ಗುಡ್ಡೆಹೊಸೂರು, ಏ. ೮: ಇಲ್ಲಿನ ಸರಕಾರಿ ಶಾಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ೧೪೧ನೇ ಸ್ಕೂಲ್ ಬೆಲ್ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾ ಗಿದ್ದು, ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವುದೇ ಈ ಸ್ಕೂಲ್ ಬೆಲ್ ಕಾರ್ಯಕ್ರಮದ ಉದ್ದೇಶವಾಗಿದೆ. ಬೆಂಗಳೂರು ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು ೬೫ ಮಂದಿ ಎ.ಬಿ.ವಿ.ಪಿ.ಯ ತಂಡ ಗುಡ್ಡೆಹೊಸೂರು ಶಾಲೆಯ ಇಡೀ ಕಟ್ಟಡದ ಚಿತ್ರಣವನ್ನೆ ಬದಲಾಯಿಸಿದೆ.
ತರಗತಿಯೊಳಗಿನ ಗೋಡೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬAಧಿಸಿದ ಚಿತ್ರಗಳು ಮತ್ತು ಹೊರಭಾಗದಲ್ಲಿ ದೇಶಭಕ್ತರ, ವಿವಿಧ ವಿದ್ವಾಂಸರ ಕಲಾಕೃತಿಗಳನ್ನು ಚಿತ್ರಿಸಲಾಗಿದೆ.
ಕಾರ್ಯಕ್ರಮದ ಸಮಾರೋಪ ಕಟ್ಟಡದ ಚಿತ್ರಣವನ್ನೆ ಬದಲಾಯಿಸಿದೆ.
ತರಗತಿಯೊಳಗಿನ ಗೋಡೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬAಧಿಸಿದ ಚಿತ್ರಗಳು ಮತ್ತು ಹೊರಭಾಗದಲ್ಲಿ ದೇಶಭಕ್ತರ, ವಿವಿಧ ವಿದ್ವಾಂಸರ ಕಲಾಕೃತಿಗಳನ್ನು ಚಿತ್ರಿಸಲಾಗಿದೆ.
ಕಾರ್ಯಕ್ರಮದ ಸಮಾರೋಪ ಸಂಘಟನಾ ಕಾರ್ಯದರ್ಶಿ ವಿರೇಶ್ ಅಜ್ಜಣ್ಣನವರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಪರಮೇಶ್, ಗ್ರಾ.ಪಂ. ಸದಸ್ಯ ಕುಡೆಕ್ಕಲ್ ನಿತ್ಯ, ಆರ್.ಎಸ್.ಎಸ್. ಪ್ರಮುಖ ರಮೇಶ್ ಬೊಟ್ಟುಮನೆ, ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ, ಶಿಕ್ಷಕ ವೃಂದ ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಮ್ಮ ಸಂಘಟನೆಯಿAದ ಮಾಡುತ್ತಿರುವ ಕಾರ್ಯದಿಂದ ಬೇರೆ ಸಂಘಟನೆಗಳಿಗೆ ಪ್ರೇರಣೆಯಾಗಲಿ ಎಂದು ವೇದಿಕೆಯಲ್ಲಿ ಹಾಜರಿದ್ದ ಮಂಗಳೂರು ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ಬಸವೇಶ್ ಅವರು ತಿಳಿಸಿದರು. -ಗಣೇಶ್ ಕುಡೆಕ್ಕಲ್