ಚೆಟ್ಟಳ್ಳಿ, ಏ. ೮: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಜಿಲ್ಲೆಯ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಸಹಯೋಗದಲ್ಲಿ ಕೊಡಗು ಜಿಲ್ಲಾಮಟ್ಟದ ೧೬ ತಂಡಗಳ ಫುಟ್ಬಾಲ್ ಲೀಗ್ ಪಂದ್ಯಾಟ ತಾ. ೧೦ ರಿಂದ (ನಾಳೆಯಿಂದ) ತಾ. ೨೫ರ ವರೆಗೆ ವಾರಾಂತ್ಯದಲ್ಲಿ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಹಾಗೂ ಲೀಗ್ ಪಂದ್ಯಾವಳಿಯ ಉಸ್ತುವಾರಿ ಮಿಲನ್ಸ್ ಕ್ಲಬ್‌ನ ಲಿಜೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ದಿನದಂದು ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ-ಬಿ.ವೈ.ಸಿ. ಹಾಲುಗುಂದ, ರೋಜಾರಿಯನ್ಸ್ ಎಫ್.ಸಿ. ಗೋಣಿಕೊಪ್ಪ-ವೈಷ್ಣವಿ ಎಫ್.ಸಿ. ಮರಗೋಡು, ಶೈನಿಂಗ್ ಬರ್ಡ್ಸ್ ಪಾಲಿಬೆಟ್ಟ-ಚೌಡೇಶ್ವರಿ ಎಫ್.ಸಿ. ಅಮ್ಮತ್ತಿ, ಯೂನಿವರ್ಸಲ್ ಎಫ್.ಸಿ., ರಂಗಸಮುದ್ರ-ಎನ್.ವೈ.ಸಿ., ಕೊಡಗರಹಳ್ಳಿ, ಆಕ್ಸ್ಫರ್ಡ್ ವೀರಾಜಪೇಟೆ-ಐ.ಎನ್.ಎಸ್. ಗುಡ್ಡೆಹೊಸೂರು, ಸಹರಾ ಸಿ.ವೈ.ಸಿ. ಒಂಟಿಯAಗಡಿ-ಅಮಿಟಿ ಎಫ್.ಸಿ. ಗದ್ದೆಹಳ್ಳ ನಡುವೆ ಪಂದ್ಯಾಟ ನಡೆಯಲಿದೆ.