ವೀರಾಜಪೇಟೆ, ಏ. ೧೦: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತರಾಗಬೇಕು. ಬಾಲ ಕಾರ್ಮಿಕರಾಗಿ ದುಡಿಯವ ಮಕ್ಕಳ ಪೂರ್ಣ ವಿವರ ಹಾಗೂ ಬಾಲ್ಯ ವಿವಾಹ ತಡೆಯುವಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ. ಪೋಕ್ಸೊ ಕಾಯಿದೆ, ಮಕ್ಕಳ ದೌರ್ಜನ್ಯ ತಡೆಯ ಬಗೆಗಿನ ವರದಿಯನ್ನು ಒಂದು ತಿಂಗಳೊಳಗೆ ಆಯೋಗಕ್ಕೆ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಡಾ ಅಂತೋಣಿ ಸಬಾಸ್ಟಿಯನ್ ಸೂಚಿಸಿದರು.

ಪಟ್ಟಣ ಪಂಚಾಯಿತಿ ಸಭಾ ಗಂಣದಲ್ಲಿ ತಾಲೂಕು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಿಡಿಪಿಒ ಸೀತಾಲಕ್ಷಿö್ಮ ವೀರಾಜಪೇಟೆ ತಾಲೂಕಿನ ಎಲ್ಲಾ ಕಡೆಗಳಲ್ಲಿ ಸಮೀಕ್ಷೆ ನಡೆಸಿದ್ದು, ೫ ಬಾಲ ಕಾರ್ಮಿಕರನ್ನು ಗುರುತಿಸಲಾಗಿದೆ ಎಂದು ಹೇಳಿದಾಗ, ಆಯೋಗದ ಅಧ್ಯಕ್ಷರು ವೀರಾಜಪೇಟೆ ತಾಲೂಕಿನಲ್ಲಿ ಹಾಡಿಗಳು ಮತ್ತು ಕಾಲೋನಿಗಳು ಹೆಚ್ಚಾಗಿದ್ದು, ಬಾಲ ಕಾರ್ಮಿಕರ ಸಂಖ್ಯೆ ಕೂಡ ಹೆಚ್ಚಿದೆ. ಈ ಬಗ್ಗೆ ನಮ್ಮಲ್ಲಿ ಅಂಕಿ ಅಂಶಗಳಿದೆ. ಸಭೆಗೆ ತಪ್ಪು ಮಾಹಿತಿ ನೀಡಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ೨ ಬಾಲ್ಯ ವಿವಾಹ ನಿಶ್ಚಯ ಆಗಿರುವುದು ತಿಳಿದು ಬಂದಿದ್ದು, ಪೋಷಕರಿಗೆ ತಿಳುವಳಿಕೆ ನೀಡಿ ಮುಂದೂಡಲಾಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ೩೯ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೨೩ ಪ್ರಕರಣ ಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾಗಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ಡಿ ಶಂಕರಪ್ಪ, ಅಶೋಕ ಯರಗಟ್ಟಿ, ತಹಶೀÃಲ್ದಾರ್ ಯೋಗಾನಂದ್, ಸಿಡಿಪಿಒ ಸೀತಾಲಕ್ಷಿö್ಮ, ಶಿಕ್ಷಣ ಇಲಾಖೆ ತಾಲೂಕು ಸಂಯೋಜಕಿ ವನಜಾಕ್ಷಿ, ವೈದ್ಯಾಧಿಕಾರಿ ಡಾ. ಯತಿರಾಜ್ ಉಪಸ್ಥಿತರಿದ್ದರು.