ಮಡಿಕೇರಿ, ಏ. ೮: ಮಡಿಕೇರಿ ನಗರಸಭೆಗೆ ಸುದೀರ್ಘ ಎರಡು ವರ್ಷಗಳ ಅಂತರದ ಬಳಿಕ ಇದೀಗ ಚುನಾವಣೆ ಎದುರಾಗಿದೆ. ಈ ಚುನಾವಣೆಗೆ ಸಂಬAಧಿಸಿದAತೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಇದೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ಪಕ್ಷದ ಚಿಹ್ನೆಯಡಿಯಲ್ಲಿ ನಡೆಯುವ ಮತ ಸಮರ ಇದಾಗಿರುವುದರಿಂದ ಪಕ್ಷಗಳಲ್ಲಿಯೂ ಸಂಚಲನ ಮೂಡಿದೆ.ನಗರದ ೨೩ ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತ ಹಿಡಿಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ಇದು ಪ್ರತಿಷ್ಠೆಯಾಗಿದ್ದು, ಜಯ ಗಳಿಸುವ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಕುತೂಹಲ ಸೃಷ್ಟಿಸಿದೆ. ಆಯಾ ಪಕ್ಷಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಒಂದು ಸವಾಲೂ ಆಗಿದೆ. ಎಲ್ಲವನ್ನೂ ಶಮನಗೊಳಿಸಿ ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಮುಖಂಡರಿಗೆ ಪ್ರಯಾಸಕರವೆನಿಸಿದ್ದು, ನಗರದ ಜನತೆಯೂ ಹುರಿಯಾಳುಗಳ ಬಗ್ಗೆ ಕೌತುಕ ಹೊಂದಿದ್ದಾರೆ. ಎಲ್ಲೆಲ್ಲೂ ರಾಜಕೀಯವಾದ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿದ್ದು, ಚುನಾವಣೆ ನಂತರದ ಫಲಿತಾಂಶಕ್ಕಿAತ ಯಾವ ಯಾವ ವಾರ್ಡ್ಗಳಲ್ಲಿ ಯಾವ ಯಾವ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲವೇ ಸದ್ಯದ ಬೆಳವಣಿಗೆ ಎಂಬAತಾಗಿದೆ. ಅದರಲ್ಲೂ ಪ್ರಮುಖವಾಗಿ ಈ ಬೆಳವಣಿಗೆ ಕಂಡುಬರುತ್ತಿರುವುದು ಪ್ರಬಲ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಎಂಬುದು ವಾಸ್ತವ. ಇವುಗಳಿಗೆ ಸಡ್ಡು ಹೊಡೆಯಲು ಜೆಡಿಎಸ್ ಕೂಡ ತಯಾರಿಯಲ್ಲಿದೆ. ಕೆಲವೇ ವಾರ್ಡ್ಗಳಲ್ಲಿ ಸ್ಪರ್ಧಿಸಿದರೂ, ಕಳೆದ ಬಾರಿಯ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಸ್.ಡಿ.ಪಿ.ಐ. ಕೂಡ ಮತ್ತೊಂದೆಡೆಯಿAದ ತೊಡೆತಟ್ಟಿದೆ. ಎಸ್.ಡಿ.ಪಿ.ಐ. ಪಕ್ಷ ಈಗಾಗಲೇ ಪ್ರಥಮ ಹಂತವಾಗಿ ೮ ವಾರ್ಡ್ಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇನ್ನು ಜೆಡಿಎಸ್ ಪಕ್ಷವೂ ಎಲ್ಲಾ ೨೩ ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಹೇಳಿದ್ದರೂ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ಈ ಪಕ್ಷದ ಹುರಿಯಾಳುಗಳ ಆಯ್ಕೆ ಜೆಡಿಎಸ್ ಪ್ರಮುಖರಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ಗಿAತ ಸುಲಲಿತ ಎನ್ನಬಹುದು. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಬಹುತೇಕ ಪೂರ್ಣವಾಗಿದೆ. ತಾ. ೧೨ರಂದು ಒಂದು ತಂಡ ಹಾಗೂ ತಾ. ೧೫ರಂದು ಮತ್ತೊಂದು ತಂಡ ನಾಮಪತ್ರ ಸಲ್ಲಿಸಲಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.
ಬಿಜೆಪಿ - ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆ
ಪ್ರಸ್ತುತ ಹೆಚ್ಚು ಸವಾಲು ಹೊಂದಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಾಗಿವೆ. ಈ ಎರಡೂ ಪಕ್ಷಗಳಲ್ಲಿ ಬಹುತೇಕ ವಾರ್ಡ್ಗಳಿಗೆ ಹಲವು ಮಂದಿ ಪ್ರಬಲ ಆಕಾಂಕ್ಷಿಗಳಾಗಿರುವುದರಿAದ ಆಯ್ಕೆ ಅಂತಿಮಗೊಳಿಸುವುದು ಈ ಪಕ್ಷಗಳ ಮುಖಂಡರಿಗೆ ‘ಕಬ್ಬಿಣದ ಕಡಲೆ’ಯಂತಾಗಿದೆ. ಈ ಕಾರಣದಿಂದಾಗಿ ಎರಡೂ ಪಕ್ಷಗಳಲ್ಲಿನ ಗುಟ್ಟು ಇನ್ನೂ ಬಯಲಾಗುತ್ತಿಲ್ಲ. ಬಿಜೆಪಿಯಲ್ಲಿ ತಾ.೯ರಂದು (ಇಂದು) ಅಥವಾ ನಾಡಿದ್ದು, ಕೆಲವು ವಾರ್ಡ್ನ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ ಎನ್ನಲಾಗಿದೆ. ಆದರೆ ಇನ್ನು ಕೆಲವು ವಾರ್ಡ್ಗಳ ಆಯ್ಕೆ ಬಹುಶಃ ನಾಮಪತ್ರ ಸಲ್ಲಿಕೆಯ ಅಂತಿಮ ದಿನದವರೆಗೂ ಮುಂದೂಡಲ್ಪಡುವ ಸಾಧ್ಯತೆ ಕಂಡುಬAದಿದೆ. ಕಾಂಗ್ರೆಸ್ ಪಕ್ಷದಲ್ಲೂ ಬಹುತೇಕ ಇದೇ ಪರಿಸ್ಥಿತಿ ಇದೆ. ಇದೇ ಕಾರಣದಿಂದಾಗಿ ಅಭ್ಯರ್ಥಿಗಳ ಆಯ್ಕೆಗೆ ಸಂಬAಧಿಸಿದAತೆ ಪಕ್ಷದ ವೀಕ್ಷಕರ ತಂಡ ಶನಿವಾರ - ಭಾನುವಾರದಂದು ಆಗಮಿಸಿ ಕಸರತ್ತು ನಡೆಸಲಿದೆ ಎಂದು ತಿಳಿದುಬಂದಿದೆ.
(ಮೊದಲ ಪುಟದಿಂದ) ಈಗಾಗಲೇ ಪಕ್ಷದ ಮೂಲಕ ಆಸಕ್ತ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸ ಲಾಗಿದ್ದು, ಪ್ರತಿ ವಾರ್ಡ್ಗೂ ಹೆಚ್ಚು ಮಂದಿ ಇದ್ದಾರೆ. ಇವರ ಪೈಕಿ ಓರ್ವ ಅಭ್ಯರ್ಥಿಯನ್ನು ಅಖೈರುಗೊಳಿಸಿ ಇತರ ಆಸಕ್ತರನ್ನು ಸಮಾಧಾನಿ ಸುವುದು ಎರಡೂ ಪಕ್ಷಗಳಿಗೆ ಪ್ರಬಲ ಸವಾಲಾಗಿದೆ. ಈ ಎರಡು ಪಕ್ಷಗಳಲ್ಲೂ ಕೆಲವು ವಾರ್ಡ್ಗಳಲ್ಲಿ ಬಂಡಾಯ ಸ್ಪರ್ಧೆಯ ಮಾತೂ ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಿ ಜಿಲ್ಲಾ ಪ್ರಮುಖರಲ್ಲದೆ ರಾಜ್ಯದ ಪ್ರಮುಖರೂ ಕೈಯಾಡಿಸು ವಂತಾಗಿದ್ದರೆ, ಬಿಜೆಪಿಯಲ್ಲಿ ಸಂಘ - ಪರಿವಾರ ಪ್ರಮುಖ ಪಾತ್ರ ವಹಿಸಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಮತ ಸಮರದ ಬಳಿಕದ ಫಲಿತಾಂಶಕ್ಕಿAತ ಇದೀಗ ಯಾವ ವಾರ್ಡ್ಗಳಲ್ಲಿ ಯರ‍್ಯಾರು ಎದುರಾಳಿಗಳಾಗಲಿದ್ದಾರೆ! ಯಾರ ಸ್ಪರ್ಧೆಯಿಂದ ಯಾರಿಗೆ ಲಾಭ - ನಷ್ಟ ಎಂಬ ಕುತೂಹಲವೇ ಸದ್ಯದ ಬೆಳವಣಿಗೆಯಾಗಿದೆ. ಕೆಲವೊಂದು ವಾರ್ಡ್ಗಳಲ್ಲಿ ಇನ್ನೂ ಟಿಕೆಟ್ ಅಂತಿಮವಾಗದಿದ್ದರೂ, ಕೆಲವು ಆಸಕ್ತರು ಈಗಾಗಲೇ ಪ್ರಚಾರ ನಡೆಸುತ್ತಿರುವುದೂ ಕಂಡು ಬರುತ್ತಿದೆ.