ಮಡಿಕೇರಿ, ಏ.೧೦ : ಮಡಿಕೇರಿ ನಗರದ ಕಸ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಸಂಬAಧ ಸರಕಾರದ ವತಿಯಿಂದ ಗುರುತಿಸಲಾಗಿರುವ ಜಾಗಕ್ಕೆ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಿದವರೇ ಪರ್ಯಾಯ ಜಾಗ ಖರೀದಿಸಿ, ಅದಕ್ಕೆ ಬೇಕಾಗುವ ಹಣವನ್ನು ನ್ಯಾಯಾಲಯಕ್ಕೆ ಸಂದಾಯ ಮಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ.ಮಡಿಕೇರಿ ನಗರದ ಕಸವನ್ನು ಅವೈಜ್ಞಾನಿಕವಾಗಿ ಸ್ಟೋನ್ ಹಿಲ್ ಬಳಿ ಸುರಿಯುತ್ತಿರುವದರಿಂದ ಸಮಸ್ಯೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಹೋರಾಟದ ಫಲವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ನಗರದ ಹೊರ ವಲಯದ ಎರಡನೇ ಮೊಣ್ಣಂಗೇರಿಯ ಸ.ನಂ.೨೦/೧ರಲ್ಲಿ ಹತ್ತು ಎಕರೆ ಜಾಗ ಮಂಜೂರು ಮಾಡಿ ನಗರ ಸಭೆಗೆ ಹಸ್ತಾಂತರ ಮಾಡಿತ್ತು. ಆದರೆ ಈ ಜಾಗದಲ್ಲಿ ಕಸ ಹಾಕುವದರಿಂದ ಜನವಸತಿ, ಮಡಿಕೇರಿ, ಏ.೧೦ : ಮಡಿಕೇರಿ ನಗರದ ಕಸ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಸಂಬAಧ ಸರಕಾರದ ವತಿಯಿಂದ ಗುರುತಿಸಲಾಗಿರುವ ಜಾಗಕ್ಕೆ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಿದವರೇ ಪರ್ಯಾಯ ಜಾಗ ಖರೀದಿಸಿ, ಅದಕ್ಕೆ ಬೇಕಾಗುವ ಹಣವನ್ನು ನ್ಯಾಯಾಲಯಕ್ಕೆ ಸಂದಾಯ ಮಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ.

ಮಡಿಕೇರಿ ನಗರದ ಕಸವನ್ನು ಅವೈಜ್ಞಾನಿಕವಾಗಿ ಸ್ಟೋನ್ ಹಿಲ್ ಬಳಿ ಸುರಿಯುತ್ತಿರುವದರಿಂದ ಸಮಸ್ಯೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಹೋರಾಟದ ಫಲವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ನಗರದ ಹೊರ ವಲಯದ ಎರಡನೇ ಮೊಣ್ಣಂಗೇರಿಯ ಸ.ನಂ.೨೦/೧ರಲ್ಲಿ ಹತ್ತು ಎಕರೆ ಜಾಗ ಮಂಜೂರು ಮಾಡಿ ನಗರ ಸಭೆಗೆ ಹಸ್ತಾಂತರ ಮಾಡಿತ್ತು. ಆದರೆ ಈ ಜಾಗದಲ್ಲಿ ಕಸ ಹಾಕುವದರಿಂದ ಜನವಸತಿ, ೭ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ಅರ್ಜಿದಾರರಾದ ಎಸ್ ಆರ್ ವಿ ಕೆ ಪರ ವಕೀಲರಾದ ಅನುಚೆಂಗಪ್ಪ ಅವರು, ಖಾಸಗಿ ಹೊಟೇಲ್ ಹಾಗೂ ಹೋಂಸ್ಟೇಗಳ ಲಾಬಿಯಿಂದಾಗಿ ಕೆಲವರನ್ನು ಮುಂದೆ ಬಿಟ್ಟು ಆಕ್ಷೇಪ ಮಾಡಲಾಗುತ್ತಿದೆ. ಅಲ್ಲದೆ, ಕೆಲವರು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವದರಿAದ ಅವರುಗಳ ಜಾಗಕ್ಕೆ ತೊಂದರೆ ಯಾಗಲಿದೆ ಎಂಬ ಕಾರಣಕ್ಕಾಗಿ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಾ ಯೋಜನೆ ವಿಳಂಬವಾಗಲು ಕಾರಣರಾಗುತ್ತಿದ್ದಾರೆ ಎಂದು ಅರ್ಜಿ ಸಲ್ಲಿಸಿದರು.

ವರದಿ ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಿದ ಹಿರಿಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ ಒಕ ಹಾಗೂ ಸಂಜಯ್ ಗೌಡ ಅವರುಗಳಿದ್ದ ಪೀಠ; ಪ್ರಸ್ತುತ ಗುರುತಿಸಲಾಗಿರುವ ಜಾಗಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವವರೇ ಪರ್ಯಾಯ ಜಾಗ ಗುರುತಿಸಿ, ಅದನ್ನು ಖರೀದಿಸಲು ಬೇಕಾಗುವ ಮೊತ್ತವನ್ನು ನ್ಯಾಯಾಲಯಕ್ಕೆ ಸಂದಾಯ ಮಾಡಬೇಕು. ನಂತರದಲ್ಲಿ ಜಾಗವನ್ನು ನಗರಸಭೆಗೆ ಹಸ್ತಾಂತರ ಮಾಡಬೇಕು ಎಂದು ಹೇಳಿದೆ. ಅಲ್ಲದೆ ಈ ಸಂಬAಧ ವಿಚಾರಣೆಯನ್ನು ತಾ.೧೫ಕ್ಕೆ ಕಾಯ್ದಿರಿಸಲಾಗಿದೆ. - ಸಂತೋಷ್