ಚೆಯ್ಯಂಡಾಣೆ, ಏ. ೯: ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್ಮೆಂಟ್ ಫೋರಂ ಇದರ ವೀರಾಜಪೇಟೆ ತಾಲೂಕು ಸಮಿತಿಯನ್ನು ವೀರಾಜಪೇಟೆಯ ಕೂರ್ಗ್ ಹಾಲಿಡೈಸ್ ಕಚೇರಿಯಲ್ಲಿ ರಾಷ್ಟಿçÃಯ ಅಧ್ಯಕ್ಷ ನಸೀರ್ ಅಹಮದ್ ಚಿಕ್ಕಮಂಗಳೂರು ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶಫೀಕ್ ಗುಂಡಿಗೆರೆ ನಿರ್ವಹಿಸಿದರು. ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್ಮೆಂಟ್ ಫೋರಂನ ರಾಷ್ಟಿçÃಯ ಕಾರ್ಯಾಧ್ಯಕ್ಷ ಅಬೂಬಕ್ಕರ್ ಸಜಿಪ ಮಾತನಾಡಿ, ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್‌ಮೆಂಟ್ ಫೋರಂ ಯಾವ ರೀತಿ ಕಾರ್ಯಾಚರಿಸಬೇಕು ಮತ್ತು ಸಮುದಾಯಕ್ಕೆ ಸಿಗುವಂತಹ ಸೌಲಭ್ಯಗಳನ್ನು ಸಮುದಾಯಕ್ಕೆ ಯಾವ ರೀತಿ ತಲುಪಿಸಬೇಕು ಎಂಬ ಬಗ್ಗೆ ತಿಳಿಸಿದರು.

ನಂತರ ವೀರಾಜಪೇಟೆ ತಾಲೂಕು ಸಮಿತಿಯನ್ನು ಕೊಡಗು ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಶರೀಫ್ ಕುಶಾಲನಗರ ಇವರ ನಿರ್ದೇಶನದಂತೆ ರಚಿಸಲಾಯಿತು.

ಅಧ್ಯಕ್ಷರಾಗಿ ಫತ್ತಾಯಿ ಕಡಂಗ, ಉಪಾಧ್ಯಕ್ಷರಾಗಿ ಎಂ.ಎ. ಶಫೀಕ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಚೋಕಂಡಳ್ಳಿ, ಕಾರ್ಯದರ್ಶಿಯಾಗಿ ಕೆ.ಹೆಚ್. ಶೈಫುದ್ದೀನ್ ಹಾಗೂ ಕೋಶಾಧಿಕಾರಿಯಾಗಿ ಟಿ.ಹೆಚ್. ರಫೀಕ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟಿçÃಯ ಕಾರ್ಯದರ್ಶಿ ಅಬ್ದುಲ್ ರಹೀಮ್ ಉಪಸ್ಥಿತರಿದ್ದರು.