ನಾಪೋಕ್ಲು, ಏ. ೮: ಗ್ರಾಮ ಪಂಚಾಯಿತಿಗೆ ಒಳಪಟ್ಟ ಪಶ್ಚಿಮ ಕೊಳಕೇರಿಯ ವಾರ್ಡ್ ಸಭೆಯು ಮೂಟೇರಿ ಸಮುದಾಯ ಭವನದಲ್ಲಿ ತಾ. ೯ರಂದು (ಇಂದು) ೪.೩೦ ಗಂಟೆಗೆ ಕೆ.ಸಿ. ತಿಮ್ಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಾಪೋಕ್ಲು ನಗರದ ವಾರ್ಡ್ ಸಭೆಯು ತಾ.೧೨ ರಂದು ೧೧ಗಂಟೆಗೆ ಇಂದಿರಾ ನಗರ ಸಮುದಾಯ ಭವನದಲ್ಲಿ ಉಪಾಧ್ಯಕ್ಷ ಮಹಮ್ಮದ್ ಖುರೇಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ೨.೩೦ ಗಂಟೆಗೆ ಕೊಳಕೇರಿಪೇಟೆ ಭವನದಲ್ಲಿ, ನಾಪೋಕ್ಲು ಗ್ರಾಮದ ವಾರ್ಡ್ ಸಭೆ ೧೫ ರಂದು ಗುರುವಾರ ಭಗವತಿ ಸಮುದಾಯ ಭವನದಲ್ಲಿ ೧೧ ಗಂಟೆಗೆ ಮತ್ತು ಬೇತು ಗ್ರಾಮದ ವಾರ್ಡ್ ಸಭೆಯು ಬೇತು ದವಸ ಬಂಡಾರದಲ್ಲಿ ತಾ.೧೬ ರ ಶುಕ್ರವಾರ ೧೧.೦೦ ಗಂಟೆಗೆ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ.