ಮಡಿಕೇರಿ, ಏ. ೯: ಮಕ್ಕಂದೂರು ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ತಾ. ೨ ರಿಂದ ಆರಂಭವಾಗಿರುವ ಉತ್ಸವದ ಅಂಗವಾಗಿ ತಾ. ೧೦ ರಂದು (ಇಂದು) ಮಹಾದೇವರ ದೊಡ್ಡಹಬ್ಬ ನಡೆಯಲಿದೆ.
ತಾ. ೧೧ ರಂದು ಶ್ರೀ ಭದ್ರಕಾಳೇಶ್ವರಿ ದೇವರ ದೊಡ್ಡಹಬ್ಬ ನಡೆಯಲಿದ್ದು, ಅಂದು ಕೂಡಿಯಾಟ, ಅಂಗೋಲ ಪೊಂಗೋಲ, ಕೊಂಬಾಟ್ ಚೌಲಿಯಾಟ್, ಪೀಲಿಯಾಟ್, ಬೊಳ್‌ಕಾಟ್, ದೇವರಿಗೆ ಹರಕೆ-ಕಾಣಿಕೆ ಹಾಕುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಕಾಳೆ ಓಡಿಸುವುದು ಇರಲಿದೆ.