ವೀರಾಜಪೇಟೆ, ಏ. ೧೦: ಸ್ಮರಣಿಯ ಕೆಲಸಗಳನ್ನು ಮಾಡಿದ ಮಹಾನ್ ಚೇತನಗಳ ಪುಣ್ಯ ದಿನಗಳನ್ನು ನೆನಪಿಸಿ ಕೊಳ್ಳುವುದರಿಂದ ಅವರ ಬದುಕು ಸಾರ್ಥಕವಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಹೇಳಿದರು.
ಅನುಸೂಚಿತ ಜಾತಿ ಅನುಸೂಚಿತ ಪಂಗಡ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ್ ರಾಮ್ ಅವರ ೧೧೪ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ಕಷ್ಟದಿಂದ ಬೆಳೆದು ಬಂದು ಉನ್ನತ ಹುದ್ದೆಗೇರಿ ದೇಶದ ಉಪ ಪ್ರಧಾನಿಯಾಗಿ ಉತ್ತಮ ಸೇವೆ ಸಲ್ಲಿಸಿದರು. ದೇಶ ಭೀಕರ ಬರಗಾಲ ಎದುರಿಸುತ್ತಿದ್ದ ಸಂದÀರ್ಭ ಆಹಾರ ಖಾತೆಯನ್ನು ಉತ್ತಮವಾಗಿ ನಿರ್ವಹಿಸಿ ಹಸಿರು ಕ್ರಾಂತಿಯ ಹರಿಕಾರ ಎಂದು ಬಿರುದನ್ನು ಪಡೆದುಕೊಂಡರು ಎಂದು ಹೇಳಿದರು.
ಉಪ ತಹಶೀಲ್ದಾರ್ ಪೊನ್ನು, ಸರ್ವೆ ಇಲಾಖೆ ಅಧೀಕ್ಷಕ ಬಿ.ಡಿ. ಅರುಣ್ ಮಾತನಾಡಿದರು. ಅನುಸೂಚಿತ ಜಾತಿ ಅನುಸೂಚಿತ ಪಂಗಡ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಿದೆೆÃðಶಕ ಪಳನಿ ಪ್ರಕಾಶ್ ಉಪಸ್ಥಿತರಿದ್ದರು.