ಸಿದ್ದಾಪುರ, ಏ. ೮: ಮಾಲ್ದಾರೆ ಜನಪರ ಸಂಘದ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಾಲಿಬಾಲ್ ಅಂತಿಮ ಪಂದ್ಯಾವಳಿ ಯಲ್ಲಿ ಗೋಣಿಕೊಪ್ಪ ಸಿಸಿಜಿ ತಂಡ ಗೆಲುವು ಸಾಧಿಸುವ ಮೂಲಕ ಜನಪರ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಎAವೈಸಿ ನಾಪೋಕ್ಲು ತಂಡ ದ್ವಿತೀಯ ಹಾಗೂ ಟೆ.ಕೆ. ತಂಡ ತೃತೀಯ ಸ್ಥಾನದ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರೊಂದಿಗೆ ಬೆಸ್ಟ್ ಪ್ಲೇಯರ್ ಆದಿಲ್, ಬೆಸ್ಟ್ ಡಿಫೆಂಡರ್ ಹಮೀದ್, ಬೆಸ್ಟ್ ಬ್ಲಾಕರ್ ಪ್ರಜು, ಬೆಸ್ಟ್ ಸ್ಮಾö್ಯಶರ್ ಅರ್ಪತ್, ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಚಿನ್ನು ಪಡೆದುಕೊಂಡರು. ಜಿಲ್ಲೆಯ ನಾನಾ ಭಾಗಗಳಿಂದ ಸುಮಾರು ೧೭ ತಂಡಗಳು ಭಾಗವಹಿಸಿದ್ದವು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ರಾಷ್ಟç ಮಟ್ಟದ ಎಂ.ಎA. ಇಂಡಿಯನ್ ಫೈಟರ್ ಕ್ಲಿಂಟನ್ ಡಿಕ್ರೂಜ್, ಸಮಾಜ ಸೇವಕ ಪಡೆದುಕೊಂಡರು. ಜಿಲ್ಲೆಯ ನಾನಾ ಭಾಗಗಳಿಂದ ಸುಮಾರು ೧೭ ತಂಡಗಳು ಭಾಗವಹಿಸಿದ್ದವು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ರಾಷ್ಟç ಮಟ್ಟದ ಎಂ.ಎA. ಇಂಡಿಯನ್ ಫೈಟರ್ ಕ್ಲಿಂಟನ್ ಡಿಕ್ರೂಜ್, ಸಮಾಜ ಸೇವಕ ಸಹನಾ, ಚೇತನ್ ಕುಮಾರ್, ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಮಾಲ್ದಾರೆ ಜನಪರ ಸಂಘದ ಆಂಟೋನಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂರ‍್ರಾಷ್ಟಿçÃಯ ಕ್ರೀಡಾಪಟು ಕ್ಲಿಂಟನ್ ಡಿಕ್ರೂಜ್, ಗ್ರಾ.ಪಂ. ಅಧ್ಯಕ್ಷ ಸಮೀರ್, ಮುತ್ತಪ್ಪ ಚಂಡಮೇಳ ಸಮಿತಿಯ ಅಧ್ಯಕ್ಷ ಶಾಜಿ, ಕೆಸಿಎಲ್ ಸಮಿತಿಯ ಪ್ರಮುಖ ಎಂ.ಎ ಅಜೀಜ್, ಬೆಳೆಗಾರರಾದ ಚುಮ್ಮಿಪೂವಯ್ಯ, ಕುಕ್ಕುನೂರು ಪ್ರಕಾಶ್, ಕವಿತಾ ಪ್ರಕಾಶ್, ಪ್ರಮುಖರಾದ ಜೆ.ಕೆ. ಅಪ್ಪಾಜಿ, ಕಲಾವಿದ ಬಾವ ಮಾಲ್ದಾರೆ, ವರ್ಗೀಸ್, ಮಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.