ಮಡಿಕೇರಿ, ಏ. ೮: ಮೇಲಣಗವಿ ವೀರ ಸಿಂಹಾಸನ ಸಂಸ್ಥಾನ ಮಠ ಶಿವಗಂಗ ಕ್ಷೇತ್ರ ನೆಲಮಂಗಲ ಕೊಡಮಾಡುವ "ಶಿವಗಂಗ ಶ್ರೀ" ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಜಗದ್ಗುರು ರೇಣುಕಾಚಾರ್ಯ ಜಯಂತಿಯ ಪ್ರಯುಕ್ತ ಕೊಡಗಿನ ಮಿಲನ ಭರತ್ ಅವರನ್ನು ಸನ್ಮಾನಿಸಲಾಯಿತು.

ಚಲನಚಿತ್ರ ನಟ ಸುದೀಪ್ ಅವರಿಗೆ ಈ ವರ್ಷದ "ಶಿವಗಂಗಾ ಶ್ರೀ" ಪ್ರಶಸ್ತಿ ನೀಡಿದ್ದು, ಇದೇ ಸಂದರ್ಭದಲ್ಲಿ ಮಿಲನ ಭರತ್ ಮತ್ತು ಚಲನಚಿತ್ರ ಸಾಹಿತಿ ಡಾ. ನಾಗೇಂದ್ರಪ್ರಸಾದ್ ಇವರನ್ನು ಪಟ್ಟದ ಶ್ರೀ ಡಾ. ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿಗಳು ಸನ್ಮಾನಿಸಿದರು. ಜಿಲ್ಲೆಯವರಾಗಿರುವ ಮಿಲನ ಭರತ್ ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.