ನವದೆಹಲಿ, ಏ. ೧೧: ದೇಶದಲ್ಲಿ ಕೊರೊನಾ ಮಹಾಮಾರಿ ಉಲ್ಭಣಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಸೋಂಕು ನಿರೋಧಕ ಔಷಧಿ ರೆಮ್ ಡೆಸಿವಿರ್ ರಫ್ತು ಮಾಡುವುದನ್ನು ನಿಷೇಧಿಸಿದೆ. ದೇಶದ ಕೋವಿಡ್-೧೯ ಪರಿಸ್ಥಿತಿ ಸುಧಾರಿಸುವವರೆಗೆ ಇಂಜೆಕ್ಷನ್ ರೆಮ್ಡೆಸಿವಿರ್ ಮತ್ತು ರೆಮ್ಡೆಸಿವಿರ್ ಆಕ್ಟಿವ್ ಫಾರ್ಮಾಸ್ಯುಟಿಕಲ್ ಪದಾರ್ಥಗಳು (ಎಪಿಐ) ರಫ್ತು ಮಾಡುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರೆಮ್ಡೆಸಿವಿರ್ ಅನ್ನು ಪ್ರಮುಖ ಆಂಟಿ-ವೈರಲ್ ಔಷಧವೆಂದು ಪರಿಗಣಿಸಲಾಗಿದೆ.
ಮೊದಲ ಪಂದ್ಯದಲ್ಲೇ ಭಾರೀ ದಂಡಕ್ಕೆ ಗುರಿಯಾದ ಧೋನಿ!
ಮುಂಬೈ, ಏ. ೧೧: ಐಪಿಎಲ್‌ನ ಎರಡನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆ ದಂಡ ವಿಧಿಸಲಾಗಿದೆ. ತಾ. ೧೦ ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ, ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಏಳು ವಿಕೆಟ್ ಸೋಲು ಕಂಡಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಚೆನ್ನೈ ೨೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೮೮ ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದೆಹಲಿ ೧೮.೪ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೯೦ ರನ್ ಸೇರಿಸಿತು. ಧೋನಿಯ ಚೆನ್ನೈ ತಂಡ ನಿಧಾನ ಓವರ್ ಬೌಲಿಂಗ್ ನಡೆಸಿದ್ದು, ಶಿಕ್ಷೆಗೆ ಗುರಿಯಾಗಿದೆ. ತಂಡದ ನೀತಿ ಸಂಹಿತೆ ಉಲ್ಲಂಘನೆಯ ಮೊದಲ ಪ್ರಕರಣ ಇದಾಗಿದ್ದು, ಧೋನಿಗೆ ೧೨ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ.
ನಮ್ಮಪ್ಪ ಭಾರಿ ನಿಧಿ ಅಡಗಿಸಿಟ್ಟಿದ್ದಾನೆ; ಕಾಡುಗಳ್ಳ ವೀರಪ್ಪನ್ ಪುತ್ರಿ ಹೇಳಿಕೆ
ಚೆನ್ನೈ, ಏ. ೧೧: ಸತ್ಯಮಂಗಲA ಅರಣ್ಯದಲ್ಲಿ ನಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಅಡಗಿಸಿಟ್ಟಿದ್ದಾರೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ವಾಲ್ಮುರಿಮಾಯಿ ಕಚ್ಚಿಯಲ್ಲಿ ವಾಸಿಸುತ್ತಿರುವ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಅವರು ರನ್ ಪಿಳ್ಳೈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದ ವಿಚಾರವಾಗಿ ಚೆನ್ನೈನಲ್ಲಿ ಚಿತ್ರ ತಂಡ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯಲಕ್ಷ್ಮಿ, ತಮ್ಮ ತಂದೆ ವೀರಪ್ಪನ್ ವಾಸಿಸುತ್ತಿದ್ದ ಸತ್ಯಮಂಗಲA ಕಾಡಿನಲ್ಲಿ ಬೃಹತ್ ಫಂಡ್ ಡಂಪ್ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆ ವೀರಪ್ಪನ್ ಅವರಿಗೆ ಸತ್ಯಮಂಗಲA ಕಾಡು ಎಂದರೆ ತುಂಬಾ ಇಷ್ಟ. ಸತ್ಯಮಂಗಲA ಕಾಡಿನಲ್ಲಿ ಅವರು ಬಹಳ ಕಾಲ ವಾಸಿಸುತ್ತಿದ್ದರು ಎಂಬುದು ನಮಗೆ ನೆನಪಿದೆ. ಈ ಕಾಡಿನಲ್ಲಿ ತನ್ನ ತಂದೆ ಮರೆಮಾಡಿದ ದೊಡ್ಡ ನಿಧಿ ಇದೆ ಮತ್ತು ಅದನ್ನು ಕಂಡುಹಿಡಿಯುವ ಅಗತ್ಯವಿದೆ. ಇದರ ಬಗ್ಗೆ ಮಾಹಿತಿ ಇದ್ದ ಅವರ ಅನುಯಾಯಿಗಳು ಯಾರೂ ಈಗ ಬದುಕಿಲ್ಲ. ಹೀಗಾಗಿ ಈ ನಿಧಿ ಎಲ್ಲಿದೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಇನ್ನೂ ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.