆ ಕೋರಲಾಯಿತು. (೧೭) ಕೊಡವಾಮೆಯನ್ನು ಉಳಿಸುವ ನಿಟ್ಟಿನಲ್ಲಿ ಮಾಡಲಾಗಿರುವ ಈ ಸುಧಾರಣಾ ಕ್ರಮಕ್ಕೆ ಇಡಿಯ ಕೊಡವ ಜನಾಂಗದ ಸಹಾಯ - ಸಹಕಾರ - ಪ್ರೋತ್ಸಾಹ ಎಂದಿಗೂ ಇರಲಿ.

೩೦.೦೩.೨೦೨೧ರ ಸಭೆಯಲ್ಲಿ ಹಾಜರಿದ್ದು, ಅಭಿಪ್ರಾಯ ವ್ಯಕ್ತಪಡಿಸಿ, ಮೇಲಿನ ನಿರ್ಣಯಕ್ಕೆ ಜಿಲ್ಲೆಯ ೪೮ ಮಂದಿ ಕೊಡವ ಪ್ರಮುಖರು ಸಹಕರಿಸಿದ್ದಾರೆ.

ಪದ್ಧತಿಯ ಶ್ರೇಷ್ಠತೆ: ಪದ್ಧ್ದತಿ ಯಾವುದೇ ಇರಲಿ, ಅದು ಎಂದಿಗೂ ಶ್ರೇಷ್ಠವೇ. ಸಂಸ್ಕೃತಿಯAತಹ ಸೂಕ್ಷಾö್ಮತಿಸೂಕ್ಷö್ಮ ವಿಷಯಗಳು ಬಂದಾಗ... ಅವನ್ನು ಮೂಲತನದಲ್ಲಿ ಉಳಿಸಿ ಬೆಳೆಸುವುದೇ ಅನುಯಾಯಿಗಳ ಜವಾಬ್ದಾರಿ ಆಗಿರಬೇಕು. ಕೊಡವ ಸಂಸ್ಕೃತಿಯ ಶ್ರೇಷ್ಠತೆಗೆ ಅದರಲ್ಲಿ ಅಡಕವಾಗಿರುವ ನೂರೆಂಟು ವಿಶಿಷ್ಟತೆಗಳೇ ಮುಖ್ಯ ಕಾರಣ. ಹೀಗಿರುವಲ್ಲಿ, ಕೊಡವ ವಿವಾಹ ಪದ್ದತಿಯಲ್ಲಿ ಆಳಿಗೊಬ್ಬ, ಕುಟುಂಬಗೊಬ್ಬ, ಊರಿಗೊಬ್ಬರಂತೆ ಬದಲಾವಣೆ - ಮಾರ್ಪಾಡುಗಳನ್ನು ಮಾಡುವುದು ಸಹ್ಯವಲ್ಲ, ಕೂಡದು. ಪದ್ದತಿಯು ಮೂಲತನದಲ್ಲಿಯೇ ಉಳಿದು, ವಿಜೃಂಭಿಸುವAತೆ ಸಂಬAಧಪಟ್ಟವರೆಲ್ಲರು ಅರಿತು ಮುಂದಡಿ ಇಡುವಂತಾಗಲಿ. ಅನಾದಿ ಕಾಲದ ಹಿರಿಯರು ರೂಪಿಸಿದ ಪದ್ಧತಿಯನ್ನು ಬದಲಿಸಲು ಕಿರಿಯ ಪೀಳಿಗೆಗೆ ನೈತಿಕ ಹಕ್ಕು ಇಲ್ಲ ಎಂಬುದನ್ನು ನಾವು ಮರೆಯ ಬಾರದು. ಕೊಡವ ಸಂಸ್ಕೃತಿ - ಪದ್ಧತಿಯು ಹಿಂದಿನAತೆ ಪ್ರಕಾಶಿಸಲು ಎಲ್ಲಾ ಕೊಡವರು ಮೈಕೊಡವಿ ನಿಲ್ಲಬೇಕು ಎಂಬದು ಅಭಿಮಾನಿಗಳ ಆಶಯ.

- ಉಳ್ಳಿಯಡ ಎಂ. ಪೂವಯ್ಯ, ಮಡಿಕೇರಿ, ಫೋನ್ : ೯೪೪೮೭೨೦೧೬೮